BIG NEWS : ರಾಜ್ಯದಲ್ಲಿ ‘ರೇಷನ್ ಕಾರ್ಡ್’ ತಿದ್ದುಪಡಿಗೆ ಜುಲೈ 31 ರವರೆಗೆ ಅವಕಾಶ, ಈ ದಾಖಲೆಗಳು ಕಡ್ಡಾಯ |Ration Card

ಬೆಂಗಳೂರು : ರಾಜ್ಯದಲ್ಲಿ ಪಡಿತರ ಚೀಟಿದಾರರು ರೇಷನ್ ಕಾರ್ಡ್ ತಿದ್ದುಪಡಿ ಮಾಡಿಕೊಳ್ಳುವ ಸಂಬಂಧ ಜು.31 ರವರೆಗೆ ಅವಕಾಶ ನೀಡಲಾಗಿದೆ. ರೇಷನ್ ಕಾರ್ಡ್ ಸೇರ್ಪಡೆ ಹಾಗೂ ಹೊಸ ಸದಸ್ಯರ ಸೇರ್ಪಡೆ ಸಂಬಂಧ ಅರ್ಜಿ ಸಲ್ಲಿಸಲು ಅವಕಾಶ ನೀಡಲಾಗಿದೆ.

ತಿದ್ದುಪಡಿ ಮಾಡಿಕೊಳ್ಳುವವರು ಸಮೀಪದ ಗ್ರಾಮ ಒನ್, ಕರ್ನಾಟಕ ಒನ್ ಕೇಂದ್ರಕ್ಕೆ ಅಗತ್ಯ ದಾಖಲೆಯೊಂದಿಗೆ ತೆರಳಿ ಆನ್ಲೈನ್ ಅರ್ಜಿ ಸಲ್ಲಿಸಿ ತಿದ್ದುಪಡಿ ಮಾಡಿಕೊಳ್ಳಬೇಕು. ಬೆಳಗ್ಗೆ 10ರಿಂದ ಸಂಜೆ 5 ಗಂಟೆಯವರೆಗೆ ತಿದ್ದುಪಡಿಗೆ ಅವಕಾಶ ಕಲ್ಪಿಸಲಾಗಿದೆ.

ರೇಷನ್ ಕಾರ್ಡ್ ನಲ್ಲಿ ಹೆಸರು ಸೇರ್ಪಡೆಗೆ ಆಧಾರ್ ನೊಂದಿಗೆ ಆದಾಯ ಪ್ರಮಾಣ ಪತ್ರ ನೀಡಬೇಕಿದ್ದು, ಆರು ವರ್ಷದೊಳಗಿನ ಮಕ್ಕಳ ಸೇರ್ಪಡೆಗೆ ಮೊಬೈಲ್ ನಂಬರ್ ಜೋಡಣೆಯಾಗಿರುವ ಆಧಾರ ಸಂಖ್ಯೆ ಮತ್ತು ಜನನ ಪ್ರಮಾಣ ಪತ್ರ ಕಡ್ಡಾಯವಾಗಿರುತ್ತದೆ. ಪಡಿತರ ಚೀಟಿ ತಿದ್ದುಪಡಿ ಮಾಡಿರುವವರು ಇತ್ತೀಚಿನ ವಿದ್ಯುತ್ ಬಿಲ್ಲಿನಲ್ಲಿ ನಮೂದಿಸಿರುವ ವಿದ್ಯುತ್ ಮೀಟರ್ ಆರ್ಆರ್ ಸಂಖ್ಯೆ ಮತ್ತು ಲೊಕೇಷನ್ ಕೋಡ್ ನೀಡುವುದು ಕಡ್ಡಾಯ ಮಾಡಲಾಗಿದೆ.

ನಿಮ್ಮ ಪಡಿತರ ಚೀಟಿಯ ಮೂಲ ದಾಖಲೆ ಮತ್ತು ಮಗುವಿನ ಜನನ ಪ್ರಮಾಣಪತ್ರ ಜೊತೆಗೆ ಮಗುವಿನ ಪೋಷಕರ ಆಧಾರ್ ಕಾರ್ಡ್ ಬೇಕಾಗುತ್ತದೆ.ಹೆಂಡತಿಯ ಹೆಸರನ್ನು ಸೇರ್ಪಡೆ ಮಾಡುವಾಗ ಆ ಮಹಿಳೆಯ ಆಧಾರ್ ಮತ್ತು ಗಂಡನ ಮನೆಯ ಪಡಿತರ ಚೀಟಿ ಪ್ರತಿಯನ್ನು ನೀಡಬೇಕಾಗುತ್ತದೆ. ನಿಗದಿಪಡಿಸಿದ ಅವಧಿಯೊಳಗೆ ಕರ್ನಾಟಕ ಒನ್, ಗ್ರಾಮ ಒನ್ ಮತ್ತು ಸೇವಾ ಸಿಂಧು ಕೇಂದ್ರಗಳಲ್ಲಿ ಅರ್ಜಿ ಸಲ್ಲಿಸಬಹುದು ಎಂದು ಆಹಾರ ಮತ್ತು ನಾಗರಿಕ ಸರಬರಾಜು ಇಲಾಖೆ ಪ್ರಕಟಣೆ ತಿಳಿಸಿದೆ. ವಿದ್ಯುತ್ ಬಿಲ್ ದಾಖಲೆ ನೀಡಬೇಕು. ಪಡಿತರ ಚೀಟಿ ತಿದ್ದುಪಡಿ ಮಾಡಿರುವವರು ಇತ್ತೀಚಿನ ವಿದ್ಯುತ್ ಬಿಲ್ಲಿನಲ್ಲಿ ನಮೂದಿಸಿರುವ ವಿದ್ಯುತ್ ಮೀಟರ್ ಆರ್ಆರ್ ಸಂಖ್ಯೆ ಮತ್ತು ಲೊಕೇಷನ್ ಕೋಡ್ ನೀಡುವುದು ಕಡ್ಡಾಯ ಮಾಡಲಾಗಿದೆ.

ಏನೆಲ್ಲಾ ಅಪ್ ಡೇಟ್ ಮಾಡಬಹುದು..?
ವಿಳಾಸ ಬದಲಾವಣೆ,
ಕುಟುಂಬಕ್ಕೆ ಸೇರಿದವರ ಹೆಸರು ತೆಗೆಯುವುದು.
ಫೋಟೋ ಮತ್ತು ಬಯೋಮೆಟ್ರಿಲ್ ಅಪ್ಡೇಟ್,
ಕುಟುಂಬ ಸದಸ್ಯರ ಹೆಸರು ತಿದ್ದುಪಡಿ.
ಮನೆ ಯಜಮಾನರ ಬದಲಾವಣೆ,
ಹೊಸ ಸದಸ್ಯರ ಸೇರ್ಪಡೆ

ಅರ್ಜಿ ಸಲ್ಲಿಕೆಗೆ ಬೇಕಾದ ದಾಖಲೆಗಳು
ಸದಸ್ಯರ ಆಧಾರ ಕಾರ್ಡ್ * ಸದಸ್ಯರ ಜಾತಿ ಮತ್ತು ಆದಾಯ 6 ವರ್ಷ ಮೆಲ್ಪಟ್ಟವರಿಗೆ * ಜನನ ಪ್ರಮಾಣ ಪತ್ರ 6 ವರ್ಷದ ಒಳಗಿನ ಮಕ್ಕಳಿದ್ದರೆ ಪತ್ನಿ ಹೆಸರು ಸೇರ್ಪಡೆಗೆ ಬೇಕಾದ ದಾಖಲೆಗಳು * ಆಧಾರ್ ಕಾರ್ಡ್ * ಮದುವೆ ಪ್ರಮಾಣ ಪತ್ರ * ಪೋಷಕರ ಪಡಿತರ ಚೀಟಿ

Share This Article

Latest News

ಬಸನಗೌಡ ಪಾಟೀಲ್ ಯತ್ನಾಳ್ ಉಚ್ಚಾಟನೆಯಿಂದ ಬಿಜೆಪಿಗೆ ಹಿನ್ನಡೆಯಾಗುತ್ತದಾ ?

View Results

Loading ... Loading ...

Most Read