BIG NEWS: ವಿಧಾನಸಭಾ ಚುನಾವಣೆಗೆ ಬಿಜೆಪಿ ಭರ್ಜರಿ ಸಿದ್ಧತೆ; ವಿಜಯಸಂಕಲ್ಪ ಯಾತ್ರೆ, ಪ್ರಣಾಳಿಕೆ ತಯಾರಿಗೆ ಉಸ್ತುವಾರಿಗಳ ನೇಮಕ

ಬೆಂಗಳೂರು: ಮುಂಬರುವ ವಿಧನಾಸಭಾ ಚುನಾವಣೆಗೆ ರಾಜ್ಯ ಬಿಜೆಪಿ ಭರ್ಜರಿ ಸಿದ್ಧತೆ ನಡೆಸಿದ್ದು, ರಾಜ್ಯದಾದ್ಯಂತ ಪಕ್ಷ ಸಂಘಟನೆಯನ್ನು ಬಲಗೊಳಿಸಲು ಹಲವು ಕಾರ್ಯಕ್ರಮಗಳನ್ನು ಹಮ್ಮಿಕೊಂಡಿದ್ದು, ಉಸ್ತುವಾರಿ ಪ್ರಮುಖರನ್ನು ನೇಮಕ ಮಾಡಿದೆ.

ಕಾರ್ಯಕ್ರಮಗಳಲ್ಲಿ, ಯಾತ್ರೆ ಪ್ರಮುಖರಾಗಿ ಸಚಿವರ ಸಿ‌ಸಿ ಪಾಟೀಲ್, ಪಕ್ಷದ ಎಲ್ಲ ಮೋರ್ಚಾಗಳ ಜಿಲ್ಲಾ ಸಮಾವೇಶ ಸಂಚಾಲಕರಾಗಿ ಬಿ.ವೈ ವಿಜಯೇಂದ್ರ, ಫಲಾನುಭವಿಗಳ ಸಮ್ಮೇಳನದ ಸಂಚಾಲಕರಾಗಿ‌ ಹಾಲಪ್ಪ ಆಚಾರ ನೇಮಕಗೊಂಡಿದ್ದಾರೆ.

ಜತೆಗೆ ಪ್ರಣಾಳಿಕೆ ತಯಾರಿ‌ ಸಲಹಾ ಅಭಿಯಾನದ ಸಂಚಾಲಕರಾಗಿ‌ ಸಚಿವರಾದ ಸುಧಾಕರ್, ನೇಮಕಗೊಂಡಿದ್ದಾರೆ. ಯಾತ್ರೆಗಳ ಸಂಚಾಲಕರಾಗಿ‌ ಚಲವಾದಿ ಎನ್ ಸ್ವಾಮಿ, ರಘುನಾಥ್‌ರಾವ್ ಮಲ್ಕಾಪುರೆ, ಅರುಣ್ ಶಹಾಪುರ, ಎಂ. ರಾಜೇಂದ್ರ ನೇಮಕವಾಗಿದ್ದಾರೆ.

ರಾಜ್ಯದಾದ್ಯಂತ ನಡೆಯಲಿರುವ ವಿಡಿಯೋ ವ್ಯಾನ್‌ ಪ್ರಚಾರ ಪ್ರಮುಖರಾಗಿ ಎಸ್.ವಿ.ರಾಘವೇಂದ್ರ, ಪ್ರೇಮಾನಂದ ಶೆಟ್ಟಿ, ಭಾರತಿ ಮಗ್ದುಂ, ಅಜಿತ್ ಹೆಗಡೆ ಬಳ್ಳಿಕೇರಿ ಅವರನ್ನು ನಿಯುಕ್ತಿಗೊಳಿಸಲಾಗಿದೆ.

Share This Article

Latest News

ಬಸನಗೌಡ ಪಾಟೀಲ್ ಯತ್ನಾಳ್ ಉಚ್ಚಾಟನೆಯಿಂದ ಬಿಜೆಪಿಗೆ ಹಿನ್ನಡೆಯಾಗುತ್ತದಾ ?

View Results

Loading ... Loading ...

Most Read