ಚಿತ್ರದುರ್ಗ : ಪ್ರತಿವರ್ಷದಂತೆ ಈ ವರ್ಷವೂ ಪ್ರಸಕ್ತ ಸಾಲಿನಲ್ಲಿ ರಾಜ್ಯ ಸರ್ಕಾರಿ ನೌಕರರಿಗೆ ಕ್ರೀಡಾಕೂಟ ಮತ್ತು ಸಾಂಸ್ಕೃತಿಕ ಸ್ಪರ್ಧೆಗಳನ್ನು ಜಿಲ್ಲಾಮಟ್ಟದಲ್ಲಿ ಇದೇ ಏಪ್ರಿಲ್ 15 ಮತ್ತು 16ರಂದು ಚಿತ್ರದುರ್ಗ ನಗರದ ವೀರವನಿತೆ ಒನಕೆ ಓಬವ್ವ ಕ್ರೀಡಾಂಗಣದಲ್ಲಿ ಏರ್ಪಡಿಸಲಾಗಿದೆ.
ಏಪ್ರಿಲ್ 15 ಮತ್ತು 16ರಂದು ನಡೆಯುವ ಚಿತ್ರದುರ್ಗ ಜಿಲ್ಲಾ ಮಟ್ಟದ ರಾಜ್ಯ ಸರ್ಕಾರಿ ನೌಕರರ ಕ್ರೀಡಾಕೂಟದಲ್ಲಿ ಆಯಾ ಇಲಾಖಾ ಮುಖ್ಯಸ್ಥರು ಶೇ.50ರಷ್ಟು ಸಿಬ್ಬಂದಿಗಳಿಗೆ ಮೀರದಂತೆ ಭಾಗವಹಿಸು ಅನುಮತಿ ನೀಡತಕ್ಕದ್ದು. ಈ ಕ್ರೀಡಾಕೂಟದಲ್ಲಿ ಭಾಗವಹಿಸಿದ ಅಧಿಕಾರಿ, ನೌಕರರು ಕಡ್ಡಾಯವಾಗಿ ಹಾಜರಾತಿ ಪ್ರಮಾಣ ಪತ್ರ ಹಾಜರು ಪಡಿಸುವ ಷರತ್ತಿಗೊಳಪಡಿಸಿ ಎರಡು ದಿನಗಳ ವಿಶೇಷ ಸಾಂದರ್ಭಿಕ ರಜೆ ಮಂಜೂರು ಮಾಡುವುದು ಮತ್ತು ಕ್ರೀಡಾಕೂಟ ನಡೆಯುವ ದಿನಗಳ ಪ್ರಯಾಣಭತ್ಯೆಯನ್ನು ಮಾತೃ ಇಲಾಖೆಯಿಂದಲೇ ಭರಿಸುವಂತೆ ಜಿಲ್ಲಾಧಿಕಾರಿ ಹಾಗೂ ಜಿಲ್ಲಾ ಸರ್ಕಾರಿ ನೌಕರರ ಕ್ರೀಡಾಕೂಟ ಸಮಿತಿ ಅಧ್ಯಕ್ಷರಾದ ಟಿ.ವೆಂಕಟೇಶ್ ತಿಳಿಸಿದ್ದಾರೆ.
You Might Also Like
TAGGED:ಸಾಂದರ್ಭಿಕ ರಜಾ ಸೌಲಭ್ಯ