ನವದೆಹಲಿ: ಪ್ರಧಾನಿ ನರೇಂದ್ರ ಮೋದಿ ಜುಲೈ 2 ರಿಂದ 9ರ ವರೆಗೆ 8 ದಿನಗಳ ಕಾಲ ವಿದೇಶ ಪ್ರವಾಸ ಕೈಗೊಂಡಿದ್ದಾರೆ.
ಪ್ರವಾಸದ ವೇಳೆ ಐದು ದೇಶಗಳಿಗೆ ಮೋದಿ ಭೇಟಿ ನೀಡಲಿದ್ದಾರೆ. ಅವರ 11 ವರ್ಷದ ಅಧಿಕಾರ ಅವಧಿಯಲ್ಲಿ ಅತಿ ಸುಧೀರ್ಘ ವಿದೇಶ ಪ್ರವಾಸ ಇದಾಗಿದೆ. ಪ್ರಧಾನಿ ಮೋದಿ ಪ್ರವಾಸ ಎರಡು ಖಂಡಗಳನ್ನು ಒಳಗೊಂಡಿದೆ.
ಘಾನಾ, ಟ್ರಿನಿಡಾಡ್, ಟೊಬಾಗೋ, ಅರ್ಜೇಂಟಿನಾ, ಬ್ರೆಜಿಲ್, ನಮೀಬಿಯಾ ದೇಶಗಳಿಗೆ ಮೋದಿ ಭೇಟಿ ನೀಡಲಿದ್ದಾರೆ. ಬ್ರಿಕ್ಸ್ ಶೃಂಗಸಭೆ ಹಿನ್ನೆಲೆಯಲ್ಲಿ ಜುಲೈ 5ರಿಂದ 8ರವರೆಗೆ 4 ದಿನ ಬ್ರೆಜಿಲ್ ನಲ್ಲಿ ತಂಗಲಿದ್ದಾರೆ. ಉಳಿದ 4 ದೇಶಗಳಲ್ಲಿ ತಲಾ ಒಂದು ದಿನ ತಂಗಲಿದ್ದಾರೆ. ಭಾರತದ ಜೊತೆಗೆ ಉತ್ತಮ ಸಂಬಂಧ ಹೊಂದಿರುವ ಮತ್ತು ಭಾರತೀಯರು ಅಧಿಕ ಸಂಖ್ಯೆಯಲ್ಲಿರುವ ದೇಶಗಳು ಇವಾಗಿದ್ದು, ಇಲ್ಲಿಗೆ ಮೋದಿ ಭೇಟಿ ವಿಶೇಷವೆನಿಸಿದೆ.