ನವದೆಹಲಿ: ಪ್ರಧಾನಿ ನರೇಂದ್ರ ಮೋದಿ ಅವರಿಗೆ ಬಿಜೆಪಿ ಅಗತ್ಯವಿಲ್ಲ. ಆದರೆ, ಬಿಜೆಪಿಗೆ ಮೋದಿ ಅಗತ್ಯವಾಗಿದ್ದಾರೆ ಎಂದು ಬಿಜೆಪಿ ಸಂಸದ ನಿಶಿಕಾಂತ್ ದುಬೆ ಹೇಳಿಕೆ ನೀಡಿದ್ದು, ಬಿರುಗಾಳಿ ಎಬ್ಬಿಸಿದ್ದಾರೆ.
ಸಂದರ್ಶನವೊಂದರಲ್ಲಿ ಮಾತನಾಡಿದ ಅವರು, ಮೋದಿಯವರಿಗೆ ಅವರ ದೇಹ ಸ್ಪಂದಿಸುವವರೆಗೂ ಅವರೇ ಪ್ರಧಾನಿಯಾಗಿರುತ್ತಾರೆ, ಮುರಾರ್ಜಿ ದೇಸಾಯಿ ಪ್ರಧಾನಿಯಾಗಿದ್ದರಲ್ಲ ಹಾಗೆ. ಮೋದಿ ಇಲ್ಲದೆ ಚುನಾವಣೆ ಎದುರಿಸಿದರೆ ಬಿಜೆಪಿ 150 ಸ್ಥಾನಕ್ಕೆ ಕುಸಿತವಾಗಲಿದೆ. 2029ರ ಎಂಪಿ ಚುನಾವಣೆಯಲ್ಲಿ ಬಿಜೆಪಿ 150 ಸ್ಥಾನಕ್ಕೆ ಕುಸಿಯಲಿದೆ. ಮೋದಿಯಿಂದಾಗಿ ಬಡವರು ಬಿಜೆಪಿಯೊಂದಿಗೆ ಸೇರಿದ್ದಾರೆ. ನರೇಂದ್ರ ಮೋದಿ ಬಿಟ್ಟರೆ ಪಕ್ಷಕ್ಕೆ ಬೇರೆ ದಾರಿಯೇ ಇಲ್ಲ ಎಂದು ಹೇಳಿದ್ದಾರೆ.
ಮುಂದಿನ 15 -20 ವರ್ಷ ಮೋದಿಯೇ ಪಕ್ಷವನ್ನು ಮುನ್ನಡೆಸುತ್ತಾರೆ. ಬಿಜೆಪಿಗೆ ಮೋದಿಯೇ ಹೊರತು ಇನ್ನೊಂದು ದಾರಿ ಇಲ್ಲ. ಮೋದಿ ಇರುವವರೆಗೆ ಯೋಗಿಗೆ ದೆಹಲಿಯಲ್ಲಿ ಯಾವುದೇ ಹುದ್ದೆ ಖಾಲಿ ಇಲ್ಲ ಎಂದು ಹೇಳಿದ್ದಾರೆ.
75 ವರ್ಷದ ಬಳಿಕ ನಿವೃತ್ತಿ ಆಗಬೇಕು ಎಂದು ಆರ್‌ಎಸ್‌ಎಸ್ ಮುಖ್ಯಸ್ಥ ಮೋಹನ್ ಭಾಗವತ್ ಹೇಳಿದ್ದರು. ಮೋಹನ್ ಭಾಗವತ್ ಹೇಳಿಕೆಗೆ ನಿಶಿಕಾಂತ್ ದುಬೆ ಈ ರೀತಿ ಪ್ರತಿಕ್ರಿಯೆ ನೀಡಿದ್ದಾರೆ.