BIG NEWS: ಹನುಮನನ್ನು ಕೂಡಿ ಹಾಕಲು ಹೊರಟ ಕಾಂಗ್ರೆಸ್; ಬಜರಂಗದಳ ನಿಷೇಧಿಸುವುದಾಗಿ ಘೋಷಿಸಿದ ಕೈಪಡೆ ವಿರುದ್ಧ ಪ್ರಧಾನಿ ಮೋದಿ ವಾಗ್ದಾಳಿ

ವಿಜಯನಗರ: ಕಾಂಗ್ರೆಸ್ ನವರು ಶ್ರೀರಾಮಚಂದ್ರನನ್ನು ಬಂಧಿಸಿದ್ದರು. ಈಗ ಹನುಮನನ್ನು ಬಂಧಿಸಲು ಹೊರಟಿದ್ದಾರೆ. ಕಾಂಗ್ರೆಸ್ ನವರಿಗೆ ಹನುಮಂತನನ್ನು ಕಂಡರೂ ಆಗುತ್ತಿಲ್ಲ ಎಂದು ಪ್ರಧಾನಿ ನರೇಂದ್ರ ಮೋದಿ ವಾಗ್ದಾಳಿ ನಡೆಸಿದ್ದಾರೆ.

ವಿಜಯನಗರದಲ್ಲಿ ಬಿಜೆಪಿ ಸಮಾವೇಶದಲ್ಲಿ ಮಾತನಾಡಿದ ಪ್ರಧಾನಿ ಮೋದಿ, ಕಾಂಗ್ರೆಸ್ ಪ್ರಣಾಳಿಕೆಯಲ್ಲಿನ ಅಂಶಗಳ ಬಗ್ಗೆ ಟೀಕಿಸಿದರು. ಕಾಂಗ್ರೆಸ್ ಅಧಿಕಾರಕ್ಕೆ ಬಂದರೆ ಬಜರಂಗದಳ ನಿಷೇಧ ಮಾಡುವುದಾಗಿ ಪ್ರಣಾಳಿಕೆಯಲ್ಲಿ ಘೋಷಿಸಿದೆ. ಕಾಂಗ್ರೆಸ್ ಹನುಮನನ್ನು ಕೂಡಿಹಾಕಲು ಹೊರಟಿದೆ. ಕಾಂಗ್ರೆಸ್ ನಿಂದ ಹನುಮ ಭಕ್ತರಿಗೆ ತೊಂದರೆಯಾಗುತ್ತಿದೆ ಎಂದು ಕಿಡಿಕಾರಿದರು.

ಕರ್ನಾಟಕವನ್ನು ದೇಶದಲ್ಲಿಯೇ ನಂಬರ್ ಒನ್ ರಾಜ್ಯವನ್ನಾಗಿ ಮಾಡಲು ನಾವು ಆಂಜನೇಯನ ಆಶೀರ್ವಾದ ಪಡೆಯಲು ಇಲ್ಲಿಗೆ ಬಂದಿದ್ದೇವೆ. ಈ ನಿಟ್ಟಿನಲ್ಲಿ ನಿನ್ನೆ ರಾಜ್ಯ ಬಿಜೆಪಿ ಸಂಕಲ್ಪ ಪತ್ರ ಬಿಡುಗಡೆ ಮಾಡಿತು. ಇದು ವಿಕಾಸದ ಪ್ರಣಾಳಿಕೆಯಾಗಿದೆ ಎಂದರು.

ವಿಜಯನಗರದ ಇತಿಹಾಸ ಭಾರತದ ಗೌರವ. ಶ್ರೀಕೃಷ್ಣದೇವರಾಯರು ಈ ಕ್ಷೇತ್ರವನ್ನು ಸಾಕಷ್ಟು ಅಭಿವೃದ್ಧಿ ಮಾಡಿದ್ದರು. ಜಗತ್ತಿನಲ್ಲಿಯೇ ಕರ್ನಾಟಕದ ಹೆಸರು ಮಿಂಚುವಂತೆ ಮಾಡಿದರು. ಇಡೀ ದೇಶವೇ ವಿಜಯನಗರ ಸಾಮ್ರಾಜ್ಯದಿಂದ ಪ್ರೇರಣೆ ಹೊಂದುತ್ತಿದೆ. ನಮ್ಮ ಮಹಾರಾಜರು ಹಾಕಿಕೊಟ್ಟ ದಾರಿಯಲ್ಲಿ ನಾವು ಸಾಗಬೇಕಿದೆ ಎಂದು ಹೇಳಿದರು.

Share This Article

Latest News

ಬಸನಗೌಡ ಪಾಟೀಲ್ ಯತ್ನಾಳ್ ಉಚ್ಚಾಟನೆಯಿಂದ ಬಿಜೆಪಿಗೆ ಹಿನ್ನಡೆಯಾಗುತ್ತದಾ ?

View Results

Loading ... Loading ...

Most Read