BIG NEWS: ಹೆಚ್.ಡಿ.ರೇವಣ್ಣ ಹೊಳೆನರಸಿಪುರದ ಮಹಾರಾಜ ಎಂದ ಶಾಸಕ ಪುಟ್ಟರಾಜು; ಯಾವ ಪಕ್ಷದಲ್ಲಿ ಕುಟುಂಬ ರಾಜಕಾರಣವಿಲ್ಲ….? ಎಂದು ಪ್ರಶ್ನೆ

ಮಂಡ್ಯ: ಹೆಚ್.ಡಿ.ರೇವಣ್ಣ ಕೆ.ಆರ್.ಪೇಟೆ ಕ್ಷೇತ್ರದಿಂದ ಸ್ಪರ್ಧಿಸುವ ಪ್ರಶ್ನೆಯೇ ಇಲ್ಲ. ಅವರು ಹೊಳೆನರಸಿಪುರದ ಮಹಾರಾಜ ಎಂದು ಶಾಸಕ ಪುಟ್ಟರಾಜು ತಿಳಿಸಿದ್ದಾರೆ.

ಮಂಡ್ಯದ ಪಾಂಡವಪುರದಲ್ಲಿ ಮಾತನಾಡಿದ ಶಾಸಕ ಪುಟ್ಟರಾಜು, ಹೆಚ್.ಡಿ.ರೇವಣ್ಣ, ಕೆ.ಆರ್.ಪೇಟೆಗೆ ಬರುವ ಪ್ರಶ್ನೆಯೇ ಇಲ್ಲ. ಅವರು ಹೊಳೆನರಸಿಪುರದ ಮಹಾರಾಜ. ಹೊಳೆ ನರಸಿಪುರದಿಂದಲೇ ಹೆಚ್ಚಿನ ಲೀಡ್ ನಲ್ಲಿ ಗೆಲ್ತಾರೆ. ಭವಾನಿ ರೇವಣ್ಣ ಹಾಸನ ಕ್ಷೇತ್ರದ ಆಕಾಂಕ್ಷಿಯಾಗಿದ್ದಾರೆ. ಈ ಬಗ್ಗೆ ದೇವೇಗೌಡರ ಮಾರ್ಗದರ್ಶನದಲ್ಲಿ ರೇವಣ್ಣ, ಕುಮಾರಣ್ಣ ನಿರ್ಧಾರ ಮಾಡಲಿ ಎಂದರು.

ಜೆಡಿಎಸ್ ಕುಟುಂಬ ರಾಜಕಾರಣ ಎಂದು ಆರೋಪಿಸುವುದಾದರೆ ಯಡಿಯೂರಪ್ಪನವರ ಇಬ್ಬರು ಮಕ್ಕಳು ರಾಜಕಾರಣದಲ್ಲಿಲ್ವಾ? ಸಿದ್ದರಾಮಯ್ಯ ಮಗ ರಾಜಕಾರಣದಿಲ್ಲಿಲ್ಲವೇ? ಯಡಿಯೂರಪ್ಪ ಮೊಮ್ಮಕ್ಕಳಿಗೆ, ಸಿದ್ದರಾಮಯ್ಯ ಮಗನಿಗೆ ಸೀಟ್ ಕೊಟ್ಟಿಲ್ವಾ? ಯಾವ ಪಕ್ಷದಲ್ಲಿ ಕುಟುಂಬ ರಾಜಕಾರಣವಿಲ್ಲ? ಎಂದು ಪ್ರಶ್ನಿಸಿದ್ದಾರೆ.

Share This Article

Latest News

ಇದೇ ಅವಧಿಯಲ್ಲಿ ಮುಖ್ಯಮಂತ್ರಿಯಾಗಲಿದ್ದಾರಾ ಡಿ.ಕೆ. ಶಿವಕುಮಾರ್‌ ?

View Results

Loading ... Loading ...

Most Read