BIG NEWS: ಭ್ರಷ್ಟಾಚಾರಕ್ಕೆ ಜನ್ಮ ಕೊಟ್ಟಿದ್ದೇ ಕಾಂಗ್ರೆಸ್; ಮತದಾರರಿಗೆ ದಿನಕ್ಕೊಂದು ಘೋಷಣೆ ಆಮಿಷ; ಮಾನದಂಡ ಹಾಕಿದರೆ ಅವರೂ ಅಪರಾಧಿಗಳೇ ಎಂದ ಸಿಎಂ ಬೊಮ್ಮಾಯಿ

ಬೆಂಗಳೂರು: ರಾಜ್ಯ ಬಿಜೆಪಿ ನಾಯಕರ ಚುನಾವಣಾ ಅಕ್ರಮ, ಮತದಾರರಿಗೆ ಹಣದ ಆಮಿಷ ವಿಚಾರವಾಗಿ ಕಾಂಗ್ರೆಸ್ ನಾಯಕರು ದೂರು ನೀಡಿರುವ ವಿಚಾರವಾಗಿ ಪ್ರತಿಕ್ರಿಯಿಸಿರುವ ಸಿಎಂ ಬಸವರಾಜ್ ಬೊಮ್ಮಾಯಿ, ಮಾನದಂಡ ಹಾಕಿ ನೋಡಿದರೆ ಅವರೂ ಕೂಡ ಅಪರಾಧಿಗಳೇ ಎಂದು ಹೇಳಿದ್ದಾರೆ.

ಬೆಂಗಳೂರಿನಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಸಿಎಂ ಬೊಮ್ಮಾಯಿ, ಅಕ್ರಮ ಹಾಗೂ ಭ್ರಷ್ಟಾಚಾರಕ್ಕೆ ಜನ್ಮ ಕೊಟ್ಟಿದ್ದೇ ಕಾಂಗ್ರೆಸ್ ಎನ್ನುವುದು ಇಡೀ ರಾಷ್ಟ್ರಕ್ಕೆ ತಿಳಿದಿದೆ ಎಂದರು.

ಕಾಂಗ್ರೆಸ್ ಪಕ್ಷದವರು ಮಹಿಳೆಯರಿಗೆ 2 ಸಾವಿರ ರೂ.ಗಳನ್ನು ನೀಡುವುದಾಗಿ ಘೋಷಣೆ ಮಾಡಿದ್ದಾರೆ. ಉಚಿತ ವಿದ್ಯುತ್ ನೀಡುವುದಾಗಿ ಘೋಷಿಸಿದ್ದಾರೆ. ದಿನಕ್ಕೊಂದು ಘೋಷಣೆ ಮಾಡುತ್ತಿದ್ದಾರೆ. ಈ ಮಾನದಂಡ ಹಾಕಿದರೆ ಅವರೂ ಕೂಡ ಅಪರಾಧಿಗಳಾಗುವುದಿಲ್ಲವೇ? ಅವರೂ ಕೂಡ ಮತದಾರರಿಗೆ ಆಮಿಷಗಳನ್ನು ನೀಡುತ್ತಿಲ್ಲವೇ? ಎಂದು ಪ್ರಶ್ನಿಸಿದ್ದಾರೆ.

ಕಾಂಗ್ರೆಸ್ ನ ನಾಲ್ಕೈದು ಶಾಸಕರು ಅವರ ಫೋಟೋವುಳ್ಳ ಕುಕ್ಕರ್ ಮತದಾರರಿಗೆ ಕೊಟ್ಟಿರುವುದು ಸಾಕ್ಷಿ ಸಮೇತ ದೊರೆತಿದೆ. ಕುಣಿಗಲ್ ನಲ್ಲಿ ಸಿಕ್ಕು ವಾಣಿಜ್ಯ ತೆರಿಗೆ ಇಲಾಖೆಯವರು ಹಿಡಿದು ನಾಲ್ಕು ಜನರಿಗೆ ದಂಡ ವಿಧಿಸಿದ್ದಾರೆ. ಈ ಬಗ್ಗೆ ಸಮಗ್ರವಾಗಿ ಮಾಹಿತಿ ಪಡೆದು ತನಿಖೆ ಮಾಡಿಸುತ್ತೇವೆ. ತಮ್ಮ ಬಳಿ ಇಷ್ಟೆಲ್ಲ ತಪ್ಪು ಇಟ್ಟುಕೊಂಡು ಜನರಲ್ಲಿ ಗೊಂದಲವುಂಟು ಮಾಡುವಷ್ಟು ತಳಮಟ್ಟಕ್ಕೆ ಇಳಿದಿದ್ದಾರೆ ಕಾಂಗ್ರೆಸ್ ನವರು. ಸೋಲುತ್ತೇವೆ ಎನ್ನುವುದು ಅವರಿಗೆ ಗ್ಯಾರಂಟಿ ಆಗಿದೆ. ಹೀಗಾಗಿ ಈ ರೀತಿ ದೂರು ನೀಡುವ ಕೆಲಸ ಮಾಡುತ್ತಿದ್ದಾರೆ ಎಂದು ವಾಗ್ದಾಳಿ ನಡೆಸಿದ್ದಾರೆ.

Share This Article

Latest News

ಬಸನಗೌಡ ಪಾಟೀಲ್ ಯತ್ನಾಳ್ ಉಚ್ಚಾಟನೆಯಿಂದ ಬಿಜೆಪಿಗೆ ಹಿನ್ನಡೆಯಾಗುತ್ತದಾ ?

View Results

Loading ... Loading ...

Most Read