BIG NEWS: ಸಿಎಂ ಮೂಗಿನ ನೇರದಲ್ಲೇ ವರ್ಗಾವಣೆ ದಂಧೆ ನಡೆದಿದೆ; ಸರ್ಕಾರದ ವಿರುದ್ಧ ಮುಂದುವರೆದ ಕುಮಾರಸ್ವಾಮಿ ವಾಗ್ದಾಳಿ

 ಬೆಂಗಳೂರು: ವರ್ಗಾವಣೆ ದಂಧೆ ಬಗ್ಗೆ ನಿನ್ನೆ ಪೆನ್ ಡ್ರೈವ್ ಬಾಂಬ್ ಸಿಡಿಸಿರುವ ಮಾಜಿ ಸಿಎಂ ಹೆಚ್.ಡಿ. ಕುಮಾರಸ್ವಾಮಿ, ಕಾಂಗ್ರೆಸ್ ಸರ್ಕಾರದ ವಿರುದ್ಧ ಆರೋಪ ಮುಂದುವರೆಸಿದ್ದಾರೆ.

ಬೆಂಗಳೂರಿನಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಮಾಜಿ ಸಿಎಂ ಕುಮಾರಸ್ವಾಮಿ, ಮುಖ್ಯಮಂತ್ರಿಗಳ ಮೂಗಿನ ನೇರಕ್ಕೆ ವರ್ಗಾವಣೆ ದಂಧೆ ನಡೆಯುತ್ತಿದೆ. ಎಲ್ಲಾ ಹುದ್ದೆಗಳೂ ಹಣದಿಂದಲೇ ವರ್ಗಾವಣೆಯಾಗುತ್ತಿದೆ. ಸಣ್ಣ ಹುದ್ದೆಯಿಂದ ಹಿಡಿದು ಡಿವೈ ಎಸ್ ಪಿ ಹುದ್ದೆವರೆಗೂ ಭ್ರಷ್ಟಾಚಾರ ನಡೆದಿದೆ ಎಂದು ಹೇಳಿದ್ದಾರೆ.

ಹೊಸ ಸರ್ಕಾರ ಬಂದಾಗ ಎಲ್ಲಾ ಇಲಾಖೆಗಳಲ್ಲಿಯೂ ವರ್ಗಾವಣೆ ನಡೆಯುವುದು ಸರ್ವೇ ಸಾಮಾನ್ಯ ಎಂಬುದು ಗೊತ್ತಿದೆ. ಆದರೆ ಇವರು ಯಾವ ಮಾನದಂಡಗಳ ಮೇಲೆ ವರ್ಗಾವಣೆಗಳನ್ನು ಮಾಡುತ್ತಿದ್ದಾರೆ? ಗೃಹಕಚೇರಿಯಲ್ಲಿಯೇ ನಡೆಯುತ್ತಿರುವ ಭ್ರಷ್ಟಾಚಾರದ ಬಗ್ಗೆ ಇವರಿಗೆ ಗೊತ್ತಿಲ್ಲವೇ? ಸಿಎಂ ಮೂಲಕವೇ ವರ್ಗಾವಣೆ ಆದೇಶಗಳಾಗುತ್ತಿವೆ ಎಂದು ಕಿಡಿಕಾರಿದ್ದಾರೆ.

ನನ್ನನ್ನು ಹಿಟ್ ಆಂಡ್ ರನ್ ಅಂತಾರೆ ಏನಾದರೂ ಹೇಳಿಕೊಳ್ಳಲಿ. ಹೀಗೇ ಮಾತನಾಡುತ್ತಿರಲಿ ಸಮಯಕ್ಕೆಸರಿಯಾಗಿ ದಾಖಲೆ ರಿಲೀಸ್ ಮಾಡ್ತೀನಿ. ಪೆನ್ ಡ್ರೈವ್ ಬಿಡುಗಡೆಯಾದರೆ ಸಂಬಂಧಪಟ್ಟ ಮಂತ್ರಿ ರಾಜೀನಾಕೊಡಬೇಕಾಗುತ್ತದೆ ಎಂದು ಹೇಳಿದ್ದಾರೆ.

Share This Article

Latest News

ಬಸನಗೌಡ ಪಾಟೀಲ್ ಯತ್ನಾಳ್ ಉಚ್ಚಾಟನೆಯಿಂದ ಬಿಜೆಪಿಗೆ ಹಿನ್ನಡೆಯಾಗುತ್ತದಾ ?

View Results

Loading ... Loading ...

Most Read