ಬೆಂಗಳೂರು : ರಾಕಿಂಗ್ ಸ್ಟಾರ್ ಯಶ್ ಅಭಿನಯದ ‘ರಾಮಾಯಣ’ ಚಿತ್ರದ ಟೈಟಲ್ ಗ್ಲಿಂಪ್ಸ್ ನಿನ್ನೆ ರಿಲೀಸ್ ಆಗಿದ್ದು, ಯೂಟ್ಯೂಬ್ ನಲ್ಲಿ ಧೂಳೆಬ್ಬಿಸಿದೆ.
ರಾಮಾಯಣ ಚಿತ್ರದ ಫಸ್ಟ್ ಟೈಟಲ್ ಟೀಸರನ್ನು ಕೋಟ್ಯಾಂತರ ಮಂದಿ ವೀಕ್ಷಿಸಿ ನಟ ಯಶ್ ಗೆ ಆಲ್ ದಿ ಬೆಸ್ಟ್ ಹೇಳಿದ್ದಾರೆ. ಟೀಸರ್ ನೋಡಿದ ಫ್ಯಾನ್ಸ್ ಸಖತ್ ಥ್ರಿಲ್ ಆಗಿದ್ದು, ಸಿನಿಮಾ ಬೇಗ ಬಿಡುಗಡೆ ಮಾಡಿ ಅಂತ ಹೇಳ್ತಿದ್ದಾರೆ.
ರಾಕಿಂಗ್ ಸ್ಟಾರ್ ಯಶ್ ಕನ್ನಡ ಪ್ರೇಮಕ್ಕೆ ಜೈಕಾರ ಹಾಕಿದ ಫ್ಯಾನ್ಸ್
ರಾಕಿಂಗ್ ಸ್ಟಾರ್ ಯಶ್ ಕನ್ನಡ ಪ್ರೇಮವನ್ನು ಕನ್ನಡಿಗರು ಕೊಂಡಾಡಿದ್ದಾರೆ. ಹೌದು. ರಾಮಾಯಣ ಗ್ಲಿಂಪ್ಸ್ ನ ಪೋಸ್ಟರ್ ಗಳಲ್ಲಿ ಸಿನಿಮಾದಲ್ಲಿ ನಟಿಸಿದ ನಟ, ನಟಿಯರು ತಮ್ಮ ಸಹಿ ಹಾಕಿದ್ದಾರೆ.ಅದರಂತೆ ನಟ ಯಶ್ ಕೂಡ ತಮ್ಮ ಸಹಿ ಹಾಕಿದ್ದಾರೆ. ನಟ ರಣಬೀರ್ ಕಪೂರ್, ಸಾಯಿ ಪಲ್ಲವಿ, ಸನ್ನಿ ಡಿಯೋಲ್, ರವಿ ದುಬೆ ಇಂಗ್ಲೀಷ್ ನಲ್ಲಿ ಸಹಿ ಹಾಕಿದ್ದಾರೆ. ಆದರೆ ನಟ ಯಶ್ ಮಾತ್ರ ಕನ್ನಡದಲ್ಲಿ ಸಹಿ ಮಾಡಿದ್ದಾರೆ. ಯಶ್ ಅಭಿಮಾನವನ್ನು ಕನ್ನಡಾಭಿಮಾನಿಗಳು ಕೊಂಡಾಡಿದ್ದು, ಸೋಶಿಯಲ್ ಮೀಡಿಯಾದಲ್ಲಿ ಹಂಚಿಕೊಂಡು ಸಂಭ್ರಮಿಸಿದ್ದಾರೆ.
ರಾಮಾಯಣ ಸಿನಿಮಾವನ್ನು ನಿತೀಶ್ ತಿವಾರಿ ನಿರ್ದೇಶನ ಮಾಡುತ್ತಿದ್ದು, ಸಿನಿಮಾಗೆ ನಮಿತ್ ಮಲ್ಹೋತ್ರಾ ಬಂಡವಾಳ ಹೂಡುತ್ತಿದ್ದಾರೆ. ಬರೋಬ್ಬರಿ 835 ಕೋಟಿ ರೂ ಬಜೆಟ್ ನಲ್ಲಿ ಸಿನಿಮಾ ಸೆಟ್ಟೇರಿದೆ. ರಾಮನಾಗಿ ರಣಬೀರ್ ಕಪೂರ್ , ಸೀತೆ ಪಾತ್ರದಲ್ಲಿ ಸಾಯಿ ಪಲ್ಲವಿ , ರಾವಣನಾಗಿ ಯಶ್ ಪರದೆ ಮೇಲೆ ಮಿಂಚಲಿದ್ದಾರೆ.
ಯಶ್ 👑 – The Name, The Legacy, The Vibe! 💛♥️🤩
— NextGem.eth/Sol☔💛 (@NextGemXYZ) July 3, 2025
Signed in Kannada, written in History.#Ramayana will never be the same again. 🔥#ಯಶ್ #YashBOSS #RockingStarYash #RamayanaMovie#Ramayana pic.twitter.com/wFJnIUWacl