ಬೆಂಗಳೂರು : ಮಳೆ ಬರುವ ಸಂದರ್ಭದಲ್ಲಿ ಸರ್ಕಾರಿ ಶಾಲೆಗಳಲ್ಲಿ ಕೈಗೊಳ್ಳಬೇಕಾದ ಅಗತ್ಯ ಮುನ್ನಚ್ಚರಿಕಾ ಕ್ರಮಗಳನ್ನು ಅನುಸರಿಸುವ ಕುರಿತು ಶಿಕ್ಷಣ ಇಲಾಖೆ ಮಹತ್ವದ ಸುತ್ತೋಲೆ ಹೊರಡಿಸಿದೆ.
ಮೇಲಿನ ವಿಷಯಕ್ಕೆ ಸಂಬಂಧಿಸಿದಂತೆ, ಮಳೆ ಬರುವ ಸಂದರ್ಭದಲ್ಲಿ ಸರ್ಕಾರಿ ಶಾಲೆಗಳಲ್ಲಿ ಕೈಗೊಳ್ಳಬೇಕಾದ ಅಗತ್ಯ ಮುನ್ನಚ್ಚರಿಕಾ ಕ್ರಮಗಳನ್ನು ಅನುಸರಿಸುವ ಕುರಿತಂತೆ ಈಗಾಗಲೇ ಉಲ್ಲೇಖ(1)ರ ಸುತ್ತೋಲೆಯಲ್ಲಿ ಸೂಚಿಸಲಾಗಿರುತ್ತದೆ.
ದಿನಾಂಕ:25/07/2025 ರಂದು ತೀವ್ರ ಮಳೆಯಿಂದಾಗಿ ತೆಂಗಿನ ಮರ ಬಿದ್ದು, ಶ್ರೀ ಶಿವಯೋಗೇಶ್ವರ ಆಂಗ್ಲ ಮಾಧ್ಯಮ ಶಾಲೆ ಹಂಸಭಾವಿ ತಾ:ಹಿರೇಕೆರೂರ ತಾ:ಹಾವೇರಿ ಈ ಅನುದಾನ ರಹಿತ ಶಾಲೆಯಲ್ಲಿ ಓರ್ವ ವಿದ್ಯಾರ್ಥಿ ಮೃತಪಟ್ಟಿರುತ್ತಾನೆ. ಇಬ್ಬರು ವಿದ್ಯಾರ್ಥಿಗಳಿಗೆ ಸಣ್ಣ ಪುಟ್ಟ ಗಾಯಗಳಾಗಿದ್ದು, ಆಸ್ಪತ್ರೆಯಲ್ಲಿ ಚೇತರಿಸಿಕೊಳ್ಳುತ್ತಿದ್ದಾರೆ.
ಸದರ ಅಹಿತಕರ ಘಟನೆ ಹಿನ್ನೆಲೆಯಲ್ಲಿ ಮಾನ್ಯ ಪ್ರಧಾನ ಕಾರ್ಯದರ್ಶಿಗಳು, ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಇಲಾಖೆ ಬೆಂಗಳೂರು ಮತ್ತು ಅವರ ಆಯುಕ್ತರು, ಶಾಲಾ ಶಿಕ್ಷಣ ಇಲಾಖೆ ಧಾರವಾಡರವರ ನೇತೃತ್ವದಲ್ಲಿ ದಿನಾಂಕ:27/07/2025 ರಂದು ನಡೆದ ಗೂಗಲ್ ಸಭೆಯಲ್ಲಿ, ಶಾಲಾ ಸುರಕ್ಷತೆ ಹಾಗೂ ವಿದ್ಯಾರ್ಥಿಗಳ ಸುರಕ್ಷತೆ ಕುರಿತಂತೆ ಹಲವಾರು ವಿಷಯಗಳ ಕುರಿತು ಚರ್ಚಿಸಿ. ಒಟ್ಟಿನಲ್ಲಿ Presence of Mind ನೊಂದಿಗೆ ಕಾರ್ಯನಿರ್ವಹಿಸುತ್ತಾ ಮಕ್ಕಳು ಮನೆಯ ಸುರಕ್ಷಿತ ವಾತಾವರಣವನ್ನು ಅನುಭವಿಸುತ್ತಾ ಹಾಗೂ ಶಿಕ್ಷಕರುಗಳು ಸುರಕ್ಷತೆಯೊಂದಿಗೆ ಶಿಕ್ಷಣ ನೀಡುತ್ತ ಕಾರ್ಯನಿರ್ವಹಿಸುವ ಕುರಿತಂತೆ ಈ ಕೆಳಗಿನ ಅಂಶಗಳನ್ವಯ ಕ್ರಮವಹಿಸಲು ನಿರ್ದೇಶಿಸಲಾಗಿದೆ.
1) ಶಾಲೆಯಲ್ಲಿರುವ ಪ್ರತಿ ತರಗತಿ ಕೊಠಡಿಗಳು ಹಾಗೂ ಇತರೆ ಕೊಠಡಿಗಳು ಸುಸ್ಥಿತಿಯಲ್ಲಿರುವ ಬಗ್ಗೆ ಗಮನ ಹರಿಸುವುದು.
2) ದುರಸ್ತಿ ಅವಶ್ಯಕತೆ ಇರುವ ತರಗತಿ ಕೊಠಡಿಗಳನ್ನು ಬಳಸದೆ ಪರ್ಯಾಯ ಕೊಠಡಿಗಳಲ್ಲಿ ತರಗತಿಗಳ ವ್ಯವಸ್ಥೆ ಮಾಡಿಕೊಳ್ಳುವುದು. ಮತ್ತು ಇಂತಹ ಕೊಠಡಿಗಳಿಗೆ ಬೀಗ ಹಾಕಿ ವಿದ್ಯಾರ್ಥಿಗಳು ಇಂತಹ ಕೊಠಡಿಗಳ ಹತ್ತಿರ ತೆರಳದಂತೆ ಗಮನ ಹರಿಸುವುದು.
3) ಕಾರಿಡಾರ್ ಗಳ ಮೇಲ್ಮಾವಣಿಯ ಸಿಮೆಂಟ್ ಕಿತ್ತು ಬೀಳುತ್ತಿದ್ದರೆ ಆ ಭಾಗದಲ್ಲಿ ವಿದ್ಯಾರ್ಥಿಗಳು ಸುಳಿಯದಂತೆ ಕ್ರಮವಹಿಸುವುದು ಹಾಗೂ ಲಭ್ಯವಿರುವ ಅನುದಾನದಲ್ಲಿ ತಕ್ಷಣ ದುರಸ್ತಿ ಮಾಡಿಸಲು ಕ್ರಮ ವಹಿಸುವುದು.
4) ಅದೇ ರೀತಿ ಕೊಠಡಿಗಳ ಮೇಲ್ಪಾವಣಿಗಳ ಸಿಮೆಂಟ್ ಅಲ್ಲಲ್ಲಿ ಉದುರಿ ಬೀಳುತ್ತಿದ್ದರೆ ಲಭ್ಯವಿರುವ ಅನುದಾನದಲ್ಲಿ ಅಥವಾ ಸಂಚಿತ ನಿಧಿಯಲ್ಲಿ ದುರಸ್ತಿ ಮಾಡಿಸಿಕೊಳ್ಳಲು ನಿಯಮಾನುಸಾರ ಕ್ರಮವಹಿಸುವುದು.
5) ಕಟ್ಟಡದ ಮೇಲ್ಬಾಗದಲ್ಲಿ (ರೂಫ್) ನೀರು ನಿಲ್ಲದಂತೆ ಮಣ್ಣು ಕಸ ಕಡ್ಡಿ ಕಳೆ ಇತ್ಯಾದಿಗಳನ್ನು ತೆಗೆದುಹಾಕಿ ನೀರು ಸರಾಗವಾಗಿ ಹರಿದು ಹೋಗುವಂತೆ ವ್ಯವಸ್ಥೆ ಮಾಡುವುದು. ನೀರು ಹರಿದು ಹೋಗುವಂತೆ ಪೈಪ್ ಗಳನ್ನು ಜೋಡಿಸುವುದು.


