BIG NEWS: ಸುದ್ದಿಗೋಷ್ಠಿಯಲ್ಲಿ ಭಾವುಕರಾಗಿ ಕಣ್ಣೀರಿಟ್ಟ ಸಚಿವ ಸೋಮಣ್ಣ

ಬೆಂಗಳೂರು: ನಾನು ಯಾರ ಮುಲಾಜಿಗೂ ಒಳಗಾಗಿಲ್ಲ, ಕೆಲವೊಬ್ಬರು ನನ್ನ ಬಗ್ಗೆ ತೇಜೋವಧೆ ಮಾಡುತ್ತಿದ್ದಾರೆ ಎಂದು ವಸತಿ ಸಚಿವ ವಿ.ಸೋಮಣ್ಣ ಭಾವುಕರಾದ ಘಟನೆ ನಡೆದಿದೆ.

ಸಚಿವ ಸೋಮಣ್ಣ ಕಾಂಗ್ರೆಸ್ ಸೇರ್ಪಡೆಯಾಗಲಿದ್ದಾರೆ ಎಂಬ ವದಂತಿ ಹಾಗೂ ಡಿ.ಕೆ.ಶಿವಕುಮಾರ್ ಜೊತೆ ಪ್ರಯಾಣಿಸುತ್ತಿದ್ದ ಫೋಟೋ ವೈರಲ್ ವಿಚಾರವಾಗಿ ಬೆಂಗಳೂರಿನಲ್ಲಿ ಸುದ್ದಿಗೋಷ್ಠಿ ನಡೆಸಿದ ಸಚಿವ ಸೋಮಣ್ಣ, ನಾನು ಪ್ರಾಮಾಣಿಕ ವ್ಯಕ್ತಿ. ಬಿಜೆಪಿಯನ್ನು ಬಿಟ್ಟು ಬೇರೆ ಪಕ್ಷಕ್ಕೆ ಸೇರುವುದಿಲ್ಲ, ಕಾಂಗ್ರೆಸ್ ಸೇರುತ್ತೇನೆ ಎಂಬುದು ಸುಳ್ಳು ವದಂತಿ ಎಂದು ಹೇಳುತ್ತಾ ಭಾವುಕರಾದರು.

ಸ್ವಾಭಿಮಾನ ಮಾರಾಟಮಾಡಿ ನಾನು ಜೀವನ ನಡೆಸುವವನಲ್ಲ. ನಾನು ಬೆಂಗಳೂರಿಗೆ ಹೊಟ್ಟೆ ಪಾಡಿಗಾಗಿ ಬಂದೆ. 6X8 ಅಡಿ ಜಾಗದಲ್ಲಿ ವಾಸ ಮಾಡಿದವನು ನಾನು. ಸುಳ್ಳು ಹೇಳಲು ನನಗೆ ಬರಲ್ಲ. ಶಿವಕುಮಾರಶ್ರೀ ನನ್ನ ಆದರ್ಶ. ಪಿಗ್ಮಿ ಕಲೆಕ್ಟ್ ಮಾಡಿ ಜೀವನ ಸಾಗಿಸಿದ್ದೇನೆ. ಸಾಕಷ್ಟು ಕಷ್ಟ ನಷ್ಟಗಳನ್ನು ಅನುಭವಿಸಿ ಇಂದು ಸಚಿವ ಸ್ಥಾನಕ್ಕೆ ಬಂದಿದ್ದೇನೆ. ಕೆಲವರು ನನ್ನ ತೇಜೋವಧೆಗೆ ಯತ್ನಿಸಿ ಸುಳ್ಳು ಆರೋಪ ಮಾಡುತ್ತಿದ್ದಾರೆ ಎಂದು ಬೇಸರಿಸಿದರು.

Share This Article

Latest News

ಬಸನಗೌಡ ಪಾಟೀಲ್ ಯತ್ನಾಳ್ ಉಚ್ಚಾಟನೆಯಿಂದ ಬಿಜೆಪಿಗೆ ಹಿನ್ನಡೆಯಾಗುತ್ತದಾ ?

View Results

Loading ... Loading ...

Most Read