BIG NEWS: ರಾಜ್ಯದಲ್ಲಿ 6.13 ಕೋಟಿ ಜನರ ಸಮೀಕ್ಷೆ ಪೂರ್ಣ, ಮಾಹಿತಿ ನೀಡಲು 4.22 ಲಕ್ಷ ಕುಟುಂಬ ನಿರಾಕರಣೆ

ಬೆಂಗಳೂರು: ಕರ್ನಾಟಕ ರಾಜ್ಯ ಹಿಂದುಳಿದ ವರ್ಗಗಳ ಆಯೋಗದ ವತಿಯಿಂದ ಕಳೆದ ಸೆಪ್ಟಂಬರ್ 22 ರಿಂದ ನಡೆಸಲಾಗುತ್ತಿದ್ದ ಸಾಮಾಜಿಕ, ಶೈಕ್ಷಣಿಕ ಸಮೀಕ್ಷೆ ಶುಕ್ರವಾರ ಮುಕ್ತಾಯವಾಗಿದೆ.

6.13.83.908 ಜನರ ಮಾಹಿತಿಯನ್ನು ಸಂಗ್ರಹಿಸಲಾಗಿದೆ. 2025ಕ್ಕೆ ರಾಜ್ಯದಲ್ಲಿ 6,85,38,000 ಜನರು ಇರಬಹುದೆಂದು ಆಯೋಗ ಅಂದಾಜಿಸಿತ್ತು. ಆದರೆ 6.13 ಕೋಟಿ ಜನ ಮಾತ್ರ ಮಾಹಿತಿ ನೀಡಿದ್ದಾರೆ. 4.22 ಕುಟುಂಬಗಳು ಮಾಹಿತಿ ನೀಡಲು ನಿರಾಕರಿಸಿವೆ.

34,49,681 ಮನೆಗಳು ಖಾಲಿ ಇಲ್ಲವೇ ಬೀಗ ಹಾಕಿದ್ದರಿಂದ ಸಮೀಕ್ಷೆ ಮಾಡಿಲ್ಲ. ಮನೆ ಮನೆ ಸಮೀಕ್ಷೆ ಶುಕ್ರವಾರ ಮುಕ್ತಾಯವಾಗಿದೆ.

ಕರ್ನಾಟಕ ರಾಜ್ಯದ ಹಿಂದುಳಿದ ವರ್ಗಗಳ ಆಯೋಗದ ವತಿಯಿಂದ ನಡೆಸುತ್ತಿರುವ ಸಾಮಾಜಿಕ ಮತ್ತು ಶೈಕ್ಷಣಿಕ ಸಮೀಕ್ಷೆಯನ್ನು ದಿನಾಂಕ:22-09-2025 ರಂದು ಪ್ರಾರಂಭಿಸಲಾಗಿದ್ದು, ದಿನಾಂಕ:31-10-2025 ರಂದು ಮುಕ್ತಾಯಗೊಂಡಿದ್ದು, ವಿವಿಧ ಕಾರಣಗಳಿಂದಾಗಿ ಸಮೀಕ್ಷೆಯಲ್ಲಿ ಭಾಗವಹಿಸಲು ಸಾಧ್ಯವಾಗದೇ ಇರುವವರಿಗೆ Online Website: https://kscbcselfdeclaration.karnataka.gov.in ಮೂಲಕ ಸಮೀಕ್ಷೆಯಲ್ಲಿ ಸ್ವಯಂ ಪಾಲ್ಗೊಳ್ಳುವ ಅವಧಿಯನ್ನು ನ.10 ರವರೆಗೆ ಅಂತಿಮವಾಗಿ ವಿಸ್ತರಿಸಲಾಗಿದೆ.

Share This Article

Latest News

ಬಸನಗೌಡ ಪಾಟೀಲ್ ಯತ್ನಾಳ್ ಉಚ್ಚಾಟನೆಯಿಂದ ಬಿಜೆಪಿಗೆ ಹಿನ್ನಡೆಯಾಗುತ್ತದಾ ?

View Results

Loading ... Loading ...

Most Read