ಪ್ಲಾಸ್ಟರ್ ಆಫ್ ಪ್ಯಾರೀಸ್ (ಪಿ.ಓ.ಪಿ), ಹಾಗೂ ರಾಸಾಯನಿಕ ಗುಣವುಳ್ಳ ಗಣೇಶ ವಿಗ್ರಹಗಳನ್ನು ಮಾರಾಟ ಹಾಗೂ ವಿಸರ್ಜನೆಯನ್ನು ರಾಷ್ಟ್ರೀಯ ಹಸಿರು ನ್ಯಾಯ ಮಂಡಳಿ(ಮುಖ್ಯ ಪೀಠ) ರವರು ಮಾರಾಟ ಮತ್ತು ವಿಸರ್ಜನೆಯನ್ನು ತಡೆಹಿಡಿಯಲು 09-05-2023 ರಂದು ಆದೇಶಿಸಲಾಗಿರುತ್ತದೆ.
ಅದರಂತೆ ಕರ್ನಾಟಕ ರಾಜ್ಯ ಮಾಲಿನ್ಯ ನಿಯಂತ್ರಣ ಮಂಡಳಿ ರವರ ಸುತ್ತೋಲೆ ಪ್ರಕಾರ 21-08-2023 ರಲ್ಲಿ ಪಿ.ಓ.ಪಿ ಮತ್ತು ರಾಸಾಯನಿಕ ಗುಣವುಳ್ಳ ಗಣೇಶ ವಿಗ್ರಹಗಳನ್ನು ಮಾರಾಟ ನಿರ್ಭಂದಿಸಲು ತಿಳಿಸಲಾಗಿರುತ್ತದೆ. ಹಾಗೂ ಜಿಲ್ಲಾಧಿಕಾರಿಗಳು ಈ ಬಗ್ಗೆ ಕಠಿಣ ಕ್ರಮವಹಿಸಲು ತಿಳಿಸಿರುತ್ತಾರೆ. ಆದುದರಿಂದ ಹಾಸನ ಮಹಾನಗರ ಪಾಲಿಕೆ ವ್ಯಾಪ್ತಿಯಲ್ಲಿ ಮೇಲ್ಕಂಡ ವಿಗ್ರಹಗಳನ್ನು ಮಾರಾಟ ಮತ್ತು ವಿಸರ್ಜಿಸುವುದನ್ನು ನಿಷೇದಿಸಲಾಗಿರುತ್ತದೆ. ಸಾರ್ವಜನಿಕರು ಹಾಗೂ ಮಾರಾಟಗಾರರು ಪಿ.ಓ.ಪಿ. ಗಣಪತಿಯನ್ನು ಬಳಸದಂತೆ ಸೂಚಿಸಿದೆ. ಒಂದು ವೇಳೆ ಮಾರಾಟಗಾರರು ಕಾನೂನು ವಿರುದ್ಧವಾಗಿ ಮಾರಾಟ ಮಾಡಿದ್ದಲ್ಲಿ ಕಾನೂನು ರೀತ್ಯಾ ಕ್ರಮವಹಿಸಲಾಗುವುದು ಎಂದು ಮಹಾನಗರ ಪಾಲಿಕೆಯ ಆಯುಕ್ತರು ತಿಳಿಸಿದ್ದಾರೆ.