ಬೆಂಗಳೂರು: 28ನೇ ಆವೃತ್ತಿಯ ಬೆಂಗಳೂರು ಟೆಕ್ ಶೃಂಗಸಭೆಯು ತುಮಕೂರು ರಸ್ತೆಯ ಬೆಂಗಳೂರು ಅಂತಾರಾಷ್ಟ್ರೀಯ ವಸ್ತುಪ್ರದರ್ಶನ ಕೇಂದ್ರದಲ್ಲಿ (ಬಿಐಇಸಿ) ಇದೇ ನವೆಂಬರ್ 18 ರಿಂದ ಮೂರು ದಿನ ನಡೆಯಲಿದೆ.
ಈ ಶೃಂಗಸಭೆಯಲ್ಲಿ 60 ದೇಶಗಳ ಪ್ರತಿನಿಧಿಗಳು ಭಾಗವಹಿಸಲಿದ್ದಾರೆ. ತಂತ್ರಜ್ಞಾನ ಮತ್ತು ಉದ್ಯಮವನ್ನು ಒಂದೇ ವೇದಿಕೆಗೆ ತರುವ ಜಾಗತಿಕ ಕಾರ್ಯಕ್ರಮ ಇದಾಗಿದ್ದು, ಈ ಬಾರಿ ಕ್ವಾಂಟಮ್ ಕಂಪ್ಯೂಟಿಂಗ್, ಎಐ, ಸ್ಪೇಸ್‌ಟೆಕ್, ಹೆಲ್ತ್ ಟೆಕ್‌ಗೆ ವಿಶೇಷ ಗಮನ ನೀಡಲಾಗುವುದು ಎಂದು ಮಾಹಿತಿ ಮತ್ತು ತಂತ್ರಜ್ಞಾನ ಸಚಿವ ಪ್ರಿಯಾಂಕ್ ಖರ್ಗೆ ತಿಳಿಸಿದ್ದಾರೆ.
ವಿಶೇಷತೆಗಳು:
ಮಾಹಿತಿ ತಂತ್ರಜ್ಞಾನ ಕ್ಷೇತ್ರದಲ್ಲಿ ಹೊಸ ಅವಕಾಶಗಳ ಹುಡುಕಾಟಕ್ಕೆ ಅವಕಾಶ, ಕೌಶಲಯುತ ಮಾನವ ಸಂಪನ್ಮೂಲ ಶಕ್ತಿಯ ಅನಾವರಣ
ರಾಷ್ಟ್ರೀಯ ಮತ್ತು ಅಂತಾರಾಷ್ಟ್ರೀಯ ಮಟ್ಟದಲ್ಲಿ ಹೂಡಿಕೆದಾರರು ಹಾಗೂ ನವೋದ್ಯಮಗಳಿಗೆ ಸೇತುವೆಯಾಗುವ ವೇದಿಕೆ
ಬೆಂಗಳೂರು ಬಿಟ್ಟು ಇತರೆ ನಗರಗಳಲ್ಲಿ ಹೊಸದಾಗಿ ರಚಿಸಿರುವ ಕ್ಲಸ್ಟರ್‌ಗಳಲ್ಲಿ ಅವಕಾಶಗಳನ್ನು ಕಲ್ಪಿಸುವ ಮೂಲಕ ಉದ್ಯೋಗ ಸೃಷ್ಟಿಗೆ ಪ್ರೋತ್ಸಾಹ
ಮುಂದಿನ 5 ವರ್ಷಗಳಲ್ಲಿ 50 ಲಕ್ಷಕ್ಕಿಂತ ಹೆಚ್ಚಿನ ಉದ್ಯೋಗ ಸೃಷ್ಟಿಯ ಗುರಿ
ನೆರೆ ರಾಜ್ಯಗಳು ವಿವಿಧ ವಿನಾಯಿತಿ ನೀಡಿ ಹೂಡಿಕೆದಾರರನ್ನು ಸೆಳೆಯುತ್ತಿರುವುದರಿಂದ ಪೈಪೋಟಿ ನೀಡಲು ಮುಕ್ತ ಅವಕಾಶ ಕಲ್ಪಿಸುವುದು
ನವೋದ್ಯಮಗಳಿಗೆ ಆರ್ಥಿಕ ನೆರವು, ವಿನಾಯಿತಿಗಳು, ಪ್ಲಗ್ ಆಂಡ್ ಪ್ಲೇನಂಥ ಸೌಲಭ್ಯವನ್ನು ಪ್ರಕಟಿಸುವುದು, ಆ ಮೂಲಕ ಈ ಕ್ಷೇತ್ರದ ಬೆಳವಣಿಗೆಗೆ ಬೇಕಾಗುವ ಪೂರಕ ಪರಿಸರಕ್ಕೆ ಒತ್ತು.
