BIG NEWS: ಶಾಸಕನಾದ ನನ್ನ ಗಮನಕ್ಕೆ ತರದೇ ಅರಸಿಕೆರೆಯಲ್ಲಿ JDS ಸಮಾವೇಶ ಆಯೋಜನೆ; ಶಿವಲಿಂಗೇಗೌಡ ಆಕ್ರೋಶ

ಹಾಸನ: ಇಂದು ಹಾಸನ ಜಿಲ್ಲೆಯ ಅರಸಿಕೆರೆ ಕ್ಷೇತ್ರದಲ್ಲಿ ಜೆಡಿಎಸ್ ಬೃಹತ್ ಸಮಾವೇಶ ಆಯೋಜಿಸಿದ್ದು, ಅರಸಿಕೆರೆ ಹೊಸ ಅಭ್ಯರ್ಥಿಯನ್ನು ಘೋಷಣೆ ಮಾಡುವ ಸಾಧ್ಯತೆ ಇದೆ.

ಅರಸಿಕೆರೆ ಜೆಡಿಎಸ್ ಶಾಸಕ ಶಿವಲಿಂಗೆಗೌಡರು ಸಮಾವೇಶದಿಂದ ದೂರ ಉಳಿಯಲು ತೀರ್ಮಾನಿಸಿದ್ದು, ತಮಗೆ ಮಾಹಿತಿಯೇ ನೀಡದೆ ಸಮಾವೇಶ ಮಾಡುತ್ತಿದ್ದಾರೆ ಎಂದು ಅಸಮಾಧಾನ ಹೊರಹಾಕಿದ್ದಾರೆ.

ನಾನು ಜೆಡಿಎಸ್ ಶಾಸಕ, ನನ್ನ ಗಮನಕ್ಕೆ ತರದೇ ಅರಸಿಕೀಯಲ್ಲಿ ಸಮಾವೇಶ ಮಾಡುತ್ತಿದ್ದಾರೆ. ತಿಂಗಳ ಹಿಂದೆಯೇ ಬೇರೆ ಅಭ್ಯರ್ಥಿಯನ್ನು ಗುರುತಿಸಿದ್ದಾರೆ. ಈಗ ನನಗೆ ಯಾವುದೇ ಮಾಹಿತಿ ನೀಡದೇ ಸಮಾವೇಶ ಆಯೋಜಿಸಿದ್ದಾರೆ. ಬ್ಯಾನರ್ ನಲ್ಲಿ ನಾಮಕಾವಸ್ತೆಗೆ ನನ್ನ ಹೆಸರು ಹಾಕಿದ್ದಾರೆ ಎಂದು ಕಿಡಿ ಕಾರಿದ್ದಾರೆ.

ಒಬ್ಬ ವ್ಯಕ್ತಿ ಟಿಕೆಟ್ ಘೋಷಣೆ ಆಗಿದೆ ಅಂತಾ ಹೇಳುತ್ತಿದ್ದಾನೆ. ಇಂದು ಅರಸಿಕೆರೆ ಜೆಡಿಎಸ್ ಟಿಕೆಟ್ ಬಗ್ಗೆ ತೀರ್ಮಾನ ಮಾಡುತ್ತಾರೆ ಎಂದು ಹೇಳಿದ್ದಾರೆ.

Share This Article

Latest News

ಬಸನಗೌಡ ಪಾಟೀಲ್ ಯತ್ನಾಳ್ ಉಚ್ಚಾಟನೆಯಿಂದ ಬಿಜೆಪಿಗೆ ಹಿನ್ನಡೆಯಾಗುತ್ತದಾ ?

View Results

Loading ... Loading ...

Most Read