BIG NEWS: CPI ಮೇಲೆ ಹಲ್ಲೆ ಪ್ರಕರಣ; ಮಾಜಿ ಕಾರ್ಪೊರೇಟರ್ ಬಂಧನ

ಬೆಂಗಳೂರು: ಸಿಪಿಐ ಮೇಲೆ ಹಲ್ಲೆ ನಡೆಸಿದ ಆರೋಪ ಪ್ರಕರಣಕ್ಕೆ ಸಂಬಂಧಿಸಿದಂತೆ ಮಾಜಿ ಕಾರ್ಪೊರೇಟರ್ ವಿ.ಬಾಲಕೃಷ್ಣ ಅವರನ್ನು ಕಗ್ಗಲಿಪುರ ಪೊಲಿಸರು ಬಂಧಿಸಿದ್ದಾರೆ.

ವಿ.ಬಾಲಕೃಷ್ಣ ಯಲಚೇನಹಳ್ಳಿ ವಾರ್ಡ್ ನಂ 185ರ ಮಾಜಿ ಕಾರ್ಪೊರೇಟರ್. ಸಿಪಿಐ ವಿಜಯ್ ಕುಮಾರ್ ಹಾಗೂ ಮಾಜಿ ಕಾರ್ಪೊರೇಟರ್ ನಡುವೆ ನಿನ್ನೆ ವಾಗ್ವಾದ ನಡೆದಿತ್ತು. ಗಲಾಟೆ ವೇಳೆ ಬಾಲಕೃಷ್ಣ ಸಿಪಿಐ ಅವರ ಕತ್ತಿನ ಪಟ್ಟಿ ಹಿಡಿದು ಹಲ್ಲೆ ನಡೆಸಿದ್ದಾರೆ.

ಈ ಸಂಬಂಧ ಕಗ್ಗಲಿಪುರ ಪೊಲೀಸರು ವಿ.ಬಾಲಕೃಷ್ಣ ಅವರನ್ನು ವಶಕ್ಕೆ ಪಡೆದಿದ್ದಾರೆ. ಸಿಪಿಐ ವಿಜಯ್ ಕುಮಾರ್ ದೂರಿನ ಮೇರೆಗೆ ಕಗ್ಗಲಿಪುರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಐಪಿಸಿ ಸೆಕ್ಷನ್ 353 ಅಡಿ ಕರ್ತವ್ಯ ನಿರತ ಸರ್ಕಾರಿ ಅಧಿಕಾರಿ ಮೇಲೆ ಹಲ್ಲೆ ಐಪಿಸಿ ಸೆಕ್ಷನ್ 332 ಕರ್ತವ್ಯಕ್ಕೆ ಅಡ್ಡಿ ಪಡಿಸಿದ ಆರೋಪದಡಿ ಪ್ರಕರಣ ದಖಲಾಗಿದೆ. ಇಂದು ಬಾಲಕೃಷ್ಣ ಅವರನ್ನು ಕೋರ್ಟ್ ಗೆ ಹಾಜರುಪಡಿಸಿ ಹೆಚ್ಚಿನ ವಿಚಾರಣೆಗೆ ಪೊಲೀಸರು ಕಸ್ಟಡಿಗೆ ಪಡೆಯುವ ಸಾಧ್ಯತೆ ಇದೆ.

Share This Article

Latest News

ಬಸನಗೌಡ ಪಾಟೀಲ್ ಯತ್ನಾಳ್ ಉಚ್ಚಾಟನೆಯಿಂದ ಬಿಜೆಪಿಗೆ ಹಿನ್ನಡೆಯಾಗುತ್ತದಾ ?

View Results

Loading ... Loading ...

Most Read