ಶ್ರೀನಗರ: ಮಾತಾ ವೈಷ್ಣೋದೇವಿ ಯಾತ್ರಾ ಮಾರ್ಗದಲ್ಲಿ ಭೂಕುಸಿತ ಸಂಭವಿಸಿದ್ದು, ಹಲವರು ಗಾಯಗೊಂಡಿದ್ದಾರೆ. ಅನೇಕರು ಅವಶೇಷಗಳಡಿ ಸಿಲುಕಿಕೊಂಡಿರುವ ಶಂಕೆ ವ್ಯಕ್ತವಾಗಿದೆ.
ಜಮ್ಮು-ಕಾಶ್ಮೀರದ ಕಾತ್ರಾದಲ್ಲಿ ವೈಷ್ಣೋದೇವಿ ಯಾತ್ರಾ ಮಾರ್ಗದ ಬಂಗಾಂಗಾ ಪ್ರದೇಶದ ಬಳಿ ಏಕಾಏಕಿ ಭೂ ಕುಸಿತ ಸಂಭವಿಸಿದೆ. ಕೆಲವರು ಅವಶೇಶಗಳಡಿ ಸಿಲುಕಿದ್ದಾರೆ ಎಂದು ತಿಳಿದುಬಂದಿದೆ.
ಕಾತ್ರಾದಿಂದ ಭವನಕ್ಕೆ ಹೋಗುವ ಹಳೆ ಮಾರ್ಗದಲ್ಲಿ ಬಂಗಾಂಗಾ ಪ್ರದೇಶದಲ್ಲಿ ಬೆಟ್ಟದಿಂದ ಇದ್ದಕ್ಕಿದ್ದಂತೆ ಬೃಹತ್ ಕಲ್ಲು, ಮಣ್ಣುಗಳು ಕುಸಿದು ಬಿದ್ದಿವೆ. ರಕ್ಷಣಾ ಕಾರ್ಯಾಚರಣೆ ನಡೆಸಲಾಗಿದ್ದು, ಈ ಮಾರ್ಗವನ್ನು ಕೆಲ ಸಮಯದವರೆಗೆ ಸ್ಥಗಿತಗೊಳಿಸಲಾಗಿದೆ.