BIG NEWS: ಬೆಂಗಳೂರಿನಲ್ಲಿ ಮತ್ತೊಂದು ನೀಚ ಕೃತ್ಯ; ಯುವತಿ ಮೇಲೆ ಸ್ನೇಹಿತರಿಂದಲೇ ಅತ್ಯಾಚಾರ

ಬೆಂಗಳೂರು: ಯುವತಿಯ ಮೇಲೆ ಸ್ನೇಹಿತರಿಂದ ಅತ್ಯಾಚಾರ ನಡೆದಿರುವ ಘೋರ ಘಟನೆ ಬೆಂಗಳೂರಿನ ಗಿರಿನಗರದಲ್ಲಿ ನಡೆದಿದೆ.

ತುಮಕೂರು ಜಿಲ್ಲೆಯ ಕೊರಟಗೆರೆ ಮೂಲದ ಯುವಕ ಅದೇ ಊರಿನ ಯುವತಿ ಇಬ್ಬರ ನಡುವೆ ಪರಿಚಯ ಪ್ರೇಮಕ್ಕೆ ತಿರುಗಿದೆ. ಕಳೆದ ವಾರ ಯುವತಿ ಭೇಟಿಯಾಗಿದ್ದ ಯುವಕ ಮೊಬೈಲ್ ಪಡೆದುಕೊಂಡಿದ್ದ. ಎರಡು ದಿನಗಳ ಹಿಂದೆ ಯುವತಿ ಕರೆ ಮಾಡಿ ತನ್ನ ಮೊಬೈಲ್ ವಾಪಸ್ ಕೊಡುವಂತೆ ಕೇಳಿದ್ದಳು. ಮೆಜೆಸ್ಟಿಕ್ ಗೆ ಬಾ ಮೊಬೈಲ್ ಕೊಡುತ್ತೇನೆ ಎಂದು ಯುವಕ ನಂಬಿಸಿದ್ದ.

ಯುವಕನ ಮಾತು ಕೇಳಿ ಬೆಂಗಳೂರಿಗೆ ಬಂದ ಯುವತಿಯನ್ನು ಗಿರಿನಗರದ ಈರಣ್ಣಗುಡ್ಡೆಯ ಸ್ನೇಹಿತನ ರೂಮ್ ಗೆ ಕರೆದೊಯ್ದಿದ್ದ. ನನ್ನ ಮೊಬೈಲ್ ಕೊಡು ಊರಿಗೆ ಹೋಗಬೇಕು ಎಂದು ಯುವತಿ ಕೇಳಿದ್ದರು. ಮೊಬೈಲ್ ಕೊಡದೇ ಸತಾಯಿಸಿ ಯುವತಿ ಮೇಲೆ ಬಲವಂತವಾಗಿ ಯುವಕ ಲೈಂಗಿಕ ಕ್ರಿಯೆ ನಡೆಸಿದ್ದಾನೆ. ಬಳಿಕ ರೂಮಿಗೆ ಬಂದ ಯುವಕನ ಸ್ನೇಹಿತ, ಯುವತಿ ಮೇಲೆ ಅತ್ಯಾಚಾರ ನಡೆಸಲು ಯತ್ನಿಸಿದ್ದಾನೆ. ಯುವತಿ ಚೀರಾಟ ಕೇಳಿ ಅಕ್ಕಪಕ್ಕದ ಮನೆಯವರು ಸ್ಥಳಕ್ಕೆ ಆಗಮಿಸಿದ್ದಾರೆ. ಗಿರಿನಗರ ಠಾಣೆ ಪೊಲೀಸರಿಗೆ ಸ್ಥಳಿಯರು ಕರೆ ಮಾಡಿದ್ದಾರೆ. ಯುವತಿಯನ್ನು ರಕ್ಷಿಸಿ ಇಬ್ಬರು ಆರೋಪಿಗಳನ್ನು ಪೊಲೀಸರು ಬಂಧಿಸಿದ್ದಾರೆ.

 

Share This Article

Latest News

ಬಸನಗೌಡ ಪಾಟೀಲ್ ಯತ್ನಾಳ್ ಉಚ್ಚಾಟನೆಯಿಂದ ಬಿಜೆಪಿಗೆ ಹಿನ್ನಡೆಯಾಗುತ್ತದಾ ?

View Results

Loading ... Loading ...

Most Read