BIG NEWS : ರಾಜ್ಯ ಸರ್ಕಾರದಿಂದ 5 ಮಹತ್ವದ ಮಸೂದೆ ಮಂಡನೆ

ಬೆಂಗಳೂರು :  ನ್ಯಾಯವಾದಿಗಳ ಮೇಲೆ ದೌರ್ಜನ್ಯ, ಹಲ್ಲೆ, ಹಿಂಸಾಚಾರಗಳನ್ನು ತಡೆಯುವ ಹಾಗೂ ಶಿಕ್ಷೆ ವಿಧಿಸುವ ‘ನ್ಯಾಯವಾದಿಗಳ ಮೇಲೆ ಹಿಂಸಾಚಾರ ನಿಷೇಧ ವಿಧೇಯಕ ಸೇರಿ ಐದು ಮಹತ್ವದ ಮಸೂದೆಗಳನ್ನು ವಿಧಾನಸಭೆಯಲ್ಲಿ ಮಂಡಿಸಲಾಗಿದೆ.

ಸವದತ್ತಿಯ ಶ್ರೀ ರೇಣುಕಾ ಯಲ್ಲಮ್ಮ ದೇವಸ್ಥಾನದರಕ್ಷಣೆ, ಅಭಿವೃದ್ಧಿಗೆಶ್ರೀರೇಣುಕಾ ಯಲ್ಲಮ್ಮ ಪ್ರವಾಸೋದ್ಯಮ ಅಭಿವೃದ್ಧಿ ಮಂಡಳಿ ವಿಧೇಯಕ, ಪ್ರವಾಸೋದ್ಯಮ ಇಲಾಖೆ ರೇಣುಕಾ ಯಲ್ಲಮ್ಮ ಪ್ರವಾಸೋದ್ಯಮ ಅಭಿವೃದ್ಧಿ ಮಂಡಳಿ ವಿಧೇಯಕ ಮಂಡಿಸಲಾಗಿದೆ.

ಬಳ್ಳಾರಿ ಜಿಲ್ಲೆ ಬದಲಾಗಿ ವಿಜಯನಗರ ಜಿಲ್ಲೆ ಎಂಬ ಪದ ಬಳಸಲಾಗುವ ಉದ್ದೇಶದಿಂದ ಹಂಪಿ ವಿಶ್ವ ಪರಂಪರೆ ಪ್ರದೇಶ ನಿರ್ವಹಣಾ ಪ್ರಾಧಿಕಾರ (ತಿದ್ದುಪಡಿ) ವಿಧೇಯಕ, ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ ಹಾಗೂ ಇತರೆ ಕಾನೂನು (ತಿದ್ದುಪಡಿ) ವಿಧೇಯಕವನ್ನೂ ಮಂಡಿಸಲಾಗಿದೆ.

ಕರ್ನಾಟಕ ಸ್ಟಾಂಪುಗಳ 1957ರ ಮೇರೆಗೆ ಮಾರ್ಗಸೂಚಿ ಮೌಲ್ಯಗಳಿಗೆ ಉಪಕರದ ಪ್ರಮಾಣ ಪರಿ ಶೀಲನಾ ಶುಲ್ಕ ಇತ್ಯಾದಿಗಳನ್ನು ನಿರ್ಧಿಷ್ಟಪಡಿ ಸಲು ಮತ್ತು ಹಿಂದೆ ಉಪಕರ ಪರಿಶೀಲನಾ ಶುಲ್ಕ ಇತ್ಯಾದಿಗಳನ್ನು ಸಂಗ್ರಹಿಸಲು ಸಿಂದು ಗೊಳಿಸಲು ಈ ವಿಧೇಯಕ ಮಂಡನೆ ಮಾಡಲಾಗಿದೆ.

ಕರ್ನಾಟಕ ಅನುಸೂಚಿತ ಜಾತಿಗಳ ಉಪ ಹಂಚಿಕೆ ಮತ್ತು ಬುಡಕಟ್ಟು ಉಪಹಂಚಿಕೆ (ತಿದ್ದುಪಡಿ) ವಿಧೇಯಕವನ್ನು ಮಂಡಿಸಲಾಯಿತು. ಇದರನ್ವಯ ಎಸ್ಸಿಎಸ್ಟಿ ಅಭಿವೃದ್ಧಿ ಪರಿಷತ್‌ಗೆ ಉಪಮುಖ್ಯಮಂತ್ರಿ ಹಾಗೂ ಬುಡಕಟ್ಟು ಕಲ್ಯಾಣ ಮಂತ್ರಿಗಳನ್ನು ಪದನಿ ಮಿತ್ತ ಸದಸ್ಯರನ್ನಾಗಿ ಸೇರಿಸಲು ಹಾಗೂ ಬುಡಕಟ್ಟು ಕಲ್ಯಾಣಮಂತ್ರಿಗಳನ್ನು ಅನು ಸೂಚಿತ ಜಾತಿಗಳ/ಬುಡಕಟ್ಟು ಉಪಹಂಚಿಕೆಗೆ ನೋಡಲ್‌ ಏಜೆನ್ಸಿಗೆ ಉಪಾಧ್ಯಕ್ಷರನ್ನಾಗಿ ಸೇರಿ ಸಲು ವಿಧೇಯಕ ಮಂಡಿಸಲಾಗಿದೆ.

Share This Article

Latest News

ಬಸನಗೌಡ ಪಾಟೀಲ್ ಯತ್ನಾಳ್ ಉಚ್ಚಾಟನೆಯಿಂದ ಬಿಜೆಪಿಗೆ ಹಿನ್ನಡೆಯಾಗುತ್ತದಾ ?

View Results

Loading ... Loading ...

Most Read