BIG NEWS: 10ನೇ ಕ್ಲಾಸ್‌ ಓದಿದವರು ಕೂಡ ರೈಲು ಓಡಿಸಬಹುದು, ಲೊಕೊ ಪೈಲಟ್ ಉದ್ಯೋಗ ಗಿಟ್ಟಿಸಿಕೊಳ್ಳುವುದು ಹೇಗೆ ಗೊತ್ತಾ…?

ವೃತ್ತಿಜೀವನದ ಬಗ್ಗೆ ಗೊಂದಲಕ್ಕೊಳಗಾಗುವುದು ಸಹಜ. ಉನ್ನತ ಶಿಕ್ಷಣ ಪಡೆಯದೇ ಇದ್ದವರಲ್ಲಿ ಉದ್ಯೋಗದ ಬಗ್ಗೆ ಆತಂಕ ಹೆಚ್ಚಿರುತ್ತದೆ. ಉನ್ನತ ಶಿಕ್ಷಣ ಪಡೆಯದೇ ಇದ್ದರೂ ನೀವು ಸರ್ಕಾರಿ ಉದ್ಯೋಗವನ್ನು ಮಾಡಲು ಬಯಸಿದರೆ, ಲೊಕೊ ಪೈಲಟ್ ಕೆಲಸ ಉತ್ತಮ ಆಯ್ಕೆಯಾಗಿದೆ. 10ನೇ ತರಗತಿ ಉತ್ತೀರ್ಣರಾದ ಅಭ್ಯರ್ಥಿಗಳು ಸಹ ಈ ಕೆಲಸಕ್ಕೆ ಅರ್ಜಿ ಸಲ್ಲಿಸಬಹುದು. ಆದರೆ ಅದಕ್ಕೂ ಕೆಲವು ಷರತ್ತುಗಳಿವೆ.

ರೈಲಿನ ಚಾಲಕನನ್ನು ಲೋಕೋ ಪೈಲಟ್ ಎಂದು ಕರೆಯಲಾಗುತ್ತದೆ. ಲೊಕೊ ಪೈಲಟ್ ಹುದ್ದೆಯನ್ನು ಭಾರತವು ಗ್ರೂಪ್ ಬಿ ವಿಭಾಗದಲ್ಲಿ ಇರಿಸಿದೆ. ಭಾರತೀಯ ರೈಲ್ವೇಯಲ್ಲಿ, ರೈಲು ಕಾರ್ಯಾಚರಣೆಯ ಜವಾಬ್ದಾರಿ ಕೇವಲ ಲೋಕೋ ಪೈಲಟ್‌ನದ್ದಾಗಿದೆ. ಲೊಕೊ ಪೈಲಟ್ ಆಗಲು, ಅಭ್ಯರ್ಥಿಯು ಯಾವುದೇ ಮಾನ್ಯತೆ ಪಡೆದ ಸಂಸ್ಥೆಯಿಂದ 10ನೇ ಅಥವಾ 12ನೇ ತರಗತಿಯಲ್ಲಿ ಉತ್ತೀರ್ಣರಾಗಿರಬೇಕು. ಅಭ್ಯರ್ಥಿಯು ರಾಷ್ಟ್ರೀಯ ವೃತ್ತಿಪರ ತರಬೇತಿ ಅಥವಾ ರಾಜ್ಯ ಕೌನ್ಸಿಲ್ ಫಾರ್ ವೊಕೇಶನಲ್ ಟ್ರೈನಿಂಗ್‌ನಿಂದ ಅನುಮೋದಿಸಲಾದ ಸಂಸ್ಥೆಯಿಂದ ITI ಪ್ರೋಗ್ರಾಂನಲ್ಲಿ ಅರ್ಹತೆ ಪಡೆಯುವುದು ಕಡ್ಡಾಯವಾಗಿದೆ.

ಅಭ್ಯರ್ಥಿಯು ಭಾರತದ ಪ್ರಜೆಯಾಗಿರಬೇಕು. ಇದಲ್ಲದೇ ಸಾಮಾನ್ಯ ವರ್ಗದ ಅಭ್ಯರ್ಥಿಗಳ ಗರಿಷ್ಠ ವಯೋಮಿತಿಯನ್ನು 18 ರಿಂದ 30 ವರ್ಷಕ್ಕೆ ನಿಗದಿಪಡಿಸಲಾಗಿದೆ. ಮೀಸಲಾತಿ ವರ್ಗದ ಅಭ್ಯರ್ಥಿಗಳಿಗೆ ಗರಿಷ್ಠ ವಯೋಮಿತಿಯಲ್ಲಿ ಸಡಿಲಿಕೆ ನೀಡಲಾಗಿದೆ.ಭಾರತೀಯ ರೈಲ್ವೆಯಲ್ಲಿ ಲೋಕೋ ಪೈಲಟ್‌ಗಳ ನೇಮಕಾತಿಯನ್ನು ಮಾಡಲಾಗುತ್ತದೆ. ಖಾಲಿ ಹುದ್ದೆಗಳಿದ್ದಾಗ ನೀವು ಅರ್ಜಿ ಸಲ್ಲಿಸಬಹುದು. ಲೋಕೋ ಪೈಲಟ್ ಹುದ್ದೆಗೆ ನಿಮ್ಮ ಆಯ್ಕೆಯು ಲಿಖಿತ ಪರೀಕ್ಷೆ, ಸಂದರ್ಶನ ಮತ್ತು ವೈದ್ಯಕೀಯ ಪರೀಕ್ಷೆಯ ಆಧಾರದ ಮೇಲೆ ಇರುತ್ತದೆ. ಈ ಎಲ್ಲಾ ಪರೀಕ್ಷೆಗಳಲ್ಲಿ ಉತ್ತೀರ್ಣರಾದರೆ ಲೊಕೊ ಪೈಲಟ್ ಹುದ್ದೆಗೆ ಆಯ್ಕೆಯಾಗಬಹುದು.

Share This Article

Latest News

ಬಸನಗೌಡ ಪಾಟೀಲ್ ಯತ್ನಾಳ್ ಉಚ್ಚಾಟನೆಯಿಂದ ಬಿಜೆಪಿಗೆ ಹಿನ್ನಡೆಯಾಗುತ್ತದಾ ?

View Results

Loading ... Loading ...

Most Read