ಬೆಂಗಳೂರು : ಬೆಂಗಳೂರಿನಲ್ಲಿ ಬಿ-ಖಾತಾದಿಂದ ಎ-ಖಾತಾ ಪರಿವರ್ತನೆಗೆ ಹೊಸ ಪೋರ್ಟಲ್ ಆರಂಭವಾಗಿದ್ದು, ಆಸ್ತಿ ಮಾಲೀಕರು ಹೀಗೆ ಅರ್ಜಿ ಸಲ್ಲಿಸಬಹುದು.
ಗ್ರೇಟರ್ ಬೆಂಗಳೂರು ಪ್ರಾಧಿಕಾರ ವ್ಯಾಪ್ತಿಯ ಬಿ-ಖಾತಾ ನಿವೇಶನ ಮಾಲೀಕರಿಗೆ ಬಿ-ಖಾತಾದಿಂದ ಎ-ಖಾತಾಗೆ ಪರಿವರ್ತನೆ ಮತ್ತು ಹೊಸ ನಿವೇಶನಗಳಿಗೂ ಎ-ಖಾತಾ ನೀಡಲು ಹೊಸದಾಗಿ ಜಾರಿಗೊಳಿಸಿರುವ ಆನ್ಲೈನ್ ವ್ಯವಸ್ಥೆಗೆ ಇಂದು ಚಾಲನೆ ದೊರೆತಿದೆ.
ಅರ್ಜಿ ಸಲ್ಲಿಸುವ ವಿಧಾನ
- ನಿಮ್ಮ ಮೊಬೈಲ್ ಮತ್ತು ಓಟಿಪಿ ಬಳಸಿ https://bbmp.karnataka.gov.in/BtoAKhata
- ನಿಮ್ಮ ಅಂತಿಮ ಬಿ-ಖಾತೆಯ ಇಪಿಐಡಿ ಸಂಖ್ಯೆಯನ್ನು ನಮೂದಿಸಿ ವಿವರಗಳನ್ನು ಪಡೆಯಿರಿ
- ಮಾಲೀಕರ ಆಧಾರ್ ದೃಢೀಕರಿಸಿ
- ನಿವೇಶನವಿರುವ ಸ್ಥಳವನ್ನು ಮತ್ತು ನಿವೇಶನ ಮುಂಭಾಗದ ರಸ್ತೆಯ ಪ್ರಕಾರವನ್ನು ದೃಢಪಡಿಸಿ
- ಭೂ ಪರಿವರ್ತನೆಯಾದ ಮತ್ತು ಭೂ ಪರಿವರ್ತನೆಯಾಗದ ಎರಡೂ ನಿವೇಶನಗಳು ಅರ್ಹ (ಫ್ಲಾಟ್ಗಳಿಗೆ ಅರ್ಹತೆಯಿಲ್ಲ)
- ಸ್ವೀಕೃತಿಯನ್ನು ಪಡೆಯಿರಿ
- ನಗರ ಪಾಲಿಕೆ ವತಿಯಿಂದ ನಿವೇಶನಕ್ಕೆ ಭೇಟಿ ಮತ್ತು ದೃಢೀಕರಣ
- ಮಾರುಕಟ್ಟೆ ಮೌಲ್ಯದ ಶೇ. 5% ರಷ್ಟು ಮೊತ್ತವನ್ನು “ಏಕ ನಿವೇಶನ” ಅನುಮೋದನೆ ಶುಲ್ಕವಾಗಿ ಹಾಗೂ ಇತರೆ ಶುಲ್ಕಗಳನ್ನು ಪಾವತಿಸುವುದು
- ಸ್ವಯಂಕೃತ “ಏಕ ನಿವೇಶನ” ಅನುಮೋದನೆಯಾಗಿ ಅರ್ಹತಾನುಸಾರ ಎ-ಖಾತಾ ವಿತರಣೆ
- 2000 ಚ.ಮೀ.ಗೂ ಹೆಚ್ಚಿನ :
- ನೋಂದಾಯಿತ ವಾಸ್ತುಶಿಲ್ಪಿ ಅಥವಾ ಎಂಜಿನಿಯರ್ರನ್ನು ಸಂಪರ್ಕಿಸಿ
https://bpas.bbmp.gov.in ಮೂಲಕ ಆನ್ಲೈನ್ನಲ್ಲಿ ಅರ್ಜಿ ಸಲ್ಲಿಸಿ - ಅಗತ್ಯ ದಾಖಲೆಗಳು ಮತ್ತು ಕ್ಯಾಡ್ ಡ್ರಾಯಿಂಗ್ ಅನ್ನು ಅಪ್ ಲೋಡ್ ಮಾಡಿ
- ಆರಂಭಿಕ ಪರಿಶೀಲನಾ ಶುಲ್ಕ ರೂ.500 ಅನ್ನು ಪಾವತಿಸಿ
- ಆನ್ಲೈನ್ನಲ್ಲಿ ಅರ್ಜಿ ಸಲ್ಲಿಸಿ (ಫ್ಲಾಟ್ಗಳಿಗೆ ಅರ್ಹತೆಯಿಲ್ಲ)
- ನಿವೇಶನಕ್ಕೆ ಭೇಟಿ ನೀಡುವ ಮೂಲಕ ಪರಿಶೀಲನೆ
- ಅರ್ಹತಾನುಸಾರ ಅನುಮೋದನೆ
- ಅನ್ವಯವಾಗುವ ಶುಲ್ಕಗಳ ಪಾವತಿ
ಅರ್ಹತಾನುಸಾರ “ಏಕನಿವೇಶನ” ಅನುಮೋದನೆ ಪ್ರಮಾಣಪತ್ರ, ಡ್ರಾಯಿಂಗ್ ಮತ್ತು ಎ-ಖಾತಾ ವಿತರಣೆ
ಆತ್ಮೀಯ ಬೆಂಗಳೂರು ನಾಗರಿಕರೇ,
— DIPR Karnataka (@KarnatakaVarthe) October 15, 2025
ಗ್ರೇಟರ್ ಬೆಂಗಳೂರು ಪ್ರಾಧಿಕಾರ ವ್ಯಾಪ್ತಿಯ ಬಿ-ಖಾತಾ ನಿವೇಶನ ಮಾಲೀಕರಿಗೆ ಬಿ-ಖಾತಾದಿಂದ ಎ-ಖಾತಾಗೆ ಪರಿವರ್ತನೆ ಮತ್ತು ಹೊಸ ನಿವೇಶನಗಳಿಗೂ ಎ-ಖಾತಾ ನೀಡಲು ಹೊಸದಾಗಿ ಜಾರಿಗೊಳಿಸಿರುವ ಆನ್ಲೈನ್ ವ್ಯವಸ್ಥೆಗೆ ಇಂದು ಚಾಲನೆ ದೊರೆತಿದೆ.
A new era of property regularisation in Bengaluru!
The… pic.twitter.com/YcNRLzlIjO