BIG NEWS : ರಾಜ್ಯದಲ್ಲಿ 61 ಹೊಸ ರೈಲು ನಿಲ್ದಾಣಗಳ ಸ್ಥಾಪನೆ : ಸಚಿವ ವಿ.ಸೋಮಣ್ಣ ಘೋಷಣೆ

ತುಮಕೂರು : ರಾಜ್ಯದಲ್ಲಿ 61 ಹೊಸ ರೈಲು ನಿಲ್ದಾಣಗಳು ಸ್ಥಾಪನೆಯಾಗಲಿದೆ ಎಂದು ರೈಲ್ವೆ ಮತ್ತು ಜಲಶಕ್ತಿ ಖಾತೆ ಸಹಾಯಕ ಸಚಿವ ವಿ.ಸೋಮಣ್ಣ ಹೇಳಿದ್ದಾರೆ.

ತುಮಕೂರಿನ ತುರುವೇಕೆರೆಯಲ್ಲಿ ಆಯೋಜಿಸಲಾದ ಕೇಂದ್ರ ಸರ್ಕಾರದ ವಿಶೇಷ ಅಡಿಪ್ (ADIP) ಯೋಜನೆಯಡಿ ದಿವ್ಯಾಂಗರಿಗೆ ಉಚಿತ ಸಾಧನ ಸಲಕರಣೆಗಳ ವಿತರಣೆ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಮಾತನಾಡಿದ ಸಚಿವರು ಸುಮಾರು 2000 ಕೋಟಿ ರೂ ವೆಚ್ಚದಲ್ಲಿ ಹೊಸ ರೈಲು ನಿಲ್ದಾಣಗಳನ್ನು ಸ್ಥಾಪಿಸಲಾಗುತ್ತದೆ. ಹಾಗೂ 12 ಸಾವಿರ ಕೋಟಿ ರೂ ವೆಚ್ಚದಲ್ಲಿ ರೈಲ್ವೇ ನಿಲ್ದಾಣಗಳನ್ನು ಹೈಟೆಕ್ ಮಾದರಿಯಲ್ಲಿ ಅಭಿವೃದ್ದಿಪಡಿಸಲಾಗುತ್ತದೆ ಎಂದು ಹೇಳಿದರು.

ತುಮಕೂರಿನ ತುರುವೇಕೆರೆಯಲ್ಲಿ ಆಯೋಜಿಸಲಾದ ಕೇಂದ್ರ ಸರ್ಕಾರದ ವಿಶೇಷ ಅಡಿಪ್ (ADIP) ಯೋಜನೆಯಡಿ ದಿವ್ಯಾಂಗರಿಗೆ ಉಚಿತ ಸಾಧನ ಸಲಕರಣೆಗಳ ವಿತರಣೆ ಕಾರ್ಯಕ್ರಮದಲ್ಲಿ ಪಾಲ್ಗೊಂಡು, ಫಲಾನುಭವಿಗಳಿಗೆ ಸಾಧನ-ಸಲಕರಣೆ ವಿತರಿಸಿ, ಸಾರ್ವಜನಿಕರ ಅಹವಾಲು ಸ್ವೀಕರಿಸಿದರು. ಈ ಸಂದರ್ಭದಲ್ಲಿ, ಶಾಸಕರಾದ ಎಂ.ಟಿ ಕೃಷ್ಣಪ್ಪ ಅವರು, ಅಧಿಕಾರಿಗಳು ಹಾಗೂ ಸಾರ್ವಜನಿಕರು ಉಪಸ್ಥಿತರಿದ್ದರು.

 

Share This Article

Latest News

ಬಸನಗೌಡ ಪಾಟೀಲ್ ಯತ್ನಾಳ್ ಉಚ್ಚಾಟನೆಯಿಂದ ಬಿಜೆಪಿಗೆ ಹಿನ್ನಡೆಯಾಗುತ್ತದಾ ?

View Results

Loading ... Loading ...

Most Read