ಬೆಂಗಳೂರು : ಶ್ರೀನಗರ ಕಿಟ್ಟಿ ಸ್ಯಾಂಡಲ್ ವುಡ್ ನ ಪ್ರತಿಭಾವಂತ ನಟ. ವಿಭಿನ್ನ ಮ್ಯಾನರಿಸಂನ ಸಿನಿಮಾಗಳ ಮೂಲಕ ಪ್ರೇಕ್ಷಕರನ್ನು ರಂಜಿಸಿದ ಶ್ರೀನಗರ ಕಿಟ್ಟಿ ಸದ್ಯ ಜೋಗತಿಯಾಗಿ ಕಾಣಿಸಿಕೊಳ್ಳುತ್ತಿದ್ದಾರೆ.
ಹೌದು, ಸಂಜು ವೆಡ್ಸ್ ಗೀತಾ-2 ಸಿನಿಮಾದ ಯಶಸ್ಸಿನ ನಂತರ ಶ್ರೀನಗರ ಕಿಟ್ಟಿ ‘ವೇಷಗಳು’ ಸಿನಿಮಾದಲ್ಲಿ ನಟಿಸುತ್ತಿದ್ದಾರೆ. ಈ ಚಿತ್ರದ ಮೂಲಕ ಕಿಟ್ಟಿ ಡಿಫರೆಂಟ್ ಆಗಿ ಪ್ರೇಕ್ಷಕರ ಮುಂದೆ ಬರಲಿದ್ದಾರೆ
ಈ ಚಿತ್ರ ಖ್ಯಾತ ಕಾದಂಬರಿಕಾರ ಹಾಗೂ ಕಿಟ್ಟಿ ಅವರ ಮಾವ ರವಿ ಬೆಳಗೆರೆ ಅವರ ಕಾದಂಬರಿಯನ್ನು ಆಧರಿಸಿದೆ. ಕಿಶನ್ ರಾವ್ ದಳವಿ ಚಿತ್ರಕ್ಕೆ ಆ್ಯಕ್ಷನ್ ಕಟ್ ಹೇಳುತ್ತಿದ್ದಾರೆ. ನಿನ್ನೆ ಚಿತ್ರದ ಟೀಸರ್ ರಿಲೀಸ್ ಆಗಿದೆ. ಚಿತ್ರದಲ್ಲಿ ಕಿಟ್ಟಿ ಬಸಪ್ಪ ಹಾಗೂ ಬಸಮ್ಮ ಎರಡು ಪಾತ್ರದಲ್ಲಿ ಕಾಣಸಿಕೊಳ್ಳಲಿದ್ದಾರೆ. ಮುಂದಿನ ತಿಂಗಳಿನಿಂದ ಸಿನಿಮಾದ ಶೂಟಿಂಗ್ ಆರಂಭವಾಗಲಿದೆ. ಚಿತ್ರದ ತಾರಾಬಳಗದ ಬಗ್ಗೆ ಮುಂದಿನ ದಿನಗಳಲ್ಲಿ ಮಾಹಿತಿ ನೀಡುತ್ತೇವೆ ಎಂದು ನಿರ್ದೇಶಕರು ಹೇಳಿದ್ದಾರೆ.
TAGGED:ಜೋಗತಿ