BIG NEWS: ಶಿವಮೊಗ್ಗ ಏರ್ ಪೋರ್ಟ್ ನಿಂದ ಬೆಂಗಳೂರಿಗೆ ಇಂಡಿಗೋ ವಿಮಾನ ಹಾರಾಟ; ಇಲ್ಲಿದೆ ಟಿಕೆಟ್ ದರದ ಮಾಹಿತಿ

ಶಿವಮೊಗ್ಗ: ಶಿವಮೊಗ್ಗ ನೂತನ ವಿಮಾನ ನಿಲ್ದಾಣದಿಂದ ಬೆಂಗಳೂರಿಗೆ ಆಗಸ್ಟ್ 11ರಿಂದ ಇಂಡಿಗೋ ವಿಮಾನ ಹಾರಾಟ ನಡೆಸಲಿದೆ ಎಂದು ಸಂಸದ ಬಿ.ವೈ. ರಾಘವೆಂದ್ರ ತಿಳಿಸಿದ್ದಾರೆ.

ಶಿವಮೊಗ್ಗದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಸಂಸದ ಬಿ.ವೈ. ರಾಘವೇಂದ್ರ, ಶಿವಮೊಗ್ಗದಿಂದ 11 ಸ್ಥಳಗಳಿಗೆ ವಿಮಾನ ಹಾರಾಟ ಸೌಲಭ್ಯ ನೀಡುವಂತೆ ಈ ಹಿಂದೆ ವಿಮಾನಯಾನ ಸಚಿವಾಲಯಕ್ಕೆ ಪತ್ರ ಬರೆದಿದ್ದೆ. ಈಗ ಆಗಸ್ಟ್ 11ರಿಂದ ಬೆಂಗಳೂರಿಗೆ ಇಂಡಿಗೋ ವಿಮಾನ ಹಾರಾಟ ಆರಂಭವಾಗಲಿದ್ದು, ಬೆಂಗಳೂರು ಹೊರತುಪಡಿಸಿ ಇತರ 4 ಸ್ಥಳಗಳಿಗೆ ಶಿವಮೊಗ್ಗದಿಂದ ವಿಮಾನ ಸೌಲಭ್ಯ ಕಲ್ಪಿಸಲಾಗಿದೆ ಎಂದರು.

ಸಧ್ಯ ನಾಲ್ಕು ಮಾರ್ಗಗಳಿಗೆ ಅನುಮತಿ ನೀಡಲಾಗಿದ್ದು, ರೂಟ್-1 – ಹೈದರಾಬಾದ್, ಶಿವಮೊಗ್ಗ, ಗೋವಾ, ಶಿವಮೊಗ್ಗ, ತಿರುಪತಿ, ಹೈದರಾಬಾದ್

ರೂಟ್ -2 – ಹೈದರಾಬಾದ್, ಶಿವಮೊಗ್ಗ, ದೆಹಲಿ, ಶಿವಮೊಗ್ಗ, ಚೆನ್ನೈ, ಶಿವಮೊಗ್ಗ, ಬೆಂಗಳೂರು, ಶಿವಮೊಗ್ಗ, ಹೈದರಾಬಾದ್

ರೂಟ್-3 – ಹೈದರಾಬಾದ್, ಶಿವಮೊಗ್ಗ, ಹೈದರಾಬಾದ್

ರೂಟ್-4 – ಬೆಂಗಳೂರು, ಸೇಲಂ, ಕೊಚ್ಚಿನ್, ಸೇಲಂ, ಬೆಂಗಳೂರು, ಶಿವಮೊಗ್ಗಕ್ಕೆ ವಿಮಾನ ಸಂಚರಿಸಲಿದೆ ಎಂದು ವಿವರಿಸಿದರು.

ಶಿವಮೊಗ್ಗದಿಂದ ಬೆಂಗಳೂರು ನಡುವಿನ ಪ್ರಯಾಣಕ್ಕೆ ಪ್ರತಿ ವ್ಯಕ್ತಿಗೆ 2,500 ರಿಂದ 3000 ರೂ. ಟಿಕೆಟ್ ದರ ಇರಲಿದೆ ಎಂದು ಹೇಳಲಾಗುತ್ತಿದೆ.

Share This Article

Latest News

ಇದೇ ಅವಧಿಯಲ್ಲಿ ಮುಖ್ಯಮಂತ್ರಿಯಾಗಲಿದ್ದಾರಾ ಡಿ.ಕೆ. ಶಿವಕುಮಾರ್‌ ?

View Results

Loading ... Loading ...

Most Read