ಬೆಂಗಳೂರು : ಪ್ರೌಢಶಾಲಾ ಸಹ ಶಿಕ್ಷಕರುಗಳಿಗೆ ಪದವಿ ಪೂರ್ವ ಶಿಕ್ಷಣ ಇಲಾಖೆಯ ಉಪನ್ಯಾಸಕರ ಹುದ್ದೆಗೆ ಬಡ್ತಿ ನೀಡುವ ಸಂಬಂಧ ಶಿಕ್ಷಣ ಇಲಾಖೆ ಸುತ್ತೋಲೆ ಹೊರಡಿಸಿದೆ ಮಹತ್ವದ ಮಾಹಿತಿ ನೀಡಿದೆ.
ಸರ್ಕಾರಿ ಪ್ರೌಢಶಾಲೆ ಸಹ ಶಿಕ್ಷಕರು ಗ್ರೇಡ್ 2 ವ್ಯಂದದಿಂದ ಸರ್ಕಾರಿ ಪದವಿ ಪೂರ್ವ ಕಾಲೇಜು ಉಪನ್ಯಾಸಕರ ಹುದ್ದೆಗೆ ಬಡ್ತಿ ನೀಡಲು ಶಾಲಾ ಶಿಕ್ಷಣ ಇಲಾಖೆಯ ನಾಲ್ಲೂ ವಿಭಾಗಗಳಲ್ಲಿ ಸ್ನಾತಕೋತ್ತರ ಪದವಿ ಪಡೆದ ಪ್ರೌಢಶಾಲಾ ಸಹಶಿಕ್ಷಕರುಗಳ ರಾಜ್ಯ ಮಟ್ಟದ ಒಂದೇ ಜೇಷ್ಠತಾ ಪಟ್ಟಿಯನ್ನು ತಯಾರಿಸಿ ಸಲ್ಲಿಸಲು ಕೋರಿರುತ್ತಾರೆ.
ಪ್ರಸ್ತುತ ಸರ್ಕಾರಿ ಪ್ರೌಢಶಾಲಾ ಸಹ ಶಿಕ್ಷಕರು ಗ್ರೇಡ್-2 ರವರ ಜೇಷ್ಠತಾ ಪಟ್ಟಿಯನ್ನು ವಿಭಾಗವಾರು ಸಿದ್ದಪಡಿಸಲಾಗುತ್ತಿದೆ. ಆದ್ದರಿಂದ ಪದವಿ ಪೂರ್ವ ಶಿಕ್ಷಣ ಇಲಾಖೆಯ ಕೋರಿಕೆಯಂತೆ ಪದವಿ ಪೂರ್ವ ಶಿಕ್ಷಣ ಇಲಾಖೆಯ ಉಪನ್ಯಾಸಕರ ಹುದ್ದೆಗೆ ಬನ್ನಿ ಸಂಬಂಧ ಸ್ನಾತಕೋತ್ಸರ ಪದವಿ ಪಡೆದಿರುವ ಪ್ರೌಢಶಾಲಾ ಸಹಶಿಕ್ಷಕರು ಗ್ರೇಡ್-2 ರವರ ರಾಜ್ಯ ಮಟ್ಟದ ಒಂದೇ ಜೇನ್ಮತಾ ಪಟ್ಟಿಯನ್ನು ಸಿದ್ಧಪಡಿಸುವ ಸಂಬಂಧ ದಿನಾಂಕ : 01.06.2024 ರ ಈ ಕಛೇರಿಯ ಪತ್ರದಲ್ಲಿ ಸರ್ಕಾರಕ್ಕೆ ಮಾರ್ಗದರ್ಶನ ಕೋರಲಾಗಿರುತ್ತದೆ.
ದಿನಾಂಕ : 23.10.2024 ರ ಸರ್ಕಾರದ ಪತ್ರದಲ್ಲಿ ಸ್ನಾತಕೋತ್ರರ ಪದವಿ ಪಡೆದ ಪ್ರೌಢಶಾಲಾ ಸಹಶಿಕ್ಷಕರುಗಳ ರಾಜ್ಯ ಮಟ್ಟದ ಒಂದೇ ಜೇಷ್ಠತಾ ಪಟ್ಟಿಯನ್ನು (inter so) ಸಿದ್ಧವಡಿಸುವ ಕುರಿ ನಿರ್ದೇಶನ ನೀಡಲಾಗಿರುತ್ತದೆ.
ಸರ್ಕಾರದಿಂದ ನೀಡಿದ ನಿರ್ದೇಶನಗಳಿಗೆ ಕೆಲವು ಸ್ಪಷ್ಟನೆಗಳ ಅಗತ್ಯ ಕಂಡು ಬಂದಿದ್ದರಿಂದ 24.02.2025 ರ ಪತ್ರದಲ್ಲಿ ಮತ್ತೊಮ್ಮೆ ಸರ್ಕಾರಕ್ಕೆ ಮಾರ್ಗದರ್ಶನ ಕೋರಿದ್ದು ಉಲ್ಲೇಖ 8 ರ ಪತ್ರಗಳಲ್ಲಿ ಮಾರ್ಗದರ್ಶನ ಸ್ವೀಕರಿಸಲಾಗಿದೆ.
ಉಲ್ಲೇಖಿತ ಸರ್ಕಾರದ ಪತ್ರಗಳಲ್ಲಿ ಪ್ರಸ್ತಾಪಿಸಿದ ನಿರ್ದೇಶನಗಳನ್ನಯ ಹಾಗೂ ಕರ್ನಾಟಕ ಸರ್ಕಾರಿ ನೌಕರರ (ಜೇಷ್ಠತೆ) ನಿಯಮಗಳು, 1957. ರ ನಿಯಮಗಳನ್ವಯ ಪ್ರೌಢಶಾಲಾ ಸಹ ಶಿಕ್ಷಕರುಗಳಿಗೆ ಪದವಿ ಪೂರ್ವ ಶಿಕ್ಷಣ ಇಲಾಖೆಯ ಉಪನ್ಯಾಸಕರ ಹುದ್ದೆಗೆ ಬಡ್ತಿ ನೀಡುವ ಸಂಬಂಧ ಸ್ನಾತಕೋತ್ತರ ವಿದ್ಯಾರ್ಹತೆ ಹೊಂದಿರುವ ಶಿಕ್ಷಕರ ಮಾಹಿತಿಯನ್ನು ವಿಭಾಗೀಯ ಕಛೇರಿಗಳಿಂದ ಪಡೆದು ಸ್ನಾತಕೋತ್ತರ ಪದವಿ ಪಡೆದಿರುವ ಪ್ರೌಢಶಾಲಾ ಸಹಶಿಕ್ಷಕರು ಗ್ರೇಡ್-2 ರವರ ರಾಜ್ಯ ಮಟ್ಟದ ಒಂದೇ ತಾತ್ಕಾಲಿಕ ಜೇಷ್ಠತಾ ಪಟ್ಟಿಯನ್ನು ಸರ್ಕಾರಿ ಪದವಿ ಪೂರ್ವ ಶಿಕ್ಷಣ ಇಲಾಖೆಯ ಉಪನ್ಯಾಸಕರ ಹುದ್ದೆಗೆ ಮಾತ್ರ ಅನ್ವಯವಾಗುವಂತೆ ಸರ್ಕಾರ ನೀಡಿದ ನಿರ್ದೇಶನದಂತೆ ಸಿದ್ದಪಡಿಸಿ ಆಯುಕ್ತರು, ಶಾ.ಶಿ.ಇ, ನೃಪತುಂಗ ರಸ್ತೆ, ಬೆಂಗಳೂರು, ಈ ಕಛೇರಿಯ ವೆಬ್ಸೈಟ್ www.schooleducation.karnataka.gov.in , 25.04.2025 0 .
ಪಕಟಿಸಿರುವ ತಾತ್ಕಾಲಿಕ ಜೇಷ್ಠತಾ ಪಟ್ಟಿಗೆ ಸಂಬಂಧಿಸಿದಂತೆ ಈ ಕೆಳಕಂಡಂತೆ ಕ್ರಮವಹಿಸಲು ತಿಳಿಸಿದೆ:
- ಇಲಾಖಾ ವೆಬ್ಸೈಟ್ನಲ್ಲಿ ಪ್ರಕಟಿಸಿರುವ ತಾತ್ಕಾಲಿಕ ಜೇಷ್ಠತಾ ಪಟ್ಟಿಯನ್ನು ಸಂಬಂಧಿಸಿದ ವಿಭಾಗೀಯ ಸಹನಿರ್ದೇಶಕರುಗಳು ಶಿಕ್ಷಕರ ಗಮನಕ್ಕಾಗಿ ವ್ಯಾಪಕ ಪ್ರಚಾರ ಮಾಡುವುದು.
- ಸದರಿ ತಾತ್ಕಾಲಿಕ ಜೇಷ್ಠತಾ ಪಟ್ಟಿಯನ್ನು ಸಂಬಂಧಿಸಿದ ಉಪನಿರ್ದೇಶಕರುಗಳು ಮತ್ತು ಕ್ಷೇತ್ರ ಶಿಕ್ಷಣಾಧಿಕಾರಿಗಳು ತಮ್ಮ ವ್ಯಾಪ್ತಿಯಲ್ಲಿ ಅಗತ್ಯ ಪ್ರಚಾರ ನೀಡುವುದು.
- ಎಲ್ಲಾ ಶಿಕ್ಷಕರುಗಳು ತಮಗೆ ಸಂಬಂಧಿಸಿದ ಸೇವಾ ವಿವರದ ಮಾಹಿತಿಯನ್ನು ಪರಿಶೀಲಿಸಿಕೊಂಡು ಸದರಿ ಮಾಹಿತಿ ಸರಿ ಇದೆ/ಇಲ್ಲ ಎಂಬುದನ್ನು ಪರಿಶೀಲಿಸಿ, ಸರಿ ಇಲ್ಲದೇ ಇದ್ದಲ್ಲಿ ಇಲಾಖಾ ವೆಬ್ಸೈಟ್ನಲ್ಲಿ ಪ್ರಕಟಿಸಿರುವ ತಾತ್ಕಾಲಿಕ ಜೇಷ್ಠತಾ ಪಟ್ಟಿಯಲ್ಲಿ ಲಗತ್ತಿಸಿರುವ ಆಕ್ಷೇಪಣಾ ನಮೂನೆ ಯಂತೆ ಮಾಹಿತಿಯನ್ನು ಶಾಲಾ ಮುಖ್ಯ ಶಿಕ್ಷಕರಿಂದ ದೃಢೀಕರಿಸಿ ಸಂಬಂಧಿಸಿದ ಕ್ಷೇತ್ರ ಶಿಕ್ಷಣಾಧಿಕಾರಿಗಳಿಗೆ ನಿಗದಿಪಡಿಸಿದ ವೇಳಾಪಟ್ಟಿಯಂತೆ ಆಕ್ಷೇಪಣೆಯನ್ನು ಪೂರಕ ದಾಖಲೆಗಳೊಂದಿಗೆ ಸಲ್ಲಿಸುವುದು.
- ಕ್ಷೇತ್ರಶಿಕ್ಷಣಾಧಿಕಾರಿಗಳು ಶಿಕ್ಷಕರುಗಳಿಂದ ಪಡೆದ ಆಕ್ಷೇಪಣೆ ನಮೂನೆಗಳನ್ನು ಮೂಲಸೇವಾವಹಿ ಹಾಗೂ ಸೇವಾವಿವರಗಳೊಂದಿಗೆ ಪರಿಶೀಲಿಸಿ ಶಿಕ್ಷಕರು ನೀಡಿರುವ ಆಕ್ಷೇಪಣೆಗಳನ್ನು ಒಪ್ಪುವ/ತಿರಸ್ಕರಿಸುವ ಬಗ್ಗೆ ಸ್ಪಷ್ಟ ಅಭಿಪ್ರಾಯವನ್ನು ದಾಖಲಿಸಿ, ನಿಗದಿತ ವೇಳಾಪಟ್ಟಿಯಂತೆ ಸಂಬಂಧಿಸಿದ ಉಪನಿರ್ದೇಶಕರುಗಳಿಗೆ ಸಲ್ಲಿಸುವುದು.
- ಉಪನಿರ್ದೇಶಕರುಗಳು ಕ್ಷೇತ್ರ ಶಿಕ್ಷಣಾಧಿಕಾರಿಗಳಿಂದ ಪಡೆದ ಆಕ್ಷೇಪಣೆ ನಮೂನೆಗಳನ್ನು ಪರಿಶೀಲಿಸಿ, ಕ್ಷೇತ್ರ ಶಿಕ್ಷಣಾಧಿಕಾರಿಗಳು ನೀಡಿರುವ ಆಕ್ಷೇಪಣೆಗಳನ್ನು ಒಪ್ಪುವ/ತಿರಸ್ಕರಿಸುವ ಬಗ್ಗೆ ಸ್ಪಷ್ಟ ಅಭಿಪ್ರಾಯವನ್ನು ದಾಖಲಿಸಿ ನಿಗದಿತ ವೇಳಾಪಟ್ಟಿಯಂತೆ ಸಂಬಂಧಿಸಿದ ದಾಖಲೆಗಳೊಂದಿಗೆ ಸಲ್ಲಿಸುವುದು. ವಿಭಾಗೀಯ ಸಹನಿರ್ದೇಶಕರುಗಳಿಗೆ
- ವಿಭಾಗೀಯ ಸಹನಿರ್ದೇಶಕರುಗಳು ಉಪನಿರ್ದೇಶಕರ ಕಛೇರಿಗಳಿಂದ ಪಡೆದ ಅರ್ಹ ಕ್ರೋಢೀಕೃತ ಮಾಹಿತಿಗಳನ್ನು ಪರಿಶೀಲಿಸಿ ಅನರ್ಹ ಆಕ್ಷೇಪಣಾ ಅರ್ಜಿಗಳಿಗೆ ಸೂಕ್ತ ಕಾರಣ ಸಮೇತ ನಿಯಮಗಳನ್ನು ಉಲ್ಲೇಖಿಸಿ ಹಿಂಬರಹ ನೀಡುವುದು. ತಿದ್ದುಪಡಿಗೆ ಅರ್ಹವಿರುವ ಆಕ್ಷೇಪಣೆಗಳನ್ನು ಪರಿಶೀಲಿಸಿ ಇಲಾಖೆಯಿಂದ ನೀಡುವ ತಂತ್ರಾಂಶದಲ್ಲಿ ಇಂದೀಕರಿಸುವುದು. ಕ್ರೋಢೀಕೃತ ಪಟ್ಟಿಯನ್ನು ವೇಳಾಪಟ್ಟಿಯಂತೆ ಪ್ರಾಧಿಕಾರಕ್ಕೆ ಸಲ್ಲಿಸುವುದು. (ಉಪನಿರ್ದೇಶಕರುಗಳಿಂದ ಪಡೆದ ಭೌತಿಕ ಪ್ರತಿಗಳನ್ನು ತಮ್ಮಲ್ಲೇ ಅಭಿರಕ್ಷಣೆ ಮಾಡುವುದು).
- ಸರ್ಕಾರಿ ಪ್ರೌಢಶಾಲೆ ಸಹ ಶಿಕ್ಷಕರು ಗ್ರೇಡ್-2 ವೃಂದದಿಂದ ಸರ್ಕಾರಿ ಪದವಿ ಪೂರ್ವ ಕಾಲೇಜು ಉಪನ್ಯಾಸಕರ ಹುದ್ದೆಗೆ ಬಡ್ತಿ ನೀಡುವ ಸಂಬಂಧ ಸಿದ್ಧಪಡಿಸಿರುವ ರಾಜ್ಯ ಮಟ್ಟದ ಒಂದೇ ತಾತ್ಕಾಲಿಕ ಜೇಷ್ಠತಾ ಪಟ್ಟಿಯೊಂದಿಗೆ ಅಪೂರ್ಣ ಸೇವಾವಿವರಗಳಿರುವ ಪಟ್ಟಿಯನ್ನೂ ಸಹ ಲಗತ್ತಿಸಲಾಗಿದೆ.. ಸದರಿ ಪಟ್ಟಿಯಲ್ಲಿರುವ ಶಿಕ್ಷಕರು ಸಹಿತ ಅಪೂರ್ಣ ಅಂಶಗಳನ್ನು ಸರಿಪಡಿಸಲು ಕ್ರಮ ಸಂಖ್ಯೆ : (3) ರಲ್ಲಿ ತಿಳಿಸಿರುವಂತೆ ಆಕ್ಷೇಪಣೆಗಳನ್ನು ಸಲ್ಲಿಸುವುದು. ಈ ಸಂಬಂಧ ಸಂಬಂಧಿಸಿದ ವಿಭಾಗೀಯ ಸಹನಿರ್ದೇಶಕರುಗಳು ಆದ್ಯ ಗಮನ ಹರಿಸಿ ಸೂಕ್ತ ಸೇವಾವಿವರಗಳೊಂದಿಗೆ ಪಟ್ಟಿಯನ್ನು ಪೂರ್ಣಗೊಳ್ಳುವಂತೆ ಕ್ರಮವಹಿಸುವುದು,
- ಶಿಕ್ಷಕರು ಸಂಬಂಧಿತ ಪ್ರಾಧಿಕಾರಕ್ಕೆ ಮಾತ್ರ ಆಕ್ಷೇಪಣೆಗಳನ್ನು ಸಲ್ಲಿಸುವುದು. ಆಯುಕ್ತರ ಕಛೇರಿಗೆ /ಇತರೆ ಕಛೇರಿಗೆ ನೇರವಾಗಿ ಸಲ್ಲಿಸುವ ಆಕ್ಷೇಪಣೆಗಳನ್ನು ಪರಿಗಣಿಸಲಾಗುವುದಿಲ್ಲ ಎಂದು ತಿಳಿಸಿದೆ.



