BIG NEWS: ಬಿಜೆಪಿ ಅಯೋಗ್ಯ ಸರ್ಕಾರ; ಪ್ರಜಾಪ್ರಭುತ್ವದ ಆತ್ಮವನ್ನೇ ಕಸಿಯುತ್ತಿದೆ; ಹೆಚ್. ವಿಶ್ವನಾಥ್ ಆಕ್ರೋಶ

ಹುಬ್ಬಳ್ಳಿ: ಈ ರೀತಿ ಹೇಳಿಕೆಗಳನ್ನು ನೀಡುವುದು ರಮೇಶ್ ಜಾರಕಿಹೊಳಿಗೂ ಗೌರವವಲ್ಲ. ಯಾರೂ ಯಾರನ್ನೂ ಮುಗಿಸಲು ಆಗಲ್ಲ. ಜಾರಕಿಹೊಳಿ ಹೇಳಿಕೆಗಳು ಸರಿಯಲ್ಲ ಎಂದು ಎಂ ಎಲ್ ಸಿ ಹೆಚ್. ವಿಶ್ವನಾಥ್ ತಿಳಿಸಿದ್ದಾರೆ.

ಹುಬ್ಬಳ್ಳಿಯಲ್ಲಿ ಮಾತನಾಡಿದ ಅವರು, ನಾವೆಲ್ಲ ಒಟ್ಟಾಗಿಯೇ ಇದ್ದವರು. ರಮೇಶ್ ಹಾಗೆಲ್ಲ ಮಾತನಾಡಬಾರದು. ನಾವೆಲ್ಲರೂ ಬಂದು ಬಿಜೆಪಿ ಸರ್ಕಾರ ರಚನೆ ಮಾಡಿದ್ದೇವೆ. ಜನ ಎಲ್ಲವನ್ನೂ ನೋಡುತ್ತಿದ್ದಾರೆ. ಅವರು ಚುನಾವಣೆಯಲ್ಲಿ ಏನು ಬೇಕಾದರೂ ಮಾಡಬಹುದು. ರಾಜಕೀಯವಾಗಿ ಇನ್ನೊಬ್ಬರನ್ನು ನಾವು ಮುಗಿಸುತ್ತೇವೆ ಎಂಬುದು ಸರಿಯಲ್ಲ ಎಂದು ಹೇಳಿದರು.

ಇದೇ ವೇಳೆ ರಾಜ್ಯ ಸರ್ಕಾರದ ವಿರುದ್ಧ ವಾಗ್ದಾಳಿ ನಡೆಸಿದ ವಿಶ್ವನಾಥ್, ಸರ್ಕಾರ ಶಿಕ್ಷಣ ವ್ಯವಸ್ಥೆ ಹಾಳುಮಾಡಲು ಹೊರಟಿದೆ. ಶಾಲೆಗೆ ಕಾವಿ ಬಣ್ಣ ಹೊಡೆಯುವುದು ಯೋಜನೇನಾ ? ಬರಿ ಈ ಸರ್ಕಾರದಲ್ಲಿ ದುಡ್ದು, ದುಡ್ಡು. ಇದು ಸರ್ಕಾರನಾ ? ಚುನಾವಣೆ ಪ್ರಜಾಪ್ರಭುತ್ವದ ಆತ್ಮ. ಆದರೆ ಬಿಜೆಪಿ ಅಯೋಗ್ಯ ಸರ್ಕಾರ ಆತ್ಮವನ್ನೇ ಕಸಿಯುತ್ತಿದೆ. ಮತದಾರರ ಹೆಸರನ್ನೇ ಡಿಲಿಟ್ ಮಾಡಿ ಆತ್ಮವನ್ನೇ ಕಸಿಯುತ್ತಿದೆ ಎಂದು ಆಕ್ರೋಶ ವ್ಯಕ್ತಪಡಿಸಿದರು.

Share This Article

Latest News

ಬಸನಗೌಡ ಪಾಟೀಲ್ ಯತ್ನಾಳ್ ಉಚ್ಚಾಟನೆಯಿಂದ ಬಿಜೆಪಿಗೆ ಹಿನ್ನಡೆಯಾಗುತ್ತದಾ ?

View Results

Loading ... Loading ...

Most Read