ನವದೆಹಲಿ: ‘ಎಮರ್ಜೆನ್ಸಿ’ ಸಿನಿಮಾ ಪ್ರಚಾರದಲ್ಲಿ ನಿರತರಾಗಿರುವ ಬಿಜೆಪಿ ಸಂಸದೆ ಹಾಗೂ ನಟಿ ಕಂಗನಾ ರನೌತ್ ಗೆ ಸೋಶಿಯಲ್ ಮೀಡಿಯಾದಲ್ಲಿ ಜೀವ ಬೆದರಿಕೆ ಬಂದಿದ್ದು, ಪೊಲೀಸರಿಗೆ ದೂರು ನೀಡಿದ್ದಾರೆ.
ಈ ಕುರಿತು ನಟಿ ಕಂಗನಾ ವಿಡಿಯೋವೊಂದನ್ನು ಹಂಚಿಕೊಂಡಿದ್ದಾರೆ. ವೀಡಿಯೊದಲ್ಲಿ, ಆರು ಪುರುಷರು ಕೋಣೆಯೊಳಗೆ ವೃತ್ತಾಕಾರದಲ್ಲಿ ಕುಳಿತಿರುವುದನ್ನು ಕಾಣಬಹುದು, ಅವರಲ್ಲಿ ಇಬ್ಬರು ನಿಹಾಂಗ್ ಸಿಖ್ಖರಂತೆ ವೇಷ ಧರಿಸಿದ್ದಾರೆ. ಚಿತ್ರ ಬಿಡುಗಡೆಯಾದರೆ, ಸಿಖ್ ಸಮುದಾಯವು ಅದನ್ನು ಖಂಡಿಸುತ್ತದೆ ಎಂದು ಒಬ್ಬ ವ್ಯಕ್ತಿ ಎಚ್ಚರಿಸುತ್ತಾನೆ, “ನಿಮ್ಮ ಚಲನಚಿತ್ರ ಬಿಡುಗಡೆ ಆದರೆ ಚಪ್ಪಲಿಗಳಿಂದ ಹೊಡೆಯುತ್ತೇವೆ ಎಂದು ಮತ್ತೋರ್ವ ಎಚ್ಚರಿಕೆ ನೀಡಿದ್ದಾನೆ.
ಇಂದಿರಾ ಗಾಂಧಿ ಪಾತ್ರದಲ್ಲಿ ಸಂಸದೆ ಕಂಗನಾ ರನೌತ್ ಕಾಣಿಸಿಕೊಂಡಿರುವ ‘Emergency’ ಚಿತ್ರದ ಟ್ರೇಲರ್ ರಿಲೀಸ್ ಆದ ಬೆನ್ನಲ್ಲೇ ಈ ಬೆದರಿಕೆ ಬಂದಿದೆ.‘Emergency’ ಚಿತ್ರವು ಮಾಜಿ ಪ್ರಧಾನಿ ಇಂದಿರಾ ಗಾಂಧಿ ಅವರ ಜೀವನಚರಿತ್ರೆಯನ್ನು ಆಧರಿಸಿದ ಸಿನಿಮವಾಗಿದೆ. ತಮ್ಮ ಈ ಚಿತ್ರದ ಮೂಲಕ ಯಾವುದೇ ರಾಜಕೀಯ ಪಕ್ಷವನ್ನು ಬೆಂಬಲಿಸಿಲ್ಲ ಎಂದು ಕಂಗನಾ ಹೇಳಿದ್ದಾರೆ.ಈ ಚಿತ್ರದಲ್ಲಿ ಅವರು ಭಾರತದ ಮೊದಲ ಮಹಿಳಾ ಪ್ರಧಾನಿ ಇಂದಿರಾ ಗಾಂಧಿ ಅವರ ಪಾತ್ರವನ್ನು ನಿರ್ವಹಿಸಿದ್ದಾರೆ. ಈ ಚಿತ್ರದಲ್ಲಿ ಅನುಪಮ್ ಖೇರ್, ಮಿಲಿಂದ್ ಸೋಮನ್, ಮಹಿಮಾ ಚೌಧರಿ, ದಿವಂಗತ ಸತೀಶ್ ಕೌಶಿಕ್ ಮತ್ತು ಶ್ರೇಯಸ್ ತಲ್ಪಾಡೆ ಪ್ರಮುಖ ಪಾತ್ರಗಳಲ್ಲಿದ್ದಾರೆ.ಈ ಚಿತ್ರವು ನವೆಂಬರ್ 24, 2023 ರಂದು ಬಿಡುಗಡೆಯಾಗಲಿದೆ ಎಂದು ಹೇಳಲಾಗಿದೆ.
https://twitter.com/RahulCh9290/status/1827991192845377910?ref_src=twsrc%5Etfw%7Ctwcamp%5Etweetembed%7Ctwterm%5E1827998480553349216%7Ctwgr%5E5b73ee76fd6fa87179f9d277159b29654e091246%7Ctwcon%5Es3_&ref_url=https%3A%2F%2Fzeenews.india.com%2Findia%2Factor-and-bjp-mp-kangana-ranaut-receives-death-threats-amidst-emergency-movie-promotion-watch-2783543.html