BIG NEWS: 2 ಕಡೆ ಟಿಕೆಟ್; ನಿರೀಕ್ಷೆಯೇ ಇರಲಿಲ್ಲ ಎಂದ ಸಚಿವ ಸೋಮಣ್ಣ

ಬೆಂಗಳೂರು: ವಸತಿ ಸಚಿವ ವಿ.ಸೋಮಣ್ಣ ಹಾಗೂ ಆರ್.ಅಶೋಕ್ ಅವರಿಗೆ ಬಿಜೆಪಿ ಎರಡು ಕ್ಷೇತ್ರಗಳ ಟಿಕೆಟ್ ಘೋಷಣೆ ಮಾಡಿದೆ. ಈ ಮೂಲಕ ಮಾಜಿ ಸಿಎಂ ಸಿದ್ದರಾಮಯ್ಯ ಹಾಗೂ ಕೆಪಿಸಿಸಿ ಅದ್ಯಕ್ಷ ಡಿ.ಕೆ.ಶಿವಕುಮಾರ್ ಅವರನ್ನು ಕಟ್ಟಿಹಾಕಲು ಪ್ಲಾನ್ ಮಾಡಿದೆ.

ಎರಡು ಕ್ಷೇತ್ರಗಳ ಟಿಕೆಟ್ ಸಿಕ್ಕ ಬಗ್ಗೆ ಪ್ರತಿಕ್ರಿಯಿಸಿರುವ ಸಚಿವ ಸೋಮಣ್ಣ, ವರುಣಾ ಹಾಗು ಚಾಮರಾಜನಗರ ಎರಡು ಕ್ಷೇತ್ರಗಳ ಟಿಕೆಟ್ ಸಿಕ್ಕಿದೆ. ಇದನ್ನು ನಾನು ನಿರೀಕ್ಷಿಸಿಯೇ ಇರಲಿಲ್ಲ. ನೂರಕ್ಕೆ ನೂರರಷ್ಟು ವರಿಷ್ಠರ ತೀರ್ಮಾನ ಸ್ವಾಗತಿಸುತ್ತೇನೆ ಎಂದರು.

ಕಳೆದ 40 ವರ್ಷಗಳಿಂದ ಅನೇಕ ಅಭಿವೃದ್ದಿ ಕೆಲಸ ಮಾಡಿದ್ದೇನೆ. ನಗರ ಪಾಲಿಕೆ ಸದಸ್ಯ, ಶಾಸಕ, ಸಚಿವನಾಗಿ ಕೆಲಸ ಮಾಡಿದ್ದೇನೆ ಇಂತಹ ಸಂದರ್ಭ ಬರುತ್ತೆ ಎಂದು ಕನಸಲ್ಲೂ ನಿರೀಕ್ಷಿಸಿರಲಿಲ್ಲ. ಯಾರೂ ಕೂಡ ದೃತಿಗೆಡಬೇಕಿಲ್ಲ. ಭಗವಂತ ಯಾರಿಗೆ ಏನು ಕೊಡಬೇಕೋ ಅದನ್ನು ಕೊಡುತ್ತಾನೆ ಎಂದು ಹೇಳಿದ್ದಾರೆ.

Share This Article

Latest News

ಬಸನಗೌಡ ಪಾಟೀಲ್ ಯತ್ನಾಳ್ ಉಚ್ಚಾಟನೆಯಿಂದ ಬಿಜೆಪಿಗೆ ಹಿನ್ನಡೆಯಾಗುತ್ತದಾ ?

View Results

Loading ... Loading ...

Most Read