BIG NEWS: ಬೆಂಗಳೂರಿನಲ್ಲಿ ಹಬ್ಬದ ವಾತಾವರಣ; ಸಿಲಿಕಾನ್ ಸಿಟಿ ಕೇಸರಿಮಯ; ಪ್ರಧಾನಿ ಮೋದಿಗಾಗಿ ಪುರೋಹಿತರಿಂದ ಮಂತ್ರ ಪಠಣ

ಬೆಂಗಳೂರು: ರಾಜಧಾನಿ ಬೆಂಗಳೂರಿನಲ್ಲಿ ಇಂದು ಹಬ್ಬದ ವಾತಾವರಣ ನಿರ್ಮಾಣವಾಗಿದೆ. ಎಲ್ಲಿ ನೋಡಿದರಲ್ಲಿ ಮೋದಿ ಮೋದಿ ಜಯ ಘೋಷ ಕೇಳಿ ಬರುತ್ತಿದೆ. ಬೆಂಗಳೂರಿನ ಪ್ರಮುಖ ರಸ್ತೆಗಳಲ್ಲಿ ಪ್ರಧಾನಿ ನರೇಂದ್ರ ಮೋದಿ ರೋಡ್ ಶೋ ನಡೆಸಲಿದ್ದು, ಪ್ರಧಾನಿ ಮೋದಿ ಕಣ್ತುಂಬಿಕೊಳ್ಳಲು ಸಾಗರೋಪಾದಿಯಲ್ಲಿ ಜನರು ಹರಿದು ಬಂದಿದ್ದಾರೆ.

ಜಯನಗರದಲ್ಲಿ ಪ್ರಧಾನಿ ಮೋದಿಯವರಿಗಾಗಿ 10ಕ್ಕೂ ಹೆಚ್ವು ಪುರೋಹಿತರು ಮಂತ್ರ ಪಠಣೆ ಮಾಡುತ್ತಿದ್ದಾರೆ.

ರಾಜಧಾನಿ ಬೆಂಗಳೂರು ಸಂಪೂರ್ಣ ಕೆಸರಿಮಯವಾಗಿದ್ದು, ಕೆಸರಿ ಧ್ವಜ, ಬಿಜೆಪಿ ಬಾವುಟಗಳು ರಾರಾಜಿಸುತ್ತಿವೆ. ಮತ್ತೊಂದೆಡೆ ರಸ್ತೆಯುದ್ದಕ್ಕೂ ಕಲಾತಂಡಗಳು, ವಾದ್ಯ ತಂಡಗಳಿಂದ ವಾದ್ಯಗೋಷ್ಠಿಗಳು ಮೇಳೈಸಿವೆ.

Share This Article

Latest News

ಬಸನಗೌಡ ಪಾಟೀಲ್ ಯತ್ನಾಳ್ ಉಚ್ಚಾಟನೆಯಿಂದ ಬಿಜೆಪಿಗೆ ಹಿನ್ನಡೆಯಾಗುತ್ತದಾ ?

View Results

Loading ... Loading ...

Most Read