BIG NEWS: ಸಿಎಂ ಬೊಮ್ಮಾಯಿ ಆರೋಪಕ್ಕೆ ವಿಪಕ್ಷ ನಾಯಕ ಸಿದ್ದರಾಮಯ್ಯ ಉತ್ತರ

ಬೆಂಗಳೂರು: ಸಿದ್ದರಾಮಯ್ಯ ಸರ್ಕಾರದ ಅವಧಿಯಲ್ಲಿ ಲೋಕಾಯುಕ್ತ ಮುಚ್ಚಿ ಹಾಕಿ ಎಸಿಬಿ ಆರಂಭ ಮಾಡಿದರು ಎಂಬ ಸಿಎಂ ಬಸವರಾಜ್ ಬೊಮ್ಮಾಯಿ ಅವರ ಆರೋಪಕ್ಕೆ ಉತ್ತರಿಸಿರುವ ವಿಪಕ್ಷ ನಾಯಕ ಸಿದ್ದರಾಮಯ್ಯ ಮುಖ್ಯಮಂತ್ರಿಯಾಗಿರುವುದರಿಂದ ಬಸವರಾಜ್ ಬೊಮ್ಮಾಯಿ ಅವರಿಗೆ ಸ್ವಲ್ಪ ಕಾನೂನು ಜ್ಞಾನವಿರಬಹುದು ಅಂದುಕೊಂಡಿದ್ದೇನೆ ಎಂದು ತಿರುಗೇಟು ನೀಡಿದ್ದಾರೆ.

ಬೆಂಗಳೂರಿನಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಸಿದ್ದರಾಮಯ್ಯ, ಸಿಎಂ ನಿನ್ನೆ ಸದನದಲ್ಲಿ ಕೆಲ ವಿಚಾರವಾಗಿ ವೀರಾವೇಷದಲ್ಲಿ ಮಾತನಾಡಿದ್ದಾರೆ. ಸುಳ್ಳು ಹೇಳಿದ್ದಾರೆ. ಎಸಿಬಿ ರಚನೆ ಮಾಡಿ ಲೋಕಾಯುಕ್ತ ಮುಚ್ಚಿದರು ಎಂದು ಆರೋಪಿಸಿದ್ದಾರೆ. ದೇಶದ 16 ರಾಜ್ಯಗಳಲ್ಲಿ ಎಸಿಬಿ ಹಾಗೂ ಲೋಕಾಯುಕ್ತ ಎರಡೂ ಸಂಸ್ಥೆಗಳಿವೆ. ಇದನ್ನು ಅವರ ಅಡ್ವಕೆಟ್ ಜನರಲ್ ನಾವದಗಿ ಅವರೇ ಹೇಳಿದ್ದಾರೆ. ಕೋರ್ಟ್ ನಲ್ಲಿ ವಾದ ಮಂಡಿಸುವಾಗ ಎಜಿ ನಾವದಗಿ ತಿಳಿಸಿದ್ದಾರೆ. ಇವರದ್ದೇ ಪಕ್ಷ ಅಧಿಕಾರದಲ್ಲಿರುವ ಉತ್ತರ ಪ್ರದೇಶದಲ್ಲಿಯೂ ಎಸಿಬಿ ಇದೆ ಎಂದರು.

ಲೋಕಾಯುಕ್ತ ನ್ಯಾಯಮೂರ್ತಿ ಭಾಸ್ಕರ್ ರಾವ್ ಪುತ್ರನಿಂದ ಭ್ರಷ್ಟಾಚಾರ ನಡೆಯಿತು. ಭ್ರಷ್ಟಾಚಾರ ತಡೆಗೆ ನಾವು ಎಸಿಬಿ ರಚನೆ ಮಾಡಿದೆವು. ಭ್ರಷ್ಟಾಚಾರ ತಡೆಗೆ ಬಿಜೆಪಿ ಸರ್ಕಾರ ಯಾವುದೇ ಕ್ರಮ ಕೈಗೊಂಡಿಲ್ಲ ಎಂದು ವಾಗ್ದಾಳಿ ನಡೆಸಿದರು.

Share This Article

Latest News

ಇದೇ ಅವಧಿಯಲ್ಲಿ ಮುಖ್ಯಮಂತ್ರಿಯಾಗಲಿದ್ದಾರಾ ಡಿ.ಕೆ. ಶಿವಕುಮಾರ್‌ ?

View Results

Loading ... Loading ...

Most Read