BIG NEWS : ಗ್ರಾ.ಪಂ ಉಪಚುನಾವಣೆ ನಡೆಯುವ ಶಾಲೆಗಳಿಗೆ ನ.23 ರಂದು ರಜೆ ಘೋಷಣೆ |School Holiday

ಶಿವಮೊಗ್ಗ : ನ.23 ರಂದು ನಗರ ಸ್ಥಳೀಯ ಸಂಸ್ಥೆಗಳಲ್ಲಿ ಹಾಗೂ ಗ್ರಾಮ ಪಂಚಾಯಿತಿಗಳಲ್ಲಿ ವಿವಿಧ ಕಾರಣಗಳಿಂದ ತೆರವಾಗಿರುವ ಸದಸ್ಯ ಸ್ಥಾನಗಳಿಗೆ ಉಪ ಚುನಾವಣೆ ನಡೆಸಲಾಗುತ್ತಿದ್ದು, ಚುನಾವಣಾ ಕ್ಷೇತ್ರಗಳಲ್ಲಿನ ಮತದಾನ ಕೇಂದ್ರಗಳು ಬಹುತೇಕ ಶಾಲೆಗಳಾಗಿವೆ. ಮತದಾನದ ಸಮಯದಲ್ಲಿ ಶಾಲಾ ವಿದ್ಯಾರ್ಥಿಗಳು ಹಾಗೂ ಸಾರ್ವಜನಿಕರು ಆಗಮಿಸುವುದರಿಂದ ಜನದಟ್ಟಣೆಯಾಗಿ ಮತದಾನದ ಮೇಲೆ ಪ್ರತಿಕೂಲ ಪರಿಣಾಮ ಬೀರುವ ಹಿನ್ನೆಲೆಯಲ್ಲಿ ಶಿವಮೊಗ್ಗ ಜಿಲ್ಲೆಯ ಮತದಾನ ಕೇಂದ್ರವಿರುವ ಶಾಲೆಗಳಿಗೆ ನ. 23 ರ ಶನಿವಾರದಂದು ರಜೆಯನ್ನು ಘೋಷಿಸಿ ಜಿಲ್ಲಾಧಿಕಾರಿಗಳು ಆದೇಶ ನೀಡಿದ್ದಾರೆ.

ಶಿವಮೊಗ್ಗ ತಾಲೂಕಿನ ದೇವಕಾತಿಕೊಪ್ಪದ ಸ.ಕಿ.ಪ್ರಾ.ಶಾಲೆ ಮತ್ತು ಹೊಳಲೂರು ಅಂಗನವಾಡಿ ಕೇಂದ್ರ ಜನತಾ ಕಾಲೋನಿ. ಭದ್ರಾವತಿ ತಾಲೂಕಿನ ಬಾರಂದೂರು ಸ. ಹಿ.ಪ್ರಾ.ಶಾಲೆ (ಉತ್ತರಭಾಗ). ತೀರ್ಥಹಳ್ಳಿ ತಾಲೂಕಿನ ಕಾಸರವಳ್ಳಿ ಸ.ಹಿ.ಪ್ರಾ.ಶಾಲೆ. ಶಿಕಾರಿಪುರ ತಾಲೂಕಿನ ತರಲಘಟ್ಟ ಸ.ಹಿ.ಪ್ರಾ.ಶಾಲೆ, ಶಿಕಾರಿಪುರದ ಸ.ಉರ್ದು ಹಿ.ಪ್ರಾ.ಶಾಲೆ ಖಾಜಿ ಮೊಹಲ್ಲ ಹಾಗೂ ಶಿರಾಳಕೊಪ್ಪದ ಸ.ಉರ್ದು ಹಿ.ಪ್ರಾ.ಶಾಲೆ ಆಜಾದ್ ವೃತ್ತ. ಸಾಗರ ತಾಲೂಕಿನ ಕುದರೂರು ಸ.ಹಿ.ಪ್ರಾ.ಶಾಲೆ ಕೊ.ಸಂ.1 ಈ ಶಾಲೆಗಳಲ್ಲಿ ನ.23 ರಂದು ರಜೆಯನ್ನು ಘೋಷಿಸಲಾಗಿದೆ ಎಂದು ಜಿಲ್ಲಾಧಿಕಾರಿಗಳ ಆದೇಶದಲ್ಲಿ ತಿಳಿಸಿದೆ.

 

Share This Article

Latest News

ಬಸನಗೌಡ ಪಾಟೀಲ್ ಯತ್ನಾಳ್ ಉಚ್ಚಾಟನೆಯಿಂದ ಬಿಜೆಪಿಗೆ ಹಿನ್ನಡೆಯಾಗುತ್ತದಾ ?

View Results

Loading ... Loading ...

Most Read