BIG NEWS: ಸಿದ್ದರಾಮಯ್ಯಗೆ ತಾಕತ್ತಿದ್ದರೆ ಸ್ವಂತ ಪಕ್ಷ ಕಟ್ಟಿ 5 ಸೀಟ್ ಗೆದ್ದು ತೋರಿಸಲಿ; ಮಾಜಿ ಸಿಎಂ H.D. ಕುಮಾರಸ್ವಾಮಿ ಸವಾಲು

ರಾಯಚೂರು: ವಿಧಾನಸಭಾ ಚುನಾವಣೆ ಸಮೀಪಿಸುತ್ತಿದ್ದಂತೆ ರಾಜಕೀಯ ನಾಯಕರ ಸವಾಲು-ಪ್ರತಿ ಸವಾಲು ಜೋರಾಗಿದೆ. ಈ ಬಾರಿ ಜೆಡಿಎಸ್ ಪಕ್ಷ ನೆಲಕಚ್ಚಲಿದೆ. 40 ಸೀಟ್ ಗೆಲ್ಲುವುದೂ ಕಷ್ಟಕರ ಎಂಬ ವಿಪಕ್ಷ ನಾಯಕ ಸಿದ್ದರಾಮಯ್ಯ ಹೇಳಿಕೆಗೆ ತಿರುಗೇಟು ನೀಡಿರುವ ಮಾಜಿ ಸಿಎಂ ಹೆಚ್.ಡಿ. ಕುಮಾರಸ್ವಾಮಿ, ಸಿದ್ದರಾಮಯ್ಯ ಅವರಿಗೆ ತಾಕತ್ತಿದ್ದರೆ ಸ್ವಂತ ಪಕ್ಷ ಕಟ್ಟಿ 5 ಸೀಟ್ ಗೆದ್ದು ತೋರಿಸಲಿ ಎಂದು ಸವಾಲು ಹಾಕಿದ್ದಾರೆ.

ರಾಯಚೂರಿನಲ್ಲಿ ಮಾತನಾಡಿದ ಮಾಜಿ ಸಿಎಂ ಕುಮಾರಸ್ವಾಮಿ, ಸಿದ್ದರಾಮಯ್ಯ ಜೆಡಿಎಸ್ ನಿಂದ ಬೆಳೆದು ಹೋದವರು. ನಾವೆಲ್ಲಾ ಇದ್ದಾಗ 50 ಸೀಟ್ ಗೆದ್ದಿದ್ದು ಅಂತಿದ್ದಾರೆ. ನೀವೆಲ್ಲಾ ಬಿಟ್ಟು ಹೋದ ಮೇಲೆ 40 ಸೀಟ್ ಏಕಾಂಗಿಯಾಗಿ ಗೆದ್ದಿದೀನಿ. ಅವರಷ್ಟೇ ಅಲ್ಲ, ನಮ್ಮ ಪರಿಶ್ರಮವಿದೆ ಎಂದು ಹೇಳಿದರು.

ಇಷ್ಟೆಲ್ಲ ಮಾತನಾಡುವ ಸಿದ್ದರಾಮಯ್ಯನವರು ತಾಕತ್ತಿದ್ದರೆ ಕಾಂಗ್ರೆಸ್ ಬಿಟ್ಟು ಸ್ವಂತ ಪಕ್ಷ ಕಟ್ಟಿ ಕೇವಲ 5 ಸೀಟುಗಳನ್ನು ಗೆದ್ದುಕೊಂಡು ಬರಲಿ ಎಂದು ಹೇಳಿದರು.

ಕಾಂಗ್ರೆಸ್ ಪಕ್ಷ ಮುಗಿದುಹೋಗಿದೆ. ಬಿಜೆಪಿಗೆ ಇಲ್ಲಿ ಪರ್ಯಾಯ ಪಕ್ಷವಿಲ್ಲ. ಬೆಳೆಯಲು ಭಗವಂತ ನಮಗೆ ಶಕ್ತಿ ಕೊಟ್ಟಿದ್ದಾನೆ. ಜನರ ಬದುಕನ್ನು ಸರಿಪಡಿಸುವ ಶಕ್ತಿ ನನ್ನಲ್ಲಿದೆ. ಕರ್ನಾಟಕದಲ್ಲಿ ಈ ಚುನಾವಣೆ ಬಳಿಕ ಜೆಡಿಎಸ್ ಜಿಲ್ಲೆಗಳಲ್ಲಿ, ರಾಜ್ಯದಲ್ಲಿ ಮಾತ್ರವಲ್ಲ ಇಡೀ ದೇಶದಲ್ಲಿ ಬೆಳಗುತ್ತದೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.

Share This Article

Latest News

ಬಸನಗೌಡ ಪಾಟೀಲ್ ಯತ್ನಾಳ್ ಉಚ್ಚಾಟನೆಯಿಂದ ಬಿಜೆಪಿಗೆ ಹಿನ್ನಡೆಯಾಗುತ್ತದಾ ?

View Results

Loading ... Loading ...

Most Read