BIG NEWS: ಬಿಜೆಪಿ ತೊರೆದ ಹಿಂದಿನ ಕಾರಣಗಳನ್ನು ಎಳೆಎಳೆಯಾಗಿ ಬಿಚ್ಚಿಟ್ಟ ಜಗದೀಶ್ ಶೆಟ್ಟರ್…!

ಮಾಜಿ ಮುಖ್ಯಮಂತ್ರಿ ಜಗದೀಶ್ ಶೆಟ್ಟರ್ ಇಂದು ಕಾಂಗ್ರೆಸ್ ಸೇರ್ಪಡೆಯಾಗಿದ್ದು, ಈ ಮೂಲಕ ಬಿಜೆಪಿ ಜೊತೆಗಿನ ತಮ್ಮ 4 ದಶಕಗಳ ನಂಟು ಕಡಿದುಕೊಂಡಿದ್ದಾರೆ. ಕೆಪಿಸಿಸಿ ಕಛೇರಿಯಲ್ಲಿ ನಡೆದ ಸಮಾರಂಭದಲ್ಲಿ ಮಲ್ಲಿಕಾರ್ಜುನ ಖರ್ಗೆ ಸಮ್ಮುಖದಲ್ಲಿ ಕಾಂಗ್ರೆಸ್ ಸೇರ್ಪಡೆಗೊಂಡ ಅವರು, ಬಳಿಕ ಮಾಧ್ಯಮಗೋಷ್ಠಿಯಲ್ಲಿ ಮಾತನಾಡಿ ತಾವು ಬಿಜೆಪಿ ತೊರೆದ ಹಿಂದಿನ ಕಾರಣಗಳನ್ನು ಎಳೆ ಎಳೆಯಾಗಿ ಬಿಚ್ಚಿಟ್ಟಿದ್ದಾರೆ.

ಕರ್ನಾಟಕ ಬಿಜೆಪಿ ಕಚೇರಿ ಕೆಲವೇ ಕೆಲವು ವ್ಯಕ್ತಿಗಳ ವಶದಲ್ಲಿದ್ದು, ಸ್ವಾರ್ಥ ಸಾಧನೆಗಾಗಿ ಪಕ್ಷ ಕಟ್ಟಿ ಬೆಳೆಸಿದವರನ್ನು ಕಡೆಗಣಿಸುತ್ತಿದ್ದಾರೆ. ಈ ಎಲ್ಲ ವಿದ್ಯಮಾನ ಬಿಜೆಪಿ ಕೇಂದ್ರ ನಾಯಕರ ಗಮನಕ್ಕೆ ಬರುತ್ತಿಲ್ಲ. ಬಿಜೆಪಿ ಯಶಸ್ಸು ಈಗ ವ್ಯಕ್ತಿ ಕೇಂದ್ರಿತವಾಗುತ್ತಿದೆ ಎಂದು ಹೇಳಿದ ಜಗದೀಶ್ ಶೆಟ್ಟರ್, ಈ ನಾಯಕರುಗಳೇ ರಾಜ್ಯ ಬಿಜೆಪಿಯನ್ನು ಕಂಟ್ರೋಲ್ ಮಾಡುತ್ತಿದ್ದಾರೆ ಎಂದರು.

ಬಿಜೆಪಿ ಏಳಿಗೆಗೆ ನಾನು ಹಗಲಿರುಳು ದುಡಿದಿದ್ದೇನೆ. ಆ ಪಕ್ಷವೂ ಸಹ ನನಗೆ ಅಧಿಕಾರ ನೀಡಿದೆ. ನಾನು ಮೋದಿ, ಶಾ, ನಡ್ಡಾ ಅವರ ವಿರುದ್ಧ ಟೀಕೆ ಮಾಡುವುದಿಲ್ಲ. ನನಗೆ ಟಿಕೆಟ್ ನೀಡುವುದಿಲ್ಲ ಎಂದು ಮೊದಲೇ ಹೇಳಿದ್ದರೆ ನನಗೆ ಬೇಸರವಾಗುತ್ತಿರಲಿಲ್ಲ. ಆದರೆ ಕೊನೆ ಕ್ಷಣದಲ್ಲಿ ಈ ವಿಷಯ ಹೇಳಿ ಅವಮಾನ ಮಾಡಿದರು ಎಂದು ಶೆಟ್ಟರ್ ಆರೋಪಿಸಿದರು.

ನನಗೆ ಟಿಕೆಟ್ ನೀಡದೆ ಪಕ್ಷದಿಂದ ಹೊರ ಹಾಕುವ ಷಡ್ಯಂತ್ರವನ್ನು ಕೆಲವರು ರೂಪಿಸಿದ್ದರು. ಆರು ಬಾರಿ ಚುನಾವಣೆಯಲ್ಲಿ ಗೆದ್ದಿರುವ ನಾನು ಈ ಬಾರಿ ಸ್ಪರ್ಧಿಸಿ ಮತ್ತೊಮ್ಮೆ ಗೆದ್ದರೆ ವೈಯಕ್ತಿಕ ಹಿತಾಸಕ್ತಿ ಸಾಧಿಸಲು ಸಾಧ್ಯವಾಗುವುದಿಲ್ಲ ಎಂಬ ಕಾರಣಕ್ಕೆ ಈ ರೀತಿ ಮಾಡಿದ್ದರು ಎಂದ ಶೆಟ್ಟರ್, ಇದೆಲ್ಲದರಿಂದ ಬೇಸತ್ತು ಕಾಂಗ್ರೆಸ್ ಪಕ್ಷದ ತತ್ವ ಸಿದ್ಧಾಂತಗಳನ್ನು ಒಪ್ಪಿಕೊಂಡು ಯಾವುದೇ ಷರತ್ತುಗಳಿಲ್ಲದೆ ಸೇರ್ಪಡೆಯಾಗಿದ್ದೇನೆ ಎಂದರು.

Share This Article

Latest News

ಬಸನಗೌಡ ಪಾಟೀಲ್ ಯತ್ನಾಳ್ ಉಚ್ಚಾಟನೆಯಿಂದ ಬಿಜೆಪಿಗೆ ಹಿನ್ನಡೆಯಾಗುತ್ತದಾ ?

View Results

Loading ... Loading ...

Most Read