KannadaDunia.comKannadaDunia.comKannadaDunia.com
  • Latest
    • Karnataka
    • India
    • International
    • Crime
  • Business
  • Sports
  • Entertainment
  • Auto
  • Lifestyle
    • Health
    • Beauty
    • Recipies
    • Mental Health
    • Tourism
  • Astro
  • Special
  • Agriculture
  • Jobs
KannadaDunia.comKannadaDunia.com
  • Latest
    • Karnataka
    • India
    • International
    • Crime
  • Business
  • Sports
  • Entertainment
  • Auto
  • Lifestyle
    • Health
    • Beauty
    • Recipies
    • Mental Health
    • Tourism
  • Astro
  • Special
  • Agriculture
  • Jobs
Follow US

BIG NEWS : ಖಾತೆಯಲ್ಲಿ ‘ಹಣ’ ಇಲ್ಲದಿದ್ರೂ ‘ಚೆಕ್’ ಮಾನ್ಯ ಮಾಡಿದ ‘ಬ್ಯಾಂಕ್ ಆಫ್ ಮಹಾರಾಷ್ಟ್ರ’ಗೆ ಬಿತ್ತು 1,40,000 ರೂ. ದಂಡ

Published September 21, 2024 at 9:33 am
Share
SHARE

ಧಾರವಾಡ : ಖಾತೆಯಲ್ಲಿ ಹಣ ಇಲ್ಲದಿದ್ರೂ ಚೆಕ್ ಮಾನ್ಯ ಮಾಡಿದ ಬ್ಯಾಂಕ್ ಆಫ್ ಮಹಾರಾಷ್ಟ್ರಗೆ 1,40,000 ರೂ. ದಂಡ ವಿಧಿಸಲಾಗಿದೆ.

ಧಾರವಾಡದ ಕೊಟ್ಟಣದ ಓಣಿ ನಿವಾಸಿ ಸುಮನ್ ಅತ್ತಿಗೇರಿ ಎಂಬುವವರು ಎದುರುದಾರ ಬ್ಯಾಂಕ್ ಆಪ್ ಮಹಾರಾಷ್ಟ್ರದ ಗ್ರಾಹಕಳಾಗಿದ್ದು, ಆ ಬ್ಯಾಂಕಿನಲ್ಲಿ ತನ್ನ ಉಳಿತಾಯ ಖಾತೆಯನ್ನು ಹೊಂದಿ ತನ್ನ ಹಣಕಾಸಿನ ವ್ಯವಹಾರಗಳನ್ನು ಮಾಡುತ್ತಿರುತ್ತಾಳೆ. ಹೀಗಿರುವಾಗ ತನ್ನ ಪತಿಯ ಆರೋಗ್ಯದ ಖರ್ಚಿನ ಸಲುವಾಗಿ ಹಾಗೂ ಮಕ್ಕಳ ವಿಧ್ಯಾಭ್ಯಾಸಕ್ಕಾಗಿ ಸಕಾಲಧನ ಸಹಕಾರಿ ಸಂಘದಿಂದ ರೂ.80,000/- ಸಾಲ ಪಡೆದಿದ್ದು, ಆ ಮೊತ್ತವನ್ನು ಸಹಕಾರಿ ಸಂಘದವರು ತನ್ನ ಖಾತೆಗೆ ದಿನಾಂಕ:22/05/2024ರಂದು ವರ್ಗಾವಣೆ ಮಾಡಿರುತ್ತಾರೆ. ತಾನು ಆ ಹಣವನ್ನು ನಗಧೀಕರಣ ಮಾಡಿಕೊಳ್ಳಲು ದಿ:23/05/2024ರಂದು ಸದರಿ ಎದುರುದಾರ ಬ್ಯಾಂಕಿಗೆ ಹೋದಾಗ ತನ್ನ ಖಾತೆಯಲ್ಲಿ ಯಾವುದೇ ಹಣ ಜಮಾ ಇರುವುದಿಲ್ಲ ಅಂತಾ ತಿಳಿಸಿರುತ್ತಾರೆ. ತದ ನಂತರ ತನ್ನ ಬ್ಯಾಂಕ್ ಪಾಸಬುಕ್ನಲ್ಲಿ ಹಣ ಜಮೆ ಆದ ಕುರಿತು ಎದುರುದಾರರ ಗಮನಕ್ಕೆ ತಂದರೂ ಸಹ ಅವರು ತನಗೆ ಹಣ ನಗಧೀಕರಣ ಮಾಡಿಕೊಳ್ಳಲು ಅವಕಾಶ ನೀಡದೇ ಸತಾಯಿಸಿರುತ್ತಾರೆ. ಈ ಬಗ್ಗೆ ಶಾಖಾ ವ್ಯವಸ್ಥಾಪಕರಿಗೆ ದಿ:24/05/2024ರಂದು ತನಗೆ ಖಾತೆಯಲ್ಲಿನ ಹಣ ಪಡೆದುಕೊಳ್ಳಲು ಅನುಮತಿಸಬೇಕು ಅಂತಾ ಪತ್ರ ಬರೆದರೂ ಏನೂ ಪ್ರಯೋಜನ ಆಗಿಲ್ಲ. ಎದುರುದಾರ ಬ್ಯಾಂಕಿನವರು ತನಗೆ ತನ್ನ ಹಣ ವಿತ್ ಡ್ರಾ ಮಾಡಿಕೊಳ್ಳಲು ನಿರಾಕರಿಸಿ ಸೇವಾ ನ್ಯೂನ್ಯತೆ ಎಸಗಿದ್ದಾರೆ ಅಂತಾ ಹೇಳಿ ಅವರ ವಿರುದ್ಧ ಗ್ರಾಹಕ ಸಂರಕ್ಷಣಾ ಕಾಯ್ದೆ ಅಡಿ ಸೂಕ್ತ ಕ್ರಮ ಕೈಗೊಳ್ಳುವಂತೆ ದೂರುದಾರಳು ಧಾರವಾಡ ಜಿಲ್ಲಾ ಗ್ರಾಹಕರ ಆಯೋಗಕ್ಕೆ ದಿ:28/06/2024 ರಂದು ದೂರು ಸಲ್ಲಿಸಿದ್ದರು.

ದೂರುದಾರಳು ಈ ಪ್ರಕರಣ ದಾಖಲಿಸುವ ಪೂರ್ವದಲ್ಲಿ ಎದುರುದಾರ ಬ್ಯಾಂಕಿಗೆ ನೋಟಿಸು ಕೊಟ್ಟಿದ್ದರು. ಅದಕ್ಕೆ ಪ್ರತಿ ಉತ್ತರವಾಗಿ ಬ್ಯಾಂಕಿನವರು ಸದರಿ ದೂರುದಾರಳು ತನ್ನ ಉಳಿತಾಯ ಖಾತೆಯಲ್ಲಿ ಸಾಕಷ್ಟು ಹಣ ಇರದೇ ಇದ್ದರೂ ಓರ್ವ ಶಿವಕುಮಾರ ಗಂಗಾಧರ ಹಿರೇಮಠ ಎಂಬುವವರಿಗೆ ರೂ.2 ಲಕ್ಷಗಳ ಚೆಕ್ಕನ್ನು ಕೊಟ್ಟಿದ್ದರು. ಆ ಚೆಕ್ಕನ್ನು ಬ್ಯಾಂಕ್ ಮಾನ್ಯಮಾಡಿ ಹಣ ಸಂದಾಯ ಮಾಡಿರುವುದಾಗಿ ಹೇಳಿ, ದೂರುದಾರಳೇ ಚೆಕ್ ಹಣವನ್ನು ಬ್ಯಾಂಕಿಗೆ ಭರಿಸ ಬೇಕು ಅಂತಾ ಆಕ್ಷೇಪಿಸಿದ್ದರು. ಇಲ್ಲದೇ ಇದ್ದಲ್ಲಿ ದೂರುದಾರಳ ವಿರುದ್ಧ ಮಾನಹಾನಿ ಮತ್ತು ಮಾನಸಿಕ ಹಿಂಸೆ ಪ್ರಕರಣ ದಾಖಲಿಸಿರುವುದಾಗಿ ಎದುರುದಾರ ಬ್ಯಾಂಕಿನವರು ನೋಟಿಸಿನಲ್ಲಿ ತಿಳಿಸಿದ್ದರು.
ಸದರಿ ದೂರಿನ ಬಗ್ಗೆ ಕೂಲಂಕುಷವಾಗಿ ವಿಚಾರಣೆ ನಡೆಸಿದ ಆಯೋಗದ ಅಧ್ಯಕ್ಷರಾದ ಈಶಪ್ಪ. ಭೂತೆ ಹಾಗೂ ವಿಶಾಲಾಕ್ಷಿ. ಅ. ಬೋಳಶೆಟ್ಟಿ ಮತ್ತು ಪ್ರಭು. ಸಿ. ಹಿರೇಮಠ ಸದಸ್ಯರು, ದೂರುದಾರಳ ಉಳಿತಾಯ ಖಾತೆಯಲ್ಲಿ ಸಾಕಷ್ಟು ಹಣ ಇರದೇ ಇದ್ದರೂ ಸಹ ರೂ.2 ಲಕ್ಷಗಳ ಚೆಕ್ಕನ್ನು ಎದುರುದಾರ ಬ್ಯಾಂಕ್ ಮಾನ್ಯ ಮಾಡಿರುವುದಾಗಿ ಹೇಳಿದ್ದು ಇರುತ್ತದೆ. ಆದರೆ ರಿಸರ್ವ ಬ್ಯಾಂಕ್ ಆಪ್ ಇಂಡಿಯಾ ಮಾರ್ಗಸೂಚಿಗಳಂತೆ ಹಾಗೂ ಬ್ಯಾಂಕಿಂಗ್ ನಿಯಮಾವಳಿಗಳಂತೆ ಯಾವುದೇ ವ್ಯಕ್ತಿಯ ಖಾತೆಯಲ್ಲಿ ಸಾಕಷ್ಟು ಹಣ ಇರದೇ ಬೇರೊಬ್ಬ ವ್ಯಕ್ತಿ/ಸಂಸ್ಥೆಗೆ ಚೆಕ್ಕನ್ನು ನೀಡಿದ್ದರೇ, ಆ ಚೆಕ್ಕನ್ನು ನಗಧೀಕರಿಸುವ ಬ್ಯಾಂಕ್/ಹಣಕಾಸು ಸಂಸ್ಥೆ ಮೊದಲು ಆತನ ಖಾತೆಯಲ್ಲಿ ಸಾಕಷ್ಟು ಹಣ ಜಮೆ ಇದೆಯೋ ಇಲ್ಲವೋ ಅಂತಾ ಪರಿಶೀಲಿಸಿ ನಂತರ ಆ ಚೆಕ್ಕನ್ನು ಮಾನ್ಯ ಮಾಡಲಾಗುತ್ತದೆ.

ಒಂದು ವೇಳೆ ಚೆಕ್ಕು ನೀಡಿದ ವ್ಯಕ್ತಿಯ ಖಾತೆಯಲ್ಲಿ ಸಾಕಷ್ಟು ಹಣ ಜಮಾ ಇಲ್ಲದೇ ಹೋದರೆ ಆ ಚೆಕ್ಕನ್ನು ಸಾಕಷ್ಟು ಹಣ ಇಲ್ಲ ಎಂಬ ಹಿಂಬರಹದೊಂದಿಗೆ ಅಮಾನ್ಯ ಮಾಡಲಾಗುತ್ತದೆ. ಆದರೆ ದೂರುದಾರಳ ಪ್ರಕರಣದಲ್ಲಿ ಅವಳ ಖಾತೆಯಲ್ಲಿ ಸಾಕಷ್ಟು ಹಣಇರದೇ ಹೋದರೂ ಅವಳ ಚೆಕ್ಕನ್ನು ಮಾನ್ಯ ಮಾಡಿ ಎದುರುದಾರ ಬ್ಯಾಂಕಿನವರು ಕರ್ತವ್ಯ ಲೋಪ ಎಸಗಿರುತ್ತಾರೆ. ಅಲ್ಲದೇ ಅವಳು ಬೇರೊಂದು ಸಹಕಾರಿ ಸಂಘದಿಂದ ಪಡೆದ ಸಾಲದ ಹಣ ರೂ.80,000/-ಗಳನ್ನು ಅವಳಿಗೆ ವಿತ್ಡ್ರಾ ಮಾಡಿಕೊಡಲು ನಿರಾಕರಿಸಿ ಸೇವಾ ನ್ಯೂನ್ಯತೆ ಎಸಗಿದೆ ಅಂತಾ ಆಯೋಗ ಅಭಿಪ್ರಾಯಪಟ್ಟು ತೀರ್ಪು ನೀಡಿದೆ. ದೂರುದಾರಳು ಸಹಕಾರಿ ಸಂಘದಿಂದ ಪಡೆದ ಹಣ ರೂ.80,000/- ಗಳನ್ನು ಅದರ ಮೇಲೆ ವಾರ್ಷಿಕ ಶೆ8% ರಂತೆ ಬಡ್ಡಿ ಲೆಕ್ಕ ಹಾಕಿ ದಿ:22/05/2024 ರಿಂದ ಪೂರ್ತಿ ಹಣ ಸಂದಾಯವಾಗುವವರೆಗೆ ದೂರುದಾರಳಿಗೆ ಸಂದಾಯ ಮಾಡಲು ಎದುರುದಾರ ಬ್ಯಾಂಕ್ ಆಪ್ ಮಹಾರಾಷ್ಟ್ರಕ್ಕೆ ಆಯೋಗ ಆದೇಶಿಸಿರುತ್ತದೆ ಜೊತೆಗೆ ಪಿರ್ಯಾದಿದಾರಳಿಗೆ ಆಗಿರುವ ತೊಂದರೆ ಮತ್ತು ಅನಾನುಕೂಲಕ್ಕಾಗಿ ರೂ.50,000/- ಪರಿಹಾರ ಮತ್ತು ರೂ.10,000/- ಪ್ರಕರಣದ ಖರ್ಚು ವೆಚ್ಚ ನೀಡುವಂತೆ ಆಯೋಗ ಎದುರುದಾರ ಬ್ಯಾಂಕಿಗೆ ಸೂಚಿಸಿದೆ.

 

You Might Also Like

ಶ್ರೀಲಂಕಾ ಆಟಗಾರನ ವಿಚಿತ್ರ ಬೌಲಿಂಗ್ ಆಕ್ಷನ್ ಗೆ ಬ್ಯಾಟ್ಸ್‌ಮನ್ ಕಂಗಾಲು | Old Video

Rain alert Karnataka : ರಾಜ್ಯದಲ್ಲಿ ಮುಂದಿನ 5 ದಿನ ಭಾರಿ ‘ಮಳೆ’ ಮುನ್ಸೂಚನೆ : ಈ ಜಿಲ್ಲೆಗಳಿಗೆ ರೆಡ್, ಆರೆಂಜ್ ಅಲರ್ಟ್ ಘೋಷಣೆ.!

ಐಐಟಿ, ಐಐಎಂಗಳಲ್ಲ ; ಈ ಕಾಲೇಜಿನ ವಿದ್ಯಾರ್ಥಿಗೆ ಬರೋಬ್ಬರಿ 1.45 ಕೋಟಿ ರೂ. ದಾಖಲೆಯ ಸಂಬಳ !

ಪ್ರಜ್ವಲ್ ರೇವಣ್ಣ ವಿರುದ್ಧ ಅತ್ಯಾಚಾರ ಕೇಸ್: ಜು. 30ರಂದು ‘ಅಂತಿಮ ತೀರ್ಪು’ ಪ್ರಕಟ

BIG NEWS : ‘ಧರ್ಮಸ್ಥಳ ಸರಣಿ ಹತ್ಯೆ’ ಕೇಸ್ : ಪೊಲೀಸ್ ತನಿಖೆ ಬಳಿಕ ನೂರಾರು ಶವ ಹೂತ ಬಗ್ಗೆ ಕ್ರಮ-CM ಸಿದ್ದರಾಮಯ್ಯ

TAGGED:000 Fine40BIG NEWS : Even though there is no 'money' in the accountthe 'cheque' has been validated by the Bank of Maharashtra for Rs 1
Share This Article
Facebook Copy Link Print

Latest News

ಶ್ರೀಲಂಕಾ ಆಟಗಾರನ ವಿಚಿತ್ರ ಬೌಲಿಂಗ್ ಆಕ್ಷನ್ ಗೆ ಬ್ಯಾಟ್ಸ್‌ಮನ್ ಕಂಗಾಲು | Old Video
Rain alert Karnataka : ರಾಜ್ಯದಲ್ಲಿ ಮುಂದಿನ 5 ದಿನ ಭಾರಿ ‘ಮಳೆ’ ಮುನ್ಸೂಚನೆ : ಈ ಜಿಲ್ಲೆಗಳಿಗೆ ರೆಡ್, ಆರೆಂಜ್ ಅಲರ್ಟ್ ಘೋಷಣೆ.!
ಐಐಟಿ, ಐಐಎಂಗಳಲ್ಲ ; ಈ ಕಾಲೇಜಿನ ವಿದ್ಯಾರ್ಥಿಗೆ ಬರೋಬ್ಬರಿ 1.45 ಕೋಟಿ ರೂ. ದಾಖಲೆಯ ಸಂಬಳ !
ಪ್ರಜ್ವಲ್ ರೇವಣ್ಣ ವಿರುದ್ಧ ಅತ್ಯಾಚಾರ ಕೇಸ್: ಜು. 30ರಂದು ‘ಅಂತಿಮ ತೀರ್ಪು’ ಪ್ರಕಟ

ಬಸನಗೌಡ ಪಾಟೀಲ್ ಯತ್ನಾಳ್ ಉಚ್ಚಾಟನೆಯಿಂದ ಬಿಜೆಪಿಗೆ ಹಿನ್ನಡೆಯಾಗುತ್ತದಾ ?

View Results

Loading ... Loading ...

Most Read

BREAKING : ಬೆಂಗಳೂರಿನಲ್ಲಿ  ಮತ್ತೊಂದು ಭೀಕರ ರಸ್ತೆ ಅಪಘಾತ :  ಕಾರು ಪಲ್ಟಿಯಾಗಿ ಸ್ಥಳದಲ್ಲೇ ನಾಲ್ವರು ಸಾವು.!
BREAKING : ಪಾಕಿಸ್ತಾನಿ ನಟಿ, ಮಾಡೆಲ್ ‘ಹುಮೈರಾ ಅಸ್ಗರ್’ ‘ಅಪಾರ್ಟ್ ಮೆಂಟ್’ ನಲ್ಲಿ  ಶವವಾಗಿ ಪತ್ತೆ.!
BREAKING : ಬೆಂಗಳೂರಿನ ‘ಅಪಾರ್ಟ್ ಮೆಂಟ್’ ನಲ್ಲಿ ಮನುಷ್ಯನ ಅಸ್ಥಿಪಂಜರ ಪತ್ತೆ , ಬೆಚ್ಚಿಬಿದ್ದ ನಿವಾಸಿಗಳು !
SHOCKING : ಆಂಟಿ ಪ್ರೀತ್ಸೆ…! ಅಂತ ಸುತ್ತಾಟ : ಕೊಲೆಗೈದು ತನ್ನದೇ ಜಮೀನಿನಲ್ಲಿ ಶವ ಬಚ್ಚಿಟ್ಟ ಮಂಡ್ಯದ ಯುವಕ.!

Automotive

ದೀಪಾವಳಿಗೆ ಮಾರುತಿ ಸುಜುಕಿಯಿಂದ ಹೊಸ SUV ; ಇಲ್ಲಿದೆ ಡಿಟೇಲ್ಸ್‌ !
ʼಹೋಂಡಾ ರೆಬೆಲ್ 500ʼ ಭಾರತದಲ್ಲಿ ರಿಲೀಸ್‌ : ಇಲ್ಲಿದೆ ಬೆಲೆ ಸೇರಿದಂತೆ ಇತರೆ ವಿವರ !
ಇಲ್ಲಿದೆ 2025-2026 ರ ಟಾಪ್ 5 ಎಲೆಕ್ಟ್ರಿಕ್ ಸ್ಕೂಟರ್‌ಗಳ ಪಟ್ಟಿ !

Entertainment

ಮೊಬೈಲ್ ಗೀಳು ಎಷ್ಟರ ಮಟ್ಟಿಗೆ ಅಂದ್ರೆ…… ತನ್ನ ಮನೆ ಅಂತ ನೆರೆಮನೆಗೆ ಹೋದ ಯುವತಿ | Viral Video
7 ವರ್ಷದ ಮುನಿಸು: ಜೂಹಿ ಜೊತೆಗಿನ ಜಗಳ ಮುಗಿಸಲು ಅಮಿರ್ ಖಾನ್‌ಗೆ ರೀನಾ ದತ್ತಾ ಮನವಿ !
ಚೈತ್ರಾ ಕುಂದಾಪುರ ವಿರುದ್ಧ ಸಾಲು ಸಾಲು ಆರೋಪ ಮಾಡಿದ ತಂದೆ: ಮದುವೆಗೂ ಸರಿಯಾಗಿ ಕರೆದಿಲ್ಲ ಎಂದು ಅಸಮಾಧಾನ!

Sports

ಶ್ರೀಲಂಕಾ ಆಟಗಾರನ ವಿಚಿತ್ರ ಬೌಲಿಂಗ್ ಆಕ್ಷನ್ ಗೆ ಬ್ಯಾಟ್ಸ್‌ಮನ್ ಕಂಗಾಲು | Old Video
ಸಚಿನ್ ಮಾಜಿ ಪ್ರತಿಸ್ಪರ್ಧಿ ಈಗ ಲಂಡನ್‌ನಲ್ಲಿ ವರ್ಣಚಿತ್ರಕಾರ ; ʼಕ್ರಿಕೆಟ್‌ʼ ನಿಂದ ಗಳಿಸಿದ್ದಕ್ಕಿಂತ ಈಗ ಹೆಚ್ಚು ಸಂಪಾದನೆ !
114 ವರ್ಷದ ಮ್ಯಾರಥಾನ್ ಲೆಜೆಂಡ್ ಫೌಜಾ ಸಿಂಗ್ ಹಿಟ್ ಅಂಡ್ ರನ್ ಕೇಸ್: 30 ಗಂಟೆಯೊಳಗೆ ಅನಿವಾಸಿ ಭಾರತೀಯ ಅರೆಸ್ಟ್

Special

ಮಕ್ಕಳಿಗೆ ಔಷಧ ತಿನ್ನಿಸಬೇಕೇ…..? ಹಾಗಾದ್ರೆ ಮಾಡಿ ಈ ಉಪಾಯ
ಆರೋಗ್ಯದ ಮೇಲೆ ದುಷ್ಪರಿಣಾಮ ಬೀರುತ್ತೆ ಅವಸರವಸರವಾಗಿ ಸೇವಿಸುವ ಆಹಾರ
ಪ್ರತಿ ದಿನ ಆತಂಕದಲ್ಲೇ ಕಳೆಯುವವರಿಗಾಗಿ ಇಲ್ಲಿವೆ ಕೆಲ ಟಿಪ್ಸ್

About US

Kannada Dunia is a trusted Kannada news website, providing timely updates on Karnataka, India, and global events
Quick links
  • Privacy Policy
  • Terms and Conditions
Company
  • Contact us
  • About Us
Collaborate
  • Advertise
  • Write for us
© Kannada Dunia. All Rights Reserved.
Welcome Back!

Sign in to your account

Username or Email Address
Password

Lost your password?