ಬೆಂಗಳೂರು : ಇಂದಿನಿಂದ ಗ್ರೇಟರ್ ಬೆಂಗಳೂರು ಆಡಳಿತ ಅಧಿನಿಯಮ ಜಾರಿಯಾಗಲಿದೆ. ಗ್ರೇಟರ್ ಬೆಂಗಳೂರು ಆಡಳಿತಕ್ಕೆ ರಾಜ್ಯ ಸರ್ಕಾರದಿಂದ ಅಧಿಸೂಚನೆ ಹೊರಡಿಸಲಾಗಿದೆ.
ಪ್ರಯೋಜನಗಳೇನು?
ಆಡಳಿತ ವಿಕೇಂದ್ರೀಕರಣ :
ಸ್ಥಳೀಯ ಆಡಳಿತ ವಿಕೇಂದ್ರೀಕರಣ ಹೊಡಿಕೆ ಆಕರ್ಷಣೆ, ಆರ್ಥಿಕ ಬೆಳವಣಿಗೆ, ನಾಗರಿಕರ ಹೆಚ್ಚಿನ ಪಾಲ್ಗೊಳ್ಳುವಿಕೆ
ಹೆಚ್ಚಿನ ಸ್ವಾಯತ್ತತೆ :
ವಾರ್ಡ್ ಸಮಿತಿಗಳು ಮತ್ತು ನಗರ ಪಾಲಿಕೆಗಳಿಗೆ ಬಜೆಟ್ ಹಂಚಿಕೆ ಹಾಗೂ ಸ್ಥಳೀಯ ಅಭಿವೃದ್ಧಿ ವಿಚಾರಗಳಲ್ಲಿ ಹೆಚ್ಚಿನ ಹಿಡಿತ
ಸುಸ್ಥಿರ ನಗರ ನಿರ್ವಹಣೆ
ಬೆಂಗಳೂರಿನ ಪ್ರಗತಿಗಾಗಿ ಗರಿಷ್ಠ 7 ಹೊಸ ನಗರಪಾಲಿಕೆಗಳ ರಚನೆ
ಬೃಹತ್ ಹಾಗೂ ಸ್ಮಾರ್ಟ್ ಬೆಂಗಳೂರು:
ಭವಿಷ್ಯದ ಅಗತ್ಯತೆಗಳನ್ನು ಪೂರೈಸಲು ನಗರ ವ್ಯಾಪ್ತಿ 1400 ಚ.ಕಿ.ಮೀ.ಗೆ ವಿಸ್ತಾರಗೊಳ್ಳಲಿದೆ.
ಇಂದಿನಿಂದ ಗ್ರೇಟರ್ ಬೆಂಗಳೂರು ಆಡಳಿತ ಅಧಿನಿಯಮ- 2024 ಅನುಷ್ಠಾನ – ಬೆಂಗಳೂರಿನ ಸಮಗ್ರ ಅಭಿವೃದ್ಧಿಗಾಗಿ ಕ್ರಾಂತಿಕಾರಿ ಹೆಜ್ಜೆ!
— DK Shivakumar (@DKShivakumar) May 15, 2025
BBMP is now Greater Bengaluru Authority!
The GBGA 2024 is a game-changer in urban governance.#GreaterBengaluru pic.twitter.com/5swlnuMIwV
ಇಂದಿನಿಂದ ಬಿಬಿಎಂಪಿ ಗ್ರೇಟರ್ ಬೆಂಗಳೂರು ಅಥಾರಿಟಿಯಾಗಿ ಬದಲಾವಣೆಯಾಗಲಿದೆ. ಮೇ 5ರಿಂದಲೇ ಅನ್ವಯವಾಗುವಂತೆ ಗ್ರೇಟರ್ ಬೆಂಗಳೂರು ಅಥಾರಿಟಿ ಜಾರಿಗೆ ಮುಖ್ಯಮಂತ್ರಿ ಅಧ್ಯಕ್ಷರಾಗಿದ್ದು, ಉಪಮುಖ್ಯಮಂತ್ರಿ ಉಪಾಧ್ಯಕ್ಷರಾಗಿರುತ್ತಾರೆ. ರಾಜ್ಯ ಸರ್ಕಾರದಿಂದ ಗ್ರೇಟರ್ ಬೆಂಗಳೂರು ಪ್ರಾಧಿಕಾರ ಜಾರಿಗೆ ಅಧಿಕೃತ ಅಧಿಸೂಚನೆ ಹೊರಡಿಸಲಾಗಿದೆ.
ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ(ಬಿಬಿಎಂಪಿ) ಗುರುವಾರದಿಂದ ‘ಗ್ರೇಟರ್ ಬೆಂಗಳೂರು ಪ್ರಾಧಿಕಾರ”(ಜಿಬಿಎ) ಆಗಿ ಬದಲಾಗಲಿದ್ದು, ಹಾಲಿ ಬಿಬಿಎಂಪಿಯ 225 ವಾರ್ಡ್ ವ್ಯಾಪ್ತಿಯನ್ನೇ ಜಿಬಿಎ ವ್ಯಾಪ್ತಿ ಎಂದು ಅಧಿಸೂಚಿಸಲಾಗಿದೆ. ಹೊಸ ವ್ಯವಸ್ಥೆ ಪೂರ್ಣ ಜಾರಿಗೆ ಬರುವವರೆಗೆ ಹಾಲಿ ಪಾಲಿಕೆ ಪ್ರದೇಶ ವ್ಯಾಪ್ತಿಯಲ್ಲಿಯೇ ಎಂದಿನಂತೆ ಕಾರ್ಯನಿರ್ವಹಿಸಲಿದ್ದು, ನಂತರ ಗ್ರೇಟರ್ ಬೆಂಗಳೂರು ಅಧಿಕಾರದ ಅಡಿ ಮೂರರಿಂದ ಐದು ಪಾಲಿಕೆಗಳು ರಚನೆಯಾಗಲಿವೆ.