BIG NEWS: ಶಿಕಾರಿಪುರದಿಂದಲೇ ವಿಜಯೇಂದ್ರ ಸ್ಪರ್ಧೆ ? ಪರೋಕ್ಷ ಸುಳಿವು ನೀಡಿದ ಯಡಿಯೂರಪ್ಪ

ಮುಂಬರುವ ವಿಧಾನಸಭಾ ಚುನಾವಣೆಯಲ್ಲಿ ಬಿ.ಎಸ್. ಯಡಿಯೂರಪ್ಪನವರ ಪುತ್ರ ಬಿ.ವೈ. ವಿಜಯೇಂದ್ರ ಬಿಜೆಪಿ ಅಭ್ಯರ್ಥಿಯಾಗಿ ಸ್ಪರ್ಧಿಸುವುದು ಬಹುತೇಕ ಖಚಿತವಾಗಿದ್ದು, ಆದರೆ ಯಾವ ಕ್ಷೇತ್ರದಿಂದ ಎಂಬ ಕುತೂಹಲ ರಾಜಕೀಯ ವಲಯದಲ್ಲಿ ಮನೆ ಮಾಡಿತ್ತು.

ಚುನಾವಣಾ ರಾಜಕೀಯದಿಂದ ಈಗಾಗಲೇ ನಿವೃತ್ತಿ ಘೋಷಿಸಿರುವ ಯಡಿಯೂರಪ್ಪನವರು, ತಾವು ಈವರೆಗೂ ಪ್ರತಿನಿಧಿಸುತ್ತಿದ್ದ ಶಿಕಾರಿಪುರದಿಂದಲೇ ವಿಜಯೇಂದ್ರ ಸ್ಪರ್ಧಿಸಬೇಕೆಂಬ ಬಯಕೆ ಹೊಂದಿದ್ದರು. ಅಲ್ಲದೆ ತಮ್ಮ ಮನದಿಂಗಿತವನ್ನು ಪರೋಕ್ಷವಾಗಿ ಯಡಿಯೂರಪ್ಪ ಹೊರ ಹಾಕಿದ್ದರು.

ಬಿಜೆಪಿ ಹೈಕಮಾಂಡ್ ಯಡಿಯೂರಪ್ಪನವರ ಮನದಿಂಗಿತಕ್ಕೆ ಸ್ಪಂದಿಸಿದಂತೆ ಕಾಣುತ್ತಿದೆ. ಹೀಗಾಗಿ ಕಲಬುರಗಿಯಲ್ಲಿ ಮಾತನಾಡಿರುವ ಯಡಿಯೂರಪ್ಪನವರು, ಪಕ್ಷದ ನಾಯಕತ್ವ ಎಲ್ಲಿ ಸ್ಪರ್ಧಿಸಲು ಹೇಳುತ್ತದೋ ಅಲ್ಲಿಂದ ವಿಜಯೇಂದ್ರ ಕಣಕ್ಕಿಳಿಯಲಿದ್ದಾರೆ. ಬಹುತೇಕ ಅವರು ಶಿಕಾರಿಪುರದಿಂದ ಸ್ಪರ್ಧಿಸಬಹುದು ಎನ್ನುವ ಮೂಲಕ ಅದೇ ಕ್ಷೇತ್ರ ಪಕ್ಕಾ ಎಂಬ ಸುಳಿವು ನೀಡಿದ್ದಾರೆ.

Share This Article

Latest News

ಬಸನಗೌಡ ಪಾಟೀಲ್ ಯತ್ನಾಳ್ ಉಚ್ಚಾಟನೆಯಿಂದ ಬಿಜೆಪಿಗೆ ಹಿನ್ನಡೆಯಾಗುತ್ತದಾ ?

View Results

Loading ... Loading ...

Most Read