BIG NEWS : ಇನ್ಮುಂದೆ ಗ್ರಾಮಪಂಚಾಯಿತಿಗಳ ಮಟ್ಟದಲ್ಲೇ ಸಿಗುತ್ತೆ ʻವಿವಾಹ ನೋಂದಣಿ ಪ್ರಮಾಣಪತ್ರʼ

ಬೆಂಗಳೂರು : ಹಿಂದೂ ವಿವಾಹ ನೋಂದಣಿ ಸೇರಿದಂತೆ ಏಳು ಪ್ರಮುಖ ಸೇವೆಗಳನ್ನು ಗ್ರಾಮಪಂಚಾಯಿತಿಗಳ ಬಾಪೂಜಿ ಸೇವಾ  ಕೇಂದ್ರ ಹಾಗೂ ಗ್ರಾಮ ಒನ್‌ ಕೇಂದ್ರಗಳಲ್ಲಿ ಆನ್‌ ಲೈನ್‌ ಮೂಲಕ ಒದಗಿಸುವ ನಾಗರಿಕ ಸ್ನೇಹಿ ತಂತ್ರಾಂಶಗಳಿಗೆ ಕಂದಾಯ ಸಚಿವ ಕೃಷ್ಣ ಬೈರೇಗೌಡ ಚಾಲನೆ ನೀಡಿದ್ದಾರೆ.

ವಿಶೇಷ ವಿವಾಹಗಳ  ಕಾಯ್ದೆ 1954ರ ಅಡಿ ವಿವಾಹಗಳ ನೋಂದಣಿಯನ್ನು ಸಾರ್ವಜನಿಕರು ಆನ್‌ ಲೈನ್‌ ಮೂಲಕ ಅರ್ಜಿ ಸಲ್ಲಿಸಲು, ಶುಲ್ಕಗಳನ್ನು ಪಾವತಿಸಲು ಹಾಗೂ ವಿವಾಹ ನೋಂದಣಿಗೆ ಉಪ ನೋಂದಣಿ ಕಚೇರಿಯಲ್ಲಿ ದಿನಾಂಕ ಹಾಗೂ ಸಮಯವನ್ನು ನಿಗದಿಪಡಿಸಲು ಅವಕಾಶ ಕಲ್ಪಿಸಲಾಗಿದೆ.

ಇನ್ನು 2004ಕ್ಕೂ ಪೂರ್ವದ ಋಣಭಾರ ಪ್ರಮಾಣಪತ್ರಕ್ಕೆ ಸಾರ್ವಜನಿಕರು ಆನ್‌ ಲೈನ್‌ ಮೂಲಕ ಅರ್ಜಿ ಸಲ್ಲಿಸಿ ಶುಲ್ಕಗಳನ್ನು ಆನ್‌ ಲೈನ್‌ ಮೂಲಕ ಬ್ಯಾಂಕ್‌ ಖಾತೆಯಿಂದ ನೇರವಾಗಿ ಖಜಾನೆಗೆ ಪಾವತಿಸಿ ಉಪ ನೋಂದಣಿ ಅಧಿಕಾರಿಗಳು ಅಪ್‌ ಲೋಡ್‌ ಮಾಡಿರುವ ಇಸಿಯನ್ನು ತಮ್ಮ ಲಾಗಿನ್‌ ನಲ್ಲಿ ಡೌನ್‌ ಲೋಡ್‌  ಮಾಡಿಕೊಳ್ಳುವ ವ್ಯವಸ್ಥೆ ಜಾರಿಗೊಳಿಸಲಾಗಿದೆ.

Share This Article

Latest News

ಬಸನಗೌಡ ಪಾಟೀಲ್ ಯತ್ನಾಳ್ ಉಚ್ಚಾಟನೆಯಿಂದ ಬಿಜೆಪಿಗೆ ಹಿನ್ನಡೆಯಾಗುತ್ತದಾ ?

View Results

Loading ... Loading ...

Most Read