BIG NEWS: ಉಗ್ರ ಸಂಘಟನೆಗಳ ವಿರುದ್ಧ ಕ್ರಮ, ಒಳನುಸುಳುವಿಕೆ ತಡೆ, ಮಾಸ್ಟರ್ ಮೈಂಡ್ ಗಳ ಹಸ್ತಾಂತರಕ್ಕೆ ಭಾರತ ಬೇಡಿಕೆ ಸಾಧ್ಯತೆ

ನವದೆಹಲಿ: ಭಾರತ -ಪಾಕಿಸ್ತಾನ ನಡುವೆ ಕದನ ವಿರಾಮ ಜಾರಿಯಾಗಿದ್ದು, ಮೇ 12 ರಂದು ಉಭಯ ದೇಶಗಳ ನಡುವೆ ನಡೆಯಲಿರುವ ಸಭೆಯಲ್ಲಿ ಭಾರತ ಹಲವು ಬೇಡಿಕೆ ಇಡುವ ಸಾಧ್ಯತೆ ಇದೆ.

ಮಾತುಕತೆಯ ವೇಳೆ ಮುನ್ನೆಲೆಗೆ ಬರಬಹುದಾದ ವಿಷಯಗಳು:

ಮೇ 12 ರಂದು ಮಧ್ಯಾಹ್ನ 12 ಗಂಟೆಗೆ ಭಾರತ ಮತ್ತು ಪಾಕಿಸ್ತಾನ ನಡುವೆ ಮಾತುಕತೆ ನಡೆಯಲಿದೆ. ಈ ಸಭೆಯಲ್ಲಿ ಉಗ್ರರ ಪೋಷಕ ಸಂಘಟನೆಗಳ ವಿರುದ್ಧ ಪಾಕಿಸ್ತಾನವೇ ಕಾರ್ಯಾಚರಣೆ ನಡೆಸಬೇಕು. ಭಾರತದಲ್ಲಿ ವಿಧ್ವಂಸಕ ಕೃತ್ಯವೆಸಗಿದ ಸಂಘಟನೆಗಳ ಮಾಸ್ಟರ್ ಮೈಂಡ್ ಗಳನ್ನು ಹಸ್ತಾಂತರಿಸುವಂತೆ ಮಾತುಕತೆಯ ವೇಳೆ ಪಾಕಿಸ್ತಾನಕ್ಕೆ ಭಾರತ ಕೇಳಿಕೊಳ್ಳಬಹುದು.

ಉಗ್ರಸಂಘಟನೆಗಳಾದ LeT, JeM ವಿರುದ್ಧ ಗೋಚರ ಕ್ರಮಕ್ಕೆ ಒತ್ತಾಯಿಸಬಹುದು. ಈ ಸಂಘಟನೆಗಳ ಶಿಬಿರಗಳನ್ನು ಮುಚ್ಚುವುದು, ನಾಯಕರನ್ನು ಬಂಧಿಸುವುದು ಮತ್ತು ಅವರ ಆರ್ಥಿಕ ಮೂಲಗಳನ್ನು ಕಡಿತಗೊಳಿಸುವ ಷರತ್ತು ಹಾಕಬಹುದು.

ಗಡಿ ನಿಯಂತ್ರಣ ರೇಖೆ ಉದ್ದಕ್ಕೂ ಯಾವುದೇ ಕದನ ವಿರಾಮ ಉಲ್ಲಂಘನೆ ಇಲ್ಲದಂತೆ ಕಟ್ಟುನಿಟ್ಟಾದ ಒಪ್ಪಂದವನ್ನು ಭಾರತ ಒತ್ತಾಯಿಸಬಹುದು. ಯಾವುದೇ ಗುಂಡಿನ ದಾಳಿ, ಡ್ರೋನ್ ದಾಳಿ ಅಥವಾ ಒಳನುಸುಳುವಿಕೆಯನ್ನು ತಡೆಗಟ್ಟುವ ಗ್ಯಾರಂಟಿಯನ್ನು ಕೋರಬಹುದಾಗಿದೆ.

ಅಲ್ಲದೇ, ಗಡಿ ನಿಯಂತ್ರಣ ರೇಖೆಯಲ್ಲಿ ಶಾಂತಿಯನ್ನು ಕಾಪಾಡಲು ಎರಡು ದೇಶಗಳ ಡಿಜಿಎಂಓ ನಿಯಮಿತವಾಗಿ ಸಂಪರ್ಕದಲ್ಲಿರಬೇಕು ಎಂದು ಷರತ್ತು ಇಡಬಹುದಾಗಿದೆ. ರಾಜತಾಂತ್ರಿಕ ಸಿಬ್ಬಂದಿಗೆ ಸಂಪೂರ್ಣ ಭದ್ರತೆಯ ಭರವಸೆ ಕೋರಬಹುದು. ಮಾತ್ರವಲ್ಲ, ಕಾಶ್ಮೀರ ವಿಚಾರದಲ್ಲಿ ಮೂರನೇ ವ್ಯಕ್ತಿಯ ಮಧ್ಯಸ್ಥಿಕೆಯನ್ನು ತಿರಸ್ಕರಿಸಬಹುದು. ಇದನ್ನು ದ್ವಿಪಕ್ಷೀಯವಾಗಿ ಮಾತ್ರ ಚರ್ಚಿಸಬೇಕು ಎಂದು ಒತ್ತಾಯಿಸಬಹುದು. ಪಾಕಿಸ್ತಾನವು ಕಾಶ್ಮೀರದಲ್ಲಿ ಭಯೋತ್ಪಾದಕ ಚಟುವಟಿಕೆ ಬೆಂಬಲಿಸುವುದನ್ನು ಸಂಪೂರ್ಣವಾಗಿ ನಿಲ್ಲಿಸಬೇಕು ಎಂದು ಭಾರತ ಷಶರತ್ತು ವಿಧಿಸಬಹುದು.

Share This Article

Latest News

ಬಸನಗೌಡ ಪಾಟೀಲ್ ಯತ್ನಾಳ್ ಉಚ್ಚಾಟನೆಯಿಂದ ಬಿಜೆಪಿಗೆ ಹಿನ್ನಡೆಯಾಗುತ್ತದಾ ?

View Results

Loading ... Loading ...

Most Read