BIG NEWS: ಬಿಜೆಪಿ ನಾಯಕರಿಗೆ ವಿವೇಕದ ಪಾಠ ಮಾಡಿದ ಸಿಎಂ ಸಿದ್ದರಾಮಯ್ಯ

ಬೆಂಗಳೂರು: ಉಚಿತ ವಿದ್ಯುತ್ ವಿಚಾರವಾಗಿ ವಿಪಕ್ಷ ನಾಯಕರಿಂದ ಅಪಪ್ರಚಾರ ಮಾಡಲಾಗುತ್ತಿದೆ ಎಂದು ಸಿಎಂ ಸಿದ್ದರಾಮಯ್ಯ ಬಿಜೆಪಿ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ.

ಬೆಂಗಳೂರಿನಲ್ಲಿ ಪರಿಸರ ದಿನಾಚರಣೆ ಕಾರ್ಯಕ್ರಮದಲ್ಲಿ ಮಾತನಾಡಿದ ಸಿದ್ದರಾಮಯ್ಯ, ವರ್ಷದಲ್ಲಿ ಜನರು ಎಷ್ಟು ವಿದ್ಯುತ್ ಬಳಕೆ ಮಾಡುತ್ತಿದ್ದಾರೋ ವಾರ್ಷಿಕ ಸರಾಸರಿ ಮೇಲೆ ಹೆಚ್ಚುವರಿ 10% ಅವಕಾಶ ಕೊಟ್ಟಿದ್ದೇವೆ. ಅದರ ಮೇಲೆ ಹೆಚ್ಚುವರಿಯಾಗಿ ವಿದ್ಯುತ್ ಬಳಸಿದ್ರೆ ಬಿಲ್ ಕಟ್ಟಬೇಕು. ಆದ್ರೆ ವಿಪಕ್ಷಗಳು ಈ ಬಗ್ಗೆ ಅಪಪ್ರಚಾರ ಮಾಡುತ್ತಿದ್ದಾರೆ. 200 ಯುನಿಟ್ ಫ್ರೀ ಕೊಡ್ತೀವಿ ಅಂತಿದ್ರು ಎಂದು ಅಪಪ್ರಚಾರ ಮಾಡ್ತಿದ್ದಾರೆ. ನಿಯಮಿತವಾಗಿ ವಿದ್ಯುತ್ ಬಳಸಿ ಎನ್ನುವುದೂ ತಪ್ಪಾ? ಎಂದು ಪ್ರಶ್ನಿಸಿದ್ದಾರೆ.

ನಾನೊಬ್ಬನೇ ಬದುಕಿದರೆ ಸಾಲದು, ನನ್ನ ಸುತ್ತ ಇರುವವರು ಬದುಕಬೇಕು. ಮನುಷ್ಯರಿಗೆ ವಿವೇಕ ಇರಬೇಕು. ಅದಕ್ಕೆ ಕೆಲವು ನಿರ್ಬಂಧ ಅಗತ್ಯವಿದೆ ಎಂದು ಹೇಳುವ ಮೂಲಕ ಬಿಜೆಪಿ ನಾಯಕರಿಗೆ ವಿವೇಕದ ಪಾಠ ಮಾಡಿದ್ದಾರೆ.

Share This Article

Latest News

ಬಸನಗೌಡ ಪಾಟೀಲ್ ಯತ್ನಾಳ್ ಉಚ್ಚಾಟನೆಯಿಂದ ಬಿಜೆಪಿಗೆ ಹಿನ್ನಡೆಯಾಗುತ್ತದಾ ?

View Results

Loading ... Loading ...

Most Read