ಬೆಂಗಳೂರು : ಏ.17 ರಂದು ರಾಜ್ಯ ಸರ್ಕಾರದ ಮಹತ್ವದ ವಿಶೇಷ ಸಂಪುಟ ಸಭೆ ( Karnataka Cabinet Meeting) ನಿಗದಿಯಾಗಿದೆ.
ಕರ್ನಾಟಕ ರಾಜ್ಯ ಹಿಂದುಳಿದ ವರ್ಗಗಳ ಆಯೋಗವು ಸಲ್ಲಿಸಿರುವ ಸಾಮಾಜಿಕ ಮತ್ತು ಶೈಕ್ಷಣಿಕ ಸಮೀಕ್ಷೆ-2015ರ ದತ್ತಾಂಶಗಳ ಅಧ್ಯಯನ ವರದಿಯನ್ನು ಇಂದು ಸಚಿವ ಸಂಪುಟದಲ್ಲಿ ಮಂಡಿಸಲಾಯಿತು. ಈ ವರದಿ ಕುರಿತು ಚರ್ಚಿಸಲು ದಿನಾಂಕ 17.4.2025 ರಂದು ವಿಶೇಷ ಸಚಿವ ಸಂಪುಟ ಸಭೆಯನ್ನು ಆಯೋಜಿಸಲಾಗಿದೆ ಎಂದು ಕಾನೂನು ಮತ್ತು ಪ್ರವಾಸೋದ್ಯಮ ಸಚಿವರಾದ ಹೆಚ್.ಕೆ ಪಾಟೀಲ್ ಅವರು ತಿಳಿಸಿದ್ದಾರೆ.
https://www.facebook.com/photo.php?fbid=1096097565890511&set=a.363544819145793&type=3&ref=embed_post