BIG NEWS : ‘ನನಗೆ ಗೌರವ ಡಾಕ್ಟರೇಟ್ ಬಂದಿಲ್ಲ’ : ನಿರ್ದೇಶಕ ಟಿ.ಎನ್.ಸೀತಾರಾಮ್ ಸ್ಪಷ್ಟನೆ

ಬೆಂಗಳೂರು : ನನಗೆ ಗೌರವ ಡಾಕ್ಟರೇಟ್ ಬಂದಿಲ್ಲ ಎಂದು ನಿರ್ದೇಶಕ ಟಿ.ಎನ್.ಸೀತಾರಾಮ್ ಸ್ಪಷ್ಟನೆ ನೀಡಿದ್ದಾರೆ.

ಈ ಬಗ್ಗೆ ಫೇಸ್ ಬುಕ್ ನಲ್ಲಿ ಮಾಹಿತಿ ಹಂಚಿಕೊಂಡು ಸ್ಪಷ್ಟನೆ ನೀಡಿದ ಎನ್.ಸೀತಾರಾಮ್ ‘ಎಲ್ಲರಿಗೂ ನಮಸ್ಕಾರಗಳು, ನನಗೆ ಮೈಸೂರು ವಿಶ್ವವಿದ್ಯಾಲಯದ ಗೌರವ ಡಾಕ್ಟರೇಟ್ ಬಂದಿದೆ ಎಂದು ತುಂಬಾ ತುಂಬಾ ಜನ ನನ್ನನ್ನು ಅಭಿನಂದಿಸಿ ಹಾರೈಸಿದ್ದಿರಿ.ನನಗೂ ಇದು ಪರಮಾಶ್ಚರ್ಯಗಳಲ್ಲಿ ಒಂದರಂತೆ ಅನಿಸಿತ್ತು, ಆದರೆ ಅದು ಮಾನ್ಯ ಶ್ರೀ ಎಂ.ಆರ್. ಸೀತಾರಾಮ್ ರವರಿಗೆ ಬಂದಿದ್ದು ಟಿ.ಎನ್.ಸೀತಾರಾಮ್ ಎಂದು ಕೆಲವು ಪತ್ರಿಕೆಗಳಲ್ಲಿ ತಪ್ಪಾಗಿ ಬಂದಿರುವಂತೆ ಕಾಣುತ್ತದೆ.. ನನಗೆ ಡಾಕ್ಟರೇಟ್ ಬಂದಿಲ್ಲ.ಸಂಬಂಧಪಟ್ಟವರೂ ನನಗೆ ಡಾಕ್ಟರೇಟ್ ಬಂದಿದೆ ಎಂದು ಹೇಳಿರಲಿಲ್ಲ.ಹಾಗಾಗಿ ಸಾವಿರಾರು ಸಹೃದಯರು ನನಗೆ ಪ್ರೀತಿಯಿಂದ ಅಭಿನಂದಿಸಿದ್ದೀರಿ ಮತ್ತು ಹಾರೈಸಿದ್ದೀರಿ’.

‘ನಿಮ್ಮೆಲ್ಲರ ಪ್ರೀತಿ ಮತ್ತು ಅಭಿನಂದನೆಗಳಿಗೆ ಸಹಸ್ರ ಸಹಸ್ರ ಕೃತಜ್ಞತೆಗಳು. ನಿಮ್ಮೆಲ್ಲರ ಪ್ರೀತಿ ಹಾಗೇ ಇರಲಿ ಎಂದು ಪ್ರಾರ್ಥನೆ.. ಬಯಸದೇ ಬಂದಿದ್ದ ಎರಡು ದಿನದ ಪಟ್ಟ ಇದು..ಗೌರವ ಡಾಕ್ಟರೇಟ್ ಪಡೆದಿರುವ ಹಿರಿಯರಿಗೆ ಹಾರ್ದಿಕ ಅಭಿನಂದನೆಗಳು ಮತ್ತು ಶುಭಾಶಯಗಳು’ ಎಂದು ಅವರು ಫೇಸ್ ಬುಕ್ ಖಾತೆಯಲ್ಲಿ ಪೋಸ್ಟ್ ಹಂಚಿಕೊಂಡಿದ್ದಾರೆ.

 

Share This Article

Latest News

ಬಸನಗೌಡ ಪಾಟೀಲ್ ಯತ್ನಾಳ್ ಉಚ್ಚಾಟನೆಯಿಂದ ಬಿಜೆಪಿಗೆ ಹಿನ್ನಡೆಯಾಗುತ್ತದಾ ?

View Results

Loading ... Loading ...

Most Read