ಬೆಂಗಳೂರು : ‘SSLC’ ವಿದ್ಯಾರ್ಥಿಗಳ ಜೀವನದ ಪ್ರಮುಖ ಘಟ್ಟ . ವಿದ್ಯಾರ್ಥಿಗಳು ಬಹು ನಿರೀಕ್ಷೆಯಿಂದ ಕಾಯುತ್ತಿದ್ದ ಫಲಿತಾಂಶ ಇಂದು ಪ್ರಕಟವಾಗಿದೆ.
SSLC ಪಾಸಾದ ವಿದ್ಯಾರ್ಥಿಗಳು ಯಾವ ಕೋರ್ಸ್ ಆಯ್ಕೆ ಮಾಡಬಹುದು, ಯಾವ ಕೋರ್ಸ್ ಆಯ್ಕೆ ಮಾಡಿದರೆ ಉತ್ತಮ . ಯಾವೆಲ್ಲಾ ಕೋರ್ಸ್ ಗಳು ಲಭ್ಯವಿದೆ. ಇಲ್ಲಿದೆ ನೋಡಿ ಸಂಪೂರ್ಣ ಮಾಹಿತಿ.
ಪಿಯುಸಿ ಶಿಕ್ಷಣದಲ್ಲಿ ಕಲೆ( ARTS) ಯನ್ನು ಆಯ್ದುಕೊಂಡರೆ ಭವಿಷ್ಯದಲ್ಲಿ ಶಿಕ್ಷಕರು, ಬರಹಗಾರರು, ಪತ್ರಿಕೋದ್ಯಮ ಕ್ಷೇತ್ರ, ಸಾಹಿತ್ಯ, ಲಲಿತಕಲೆ, ರಾಜಕೀಯ ಕ್ಷೇತ್ರ, ಅರ್ಥಶಾಸ್ತ್ರ ವಿಷಯಗಳಿಗೆ ಸಂಬಂಧಿಸಿದ ಕ್ಷೇತ್ರದಲ್ಲಿ ಕೆಲಸ ನಿರ್ವಹಿಸಬಹುದು. ನೀವು ಕಾಮರ್ಸ್ (COMMERCE) ಆಯ್ಕೆ ಮಾಡಿದರೆ ಬ್ಯಾಂಕಿಂಗ್, ವಿವಿಧ ಕಂಪನಿಗಳಲ್ಲಿ ಕೆಲಸ ಗಿಟ್ಟಿಸಿಕೊಳ್ಳಬಹುದು. ವಿಜ್ಞಾನ (SCIENCE) ಕ್ಷೇತ್ರ ಆಯ್ಕೆ ಮಾಡಿಕೊಂಡರೆ ಡಾಕ್ಟರ್, ಎಂಜಿನಿಯರ್ ಆಗಬಹುದು. ಕೃಷಿ ಕ್ಷೇತ್ರದಲ್ಲಿ ಕೆಲಸ ಮಾಡಬಹುದು.
ಹಾಗೂ ವಿದ್ಯಾರ್ಥಿಗಳು ಡಿಪ್ಲೊಮ ಇನ್ ಕಂಪ್ಯೂಟರ್ ಅಪ್ಲಿಕೇಷನ್, ವೆಬ್ ಡಿಸೈನಿಂಗ್ ಸರ್ಟಿಫಿಕೇಟ್ ಕೋರ್ಸ್ಗಳು, ಡಿಜಿಟಲ್ ಮಾರ್ಕೆಟಿಂಗ್, ಡಿಪ್ಲೋಮಾ ಇನ್ 2ಡಿ ಮತ್ತು 3ಡಿ ಎನಿಮೇಷನ್, ಪ್ರೋಗ್ರಾಮಿಂಗ್ ಭಾಷೆಗಳಲ್ಲಿ ಪ್ರಮಾಣಪತ್ರ ಕೋರ್ಸ್ಗಳು(ಜಾವ, ಸಿಸಿ++) ಕೋರ್ಸ್ಗಳನ್ನು ಬೇಡಿಕೆಯ ಪ್ರವೃತ್ತಿಗೆ ಅನುಗುಣವಾಗಿ ನೀಡಲಾಗುತ್ತದೆ.









