ಬೆಂಗಳೂರು : ರಾಜ್ಯದ 1 -10 ನೇ ತರಗತಿ ವಿದ್ಯಾರ್ಥಿಗಳಿಗೆ ಮೌಲ್ಯಾಂಕನ ನಡೆಸುವ ಕುರಿತು ಶಿಕ್ಷಣ ಇಲಾಖೆ ಮಹತ್ವದ ಆದೇಶ ಹೊರಡಿಸಿದೆ.
2025-26ನೇ ಶೈಕ್ಷಣಿಕ ಸಾಲಿನಲ್ಲಿ ಕರ್ನಾಟಕ ರಾಜ್ಯ ಪಠ್ಯಕ್ರಮವನ್ನು ಅನುಸರಿಸುತ್ತಿರುವ 1 ರಿಂದ 10ನೇ ತರಗತಿ ಶಾಲೆಗಳಿಗೆ 2025-26ನೇ ಸಾಲಿನ ಶೈಕ್ಷಣಿಕ ಚಟುವಟಿಕೆಗಳ ವಾರ್ಷಿಕ ಕ್ರಿಯಾಯೋಜನೆ ಹಾಗೂ ಉಲ್ಲೇಖಗಳನ್ನಯ ಸದರಿ ಸುತ್ತೋಲೆಯನ್ನು ಹೊರಡಿಸಲಾಗಿದೆ. ಇದನ್ನು ಆಧರಿಸಿ ಶಾಲೆಗಳಲ್ಲಿ ಪಠ್ಯ ಬೋಧನೆ ಹಾಗೂ ಮೌಲ್ಯಾಂಕನ ಕುರಿತು ಈ ಕೆಳಕಂಡಂತೆ ಕ್ರಮವಹಿಸಲು ತಿಳಿಸಿದೆ.
- ರಾಜ್ಯ ಪಠ್ಯಕ್ರಮ ಅನುಸರಿಸುತ್ತಿರುವ ಸರ್ಕಾರಿ, ಅನುದಾನಿತ ಮತ್ತು ಅನುದಾನ ರಹಿತ ಶಾಲೆಗಳಲ್ಲಿ 1 ರಿಂದ 10ನೇ ತರಗತಿಯಲ್ಲಿ ವ್ಯಾಸಂಗ ಮಾಡುತ್ತಿರುವ ವಿದ್ಯಾರ್ಥಿಗಳಿಗೆ ದಿನಾಂಕ:29-05-2025 ರಿಂದ ಶೈಕ್ಷಣಿಕ ವರ್ಷವು ಪ್ರಾರಂಭವಾಗಿದೆ. ‘ಕಲಿಕಾ ಚೇತರಿಕೆ’ ಉಪಕ್ರಮ ಮತ್ತು ‘ಕಲಿಕಾ ಬಲವರ್ಧನೆ’ ಕಾರ್ಯಕ್ರಮದಡಿ ಕಲಿವಿನ ಫಲಾಧಾರಿತ ವಿದ್ಯಾರ್ಥಿಗಳ ಚಟುವಟಿಕೆ ಪುಸ್ತಕ ಹಾಗೂ ಶಿಕ್ಷಕರ ಚಟುವಟಿಕೆ ಕೋಶಗಳನ್ನು ಸಿದ್ಧಪಡಿಸಿ ಬೋಧನಾ ಕಲಿಕಾ ಪ್ರಕ್ರಿಯೆಯಲ್ಲಿ ಅಳವಡಿಸಿ ಕಲಿಕಾ ಅಂತರವನ್ನು ಬೆಸೆಯಲು ನಿರಂತರವಾಗಿ ಉಪಕ್ರಮಗಳನ್ನು ಅನುಷ್ಠಾನಿಸಲಾಗುತ್ತಿದೆ. ಅಲ್ಲದೇ ಮೌಲ್ಯಾಂಕನಕ್ಕೆ ಪೂರಕವಾಗಿ ಕಲಿಕಾ ಫಲ ಆಧಾರಿತ ಪ್ರಶ್ನೆಕೋಠಿಯನ್ನು ಸಿದ್ಧಪಡಿಸಿ ಅನುಷ್ಠಾನ ಸಂಬಂಧ ಮಾರ್ಗದರ್ಶನ ನೀಡಲಾಗಿದೆ.
- ವಿದ್ಯಾರ್ಥಿಗಳನ್ನು ಮುಂದಿನ ತರಗತಿಗೆ ಸಜ್ಜುಗೊಳಿಸಲು ಶೈಕ್ಷಣಿಕ ವರ್ಷದ ಆರಂಭದಲ್ಲಿ ‘ಸೇತುಬಂಧ’ ಕಾರ್ಯಕ್ರಮವನ್ನು ಜೂನ್ ತಿಂಗಳಿನಲ್ಲಿ ನಡೆಸುವುದು. 1 ರಿಂದ 10ನೇ ತರಗತಿಗಳಿಗೆ ಸೇತುಬಂಧ ಸಾಹಿತ್ಯವನ್ನು ಸಿದ್ಧಪಡಿಸಿ DSERT website ನಲ್ಲಿ ಅಳವಡಿಸಲಾಗಿದೆ. ಕಾರ್ಯಕ್ರಮ ಅನುಷ್ಠಾನಿಸುವ ಕುರಿತು ಸೇತುಬಂಧ ಸುತ್ತೋಲೆಯ ಮೂಲಕ ಮಾರ್ಗದರ್ಶನ ನೀಡಲಾಗಿದೆ.
3) ಉಲ್ಲೇಖ 1 ಮತ್ತು 3 ರನ್ನು ಆಧರಿಸಿ, ವಾರ್ಷಿಕ ಪಾಠ ಹಂಚಿಕೆ ಮಾಡಿಕೊಂಡು, ಕಲಿಕೆಯನ್ನು ಅನುಕೂಲಿಸುವುದು.
4) 2025-26ನೇ ಸಾಲಿನಿಂದ ರಾಜ್ಯ ಪಠ್ಯಕ್ರಮದ ಶಾಲೆಗಳಲ್ಲಿ ತರಗತಿ ಪ್ರಕ್ರಿಯೆಯಲ್ಲಿ ನಿರಂತರವಾಗಿ ಅಳವಡಿಸಲು ಅನುಕೂಲವಾಗುವಂತೆ ಹಾಗೂ ಪಾಠ ಆಧಾರಿತ ಮೌಲ್ಯಾಂಕನ ಸಾಮಗ್ರಿಯನ್ನು ಸಿದ್ಧಪಡಿಸಿ DSERT Website ನಲ್ಲಿ ಅಳವಡಿಸಿದೆ. - ಪಾಠ ಆಧಾರಿತ ಮೌಲ್ಯಾಂಕನಕ್ಕೆ (LBA) ಸಂಬಂಧಿಸಿದಂತೆ, ಪ್ರತಿ ಪಾಠದ ನಂತರ ಮಗುವಿನ ಕಲಿಕೆಯನ್ನು ದೃಢೀಕರಿಸಿಕೊಳ್ಳಲು ಪಾಠ ಆಧಾರಿತ ಮೌಲ್ಯಾಂಕನವನ್ನು (Unit Test) ಮಾಡುವುದು.
- ಕನ್ನಡ ಮಾಧ್ಯಮದ ಶಾಲೆಗಳಲ್ಲಿ ಪ್ರತಿ ಘಟಕದ ನಂತರ LBA ಪ್ರಶ್ನೆಕೋಠಿಯಿಂದ 20 ಅಂಕಗಳಿಗೆ ಹಾಗೂ ಮರುಸಿಂಚನದಿಂದ (6 ರಿಂದ 10ನೇ ತರಗತಿ) 05 ಅಂಕಗಳಿಗೆ ಪ್ರಶ್ನೆಪತ್ರಿಕೆ ಸಿದ್ಧಪಡಿಸಿ ಒಟ್ಟು 25 ಅಂಕಗಳಿಗೆ ಮೌಲ್ಯಾಂಕನ ಮಾಡುವುದು.
- ಉಳಿದ ತರಗತಿಗಳು ಮತ್ತು ಮಾಧ್ಯಮಗಳಿಗೆ 25 ಅಂಕಗಳಿಗೆ ಪ್ರಶ್ನೆಕೋಠಿಯಲ್ಲಿರುವ ಪ್ರಶ್ನೆಗಳನ್ನಾಧರಿಸಿ ಪ್ರಶ್ನೆಪತ್ರಿಕೆ ಸಿದ್ದಪಡಿಸಿ ಮೌಲ್ಯಾಂಕನ ಮಾಡಲು ಕ್ರಮವಹಿಸುವುದು.
- ಪಾಠ ಆಧಾರಿತ ಮೌಲ್ಯಾಂಕನ, ರೂಪಣಾತ್ಮಕ (FA) ಹಾಗೂ ಸಂಕಲನಾತ್ಮಕ (SA) ಮೌಲ್ಯಾಂಕನ ಕೈಗೊಂಡು, ಮಕ್ಕಳ ಕಲಿಕೆಯ ಪ್ರಗತಿಯನ್ನು SATS ನಲ್ಲಿ ಕಡ್ಡಾಯವಾಗಿ ದಾಖಲಿಸುವುದು
- SATS ನ ಪ್ರತಿ ಮೌಲ್ಯಾಂಕನದ ವಿಶ್ಲೇಷಣಾ ವರದಿಯನ್ನು ಆಧರಿಸಿ ಮಗುವಿನ ಶೈಕ್ಷಣಿಕ ಅಭಿವೃದ್ಧಿಗೆ ಕ್ರಮವಹಿಸುವುದು.2025-26ನೇ ಸಾಲಿನ ಶೈಕ್ಷಣಿಕ ವರ್ಷದಲ್ಲಿ ಸೇತುಬಂಧ ಕಾರ್ಯಕ್ರಮ, ಪಾಠ ಆಧಾರಿತ ಮೌಲ್ಯಾಂಕನ, ರೂಪಣಾತ್ಮಕ ಹಾಗೂ ಸಂಕಲನಾತ್ಮಕ ಮೌಲ್ಯಾಂಕನ ನಿರ್ವಹಿಸಲು ಅನುವಾಗುವಂತೆ ಸದರಿ ಸುತ್ತೋಲೆಯಲ್ಲಿ ಮಾಹಿತಿಯನ್ನು ನೀಡಲಾಗಿದೆ. ಅದರಂತೆ, ಮೇಲುಸ್ತುವಾರಿ ಅಧಿಕಾರಿಗಳು ಭೇಟಿ ಸಮಯದಲ್ಲಿ ನಿರಂತರವಾಗಿ ಶಾಲಾ ಹಂತದಲ್ಲಿ ಕ್ರಮವಹಿಸುತ್ತಿರುವ ಬಗ್ಗೆ ಖಾತ್ರಿಪಡಿಸಿಕೊಂಡು ಅನುಪಾಲನ ಮಾಡುವುದು.













You Might Also Like
TAGGED:ಶಿಕ್ಷಣ ಇಲಾಖೆ