SHOCKING : ಕಲಬುರಗಿಯಲ್ಲಿ ಹಾಡಹಗಲೇ ‘ಜ್ಯುವೆಲ್ಲರಿ ಶಾಪ್’ ದರೋಡೆ : ಮಾಲೀಕರ ಕೈ- ಕಾಲು ಕಟ್ಟಿ 3 ಕೆಜಿ ಚಿನ್ನ ಲೂಟಿ.!

ಕಲಬುರಗಿ : ಕಲಬುರಗಿಯಲ್ಲಿ ನಡೆದ ‘ಜ್ಯುವೆಲ್ಲರಿ ಶಾಪ್’ ದರೋಡೆ ಪ್ರಕರಣ ಎಲ್ಲರನ್ನ ಬೆಚ್ಚಿ ಬೀಳಿಸಿದೆ. ಹಾಡಹಗಲೇ ಬಂದು ಇಂತಹ ಕೃತ್ಯ ಎಸಗಿರುವುದು ಅಚ್ಚರಿಗೆ ಕಾರಣವಾಗಿದೆ. ಮಾಲೀಕರ ಕೈ ಕಾಲು ಕಟ್ಟಿ ಬರೋಬ್ಬರಿ 3 ಕೆಜಿ ಚಿನ್ನ ಕದ್ದು ದುಷ್ಕರ್ಮಿಗಳು ಎಸ್ಕೇಪ್ ಆಗಿದ್ದಾರೆ.

ಕಲಬುರಗಿ ನಗರದ ಸರಾಫ್ ಬಜಾರ್ ನಲ್ಲಿ ಈ ಘಟನೆ ನಡೆದಿದೆ. ಜ್ಯುವೆಲ್ಲರಿ ಶಾಪ್ ಗೆ ಗನ್ ಹಿಡಿದು ನುಗ್ಗಿದ ಖದೀಮರು 2-3 ಕೆಜಿ ಚಿನ್ನ ದೋಚಿ ಎಸ್ಕೇಪ್ ಆಗಿದ್ದಾರೆ. ತಲೆಗೆ ಕ್ಯಾಪ್, ಮುಖಕ್ಕೆ ಮಾಸ್ಕ್ ಹಾಕಿಕೊಂಡು ಬಂದು ಈ ಕೃತ್ಯ ಎಸಗಿದ್ದಾರೆ.

ನಿನ್ನೆ ಸುಮಾರು ಮಧ್ಯಾಹ್ನ 12 :30 ರಿಂದ 1 ಗಂಟೆಯ ನಡುವೆ ದರೋಡೆಯಾಗಿದೆ. ಪ್ರತ್ಯಕ್ಷದರ್ಶಿಯ ಪ್ರಕಾರ ‘’ ದರೋಡೆಯಾದ ಬಳಿಕ ಅಂಗಡಿ ಮಾಲೀಕ ಜೋರಾಗಿ ಕಿರುಚಿಕೊಂಡರು. ಕೂಗಾಟ ಕೇಳಿ ನಾನು ಓಡಿ ಓದೆ. ಅಂಗಡಿ ಮಾಲೀಕರ ಕೈ ಕಾಲು ಕಟ್ಟಲಾಗಿತ್ತು. ಹಾಡಹಗಲೇ ಇಂತಹ ಘಟನೆ ನಡೆದಿರುವುದು ನಮಗಂತೂ ಭಾರಿ ಭಯವಾಗಿದೆ ‘’ ಎಂದು ಪ್ರತ್ಯಕ್ಷದರ್ಶಿಯೊಬ್ಬರು ಹೇಳಿದ್ದಾರೆ.

ಅಂಗಡಿಯಲ್ಲಿ 2-3 ಕೆಜಿ ಚಿನ್ನ ದರೋಡೆಯಾಗಿದೆ. ದರೋಡೆ ಪ್ರಕರಣದ ತನಿಖೆಗೆ 5 ವಿಶೇಷ ತಂಡ ರಚನೆಯಾಗಿದೆ. ಆದಷ್ಟು ಬೇಗ ಖದೀಮರನ್ನು ಹಿಡಿಯುತ್ತೇವೆ ಎಂದು ಕಲಬುರಗಿ ನಗರ ಪೊಲೀಸ್ ಆಯುಕ್ತ ಡಾ.ಶರಣಪ್ಪ ಹೇಳಿದ್ದಾರೆ.

Share This Article

Latest News

ಬಸನಗೌಡ ಪಾಟೀಲ್ ಯತ್ನಾಳ್ ಉಚ್ಚಾಟನೆಯಿಂದ ಬಿಜೆಪಿಗೆ ಹಿನ್ನಡೆಯಾಗುತ್ತದಾ ?

View Results

Loading ... Loading ...

Most Read