BIG NEWS : ರಾಜ್ಯದ ʻಅರ್ಚಕರ ಮಕ್ಕಳಿಗೆ ಅನುಕಂಪದ ಹುದ್ದೆʼ : 34 ಸಾವಿರಕ್ಕೂ ಅಧಿಕ ʻಸಿʼ ಗ್ರೇಡ್ ದೇವಾಲಯಗಳಲ್ಲಿ ನೇಮಕಾತಿ

ಬೆಂಗಳೂರು : ಅರ್ಚಕರ ಮಕ್ಕಳಿಗೆ ರಾಜ್ಯ ಸರ್ಕಾರವು ಸಿಹಿಸುದ್ದಿ ನೀಡಿದ್ದು, ರಾಜ್ಯದ 34 ಸಾವಿರಕ್ಕೂ ಹೆಚ್ಚು ಸಿ ಗ್ರೇಡ್‌ ದೇವಾಲಯಗಳಲ್ಲಿ ಅನುಕಂಪ ಆಧಾರಿತ ಹುದ್ದೆಗಳನ್ನು ನೀಡಲು ರಾಜ್ಯ ಸರ್ಕಾರ ಆದೇಶ ಹೊರಡಿಸಿದೆ.

ಅರ್ಚಕರು ಅನಾರೋಗ್ಯಕ್ಕೆ ಒಳಗಾದರೆ, ವಯೋಸಹಜ ಸಮಸ್ಯೆಗಳಿಂದ ವೃತ್ತಿ ಮುಂದುವರಿಸಲು ಕಷ್ಟವಾದರೆ ಅಂತಹ ಸಂದರ್ಭದಲ್ಲಿ ಅವರ ಮಕ್ಕಳಿಗೆ ಅನುಕಂಪ ಅಧಾರದಲ್ಲಿ ಅರ್ಚಕರ ಹುದ್ದೆಗೆ ನೇಮಕ ಮಾಡಿಕೊಳ್ಳುಲು ಸರ್ಕಾರ ಆದೇಶ ಹೊರಡಿಸಿದೆ.

ಅರ್ಚಕರು ಮರಣ ಹೊಂದಿದ ಸಂದರ್ಭದಲ್ಲಿ ಮಾತ್ರ ಮಕ್ಕಳಿಗೆ ಅನುಕಂಪದ ಆಧಾರದಲ್ಲಿ ಹಕ್ಕು ಹಸ್ತಾಂತರಿಸುವ ಅವಕಾಶ ನೀಡಲಾಗಿತ್ತು. ಈಗ ಅನಾರೋಗ್ಯ ಪೀಡಿತ ಅರ್ಚಕರಿಂದ ಮಕ್ಕಳಿಗೆ ಹಕ್ಕು ಹಸ್ತಾಂತರಕ್ಕೆ ಅನುಮತಿ ನೀಡಿ ಧಾರ್ಮಿಕ ದತ್ತಿ ಇಲಾಖೆಯಿಂದ ಆದೇಶ ಹೊರಡಿಸಲಾಗಿದೆ.

ಅನಾರೋಗ್ಯಕ್ಕೀಡಾದ ಅರ್ಚಕರು, ವಯಸ್ಸಾದ ಸಂದರ್ಭದಲ್ಲಿ ಅನುವಂಶಿಗಳಿಗೆ ಹಕ್ಕು ಹಸ್ತಾಂತರ ಮಾಡಬಹುದಾಗಿದೆ. ಈ ಸಂಬಂಧ ಷರತ್ತಿನೊಂದಿಗೆ ತಹಶೀಲ್ದಾರ್ ಹಂತದಲ್ಲಿ ಕಾನೂನುಬದ್ಧ ವಾರಸುದಾರರಿಗೆ ಪೂಜೆಯ ಜವಾಬ್ದಾರಿ ವರ್ಗಾಯಿಸಲು ಅವಕಾಶ ಕಲ್ಪಿಸಲಾಗಿದೆ. ಅರ್ಚಕರು ತೀವ್ರ ಅನಾರೋಗ್ಯಕ್ಕೆ ತುತ್ತಾದ ಸಂದರ್ಭದಲ್ಲಿ ವೈದ್ಯಕೀಯ ದೃಢೀಕರಣ ಪಡೆಯಬೇಕು.

Share This Article

Latest News

ಬಸನಗೌಡ ಪಾಟೀಲ್ ಯತ್ನಾಳ್ ಉಚ್ಚಾಟನೆಯಿಂದ ಬಿಜೆಪಿಗೆ ಹಿನ್ನಡೆಯಾಗುತ್ತದಾ ?

View Results

Loading ... Loading ...

Most Read