BIG NEWS: ಬಾಡೂಟ ಉಂಡು, ಕಂಠಪೂರ್ತಿ ಕುಡಿದು ಎಲ್ಲೆಂದರಲ್ಲಿ ಮಲಗಿದ ಜನರು

ಬೇಲೂರು: ವಿಧಾನಸಭಾ ಚುನಾವಣೆ ಸಮೀಪಿಸುತ್ತಿದ್ದಂತೆ ರಾಜಕೀಯ ಪಕ್ಷಗಳ ನಾಯಕರು ಮತದಾರರ ಓಲೈಕೆಗಾಗಿ ಇನ್ನಿಲ್ಲದ ಕಸರತ್ತು ನಡೆಸಿದ್ದಾರೆ. ಮತದಾರರ ಮನಗೆಲ್ಲಲು ಭರ್ಜರಿ ಗಿಫ್ಟ್, ಸೀರೆ ಹಂಚಿಕೆ, ದಿನಕ್ಕೊಂದು ಬಾಡೂಟ ಹೀಗೆ ವಿವಿಧ ಆಮಿಷಗಳನ್ನು ಒಡ್ಡುತ್ತಿದ್ದಾರೆ. ಚುನಾವಣಾ ಅಖಾಡದಲ್ಲಿ ಮದ್ಯದ ಹೊಳೆಯೂ ಹರಿಯುತ್ತಿರುವ ಶಂಕೆ ವ್ಯಕ್ತವಾಗಿದೆ.

ಇಂದು ಹಾಸನ ಜಿಲ್ಲೆಯ ಬೇಲೂರಿನಲ್ಲಿ ಬಿಜೆಪಿ ವಿಜಯ ಸಂಕಲ್ಪ ಯಾತ್ರೆ ಆಯೋಜಿಸಲಾಗಿತ್ತು. ಈ ಹಿನ್ನೆಲೆಯಲ್ಲಿ ಬೇಲೂರು ಬಿಜೆಪಿ ಟಿಕೆಟ್ ಆಕಾಂಕ್ಷಿ ಹೆಚ್.ಕೆ.ಸುರೇಶ್ ನಿನ್ನೆ ಭರ್ಜರಿ ಬಾಡೂಟ ಆಯೋಜನೆ ಮಾಡಿದ್ದರು. ಬೇಲೂರಿನ ಅಗಸರಹಳ್ಳಿ ಬಾರೆಯಲ್ಲಿ ಬಾಡೂಟ ಆಯೋಜಿಸಿದ್ದು, ಕಂಠಪೂರ್ತಿ ಕುಡಿದು, ಬಾಡೂಟ ಉಂಡ ಜನರು ಅಮಲಲ್ಲಿ ತೇಲಾಡಿದ್ದು, ರಸ್ತೆಗಳಲ್ಲಿ, ಮೈದಾನದಲ್ಲಿ ಎಲ್ಲೆಂದರಲ್ಲಿ ಮಲಗಿರುವ ದೃಶ್ಯ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ.

ಬಾಡೂಟಕ್ಕೆ ಬರುವ ಮೊದಲೇ ಹಲವರು ಕಂಠಪೂರ್ತಿ ಕುಡಿದು ಬಂದಿದ್ದು, ಊಟದ ಸ್ಥಳಕ್ಕೆ ಬರುತ್ತಿದ್ದಂತೆ ನೆಲಕ್ಕುರುಳಿ ಬಿದ್ದಿದ್ದಾರೆ ಎನ್ನಲಾಗಿದೆ. ಪ್ರತಿದಿನ ಒಂದೊಂದು ಪಂಚಾಯ್ತಿ ವ್ಯಾಪ್ತಿಯಲ್ಲಿ ಬಾಡೂಟ ಆಯೋಜನೆ ಮಾಡಲಾಗುತ್ತಿದೆ ಎಂದು ತಿಳಿದು ಬಂದಿದೆ. ಈ ಎಲ್ಲಾ ಬೆಳವಣಿಗೆ ಬೆನ್ನಲ್ಲೇ ಬೇಲೂರು ವ್ಯಾಪ್ತಿಯ ಇಂದಿನ ಬಿಜೆಪಿ ವಿಜಯ ಸಂಕಲ್ಪ ಯಾತ್ರೆ ದಿಢೀರ್ ರದ್ದಾಗಿದೆ ಎಂದು ತಿಳಿದುಬಂದಿದೆ.

Share This Article

Latest News

ಬಸನಗೌಡ ಪಾಟೀಲ್ ಯತ್ನಾಳ್ ಉಚ್ಚಾಟನೆಯಿಂದ ಬಿಜೆಪಿಗೆ ಹಿನ್ನಡೆಯಾಗುತ್ತದಾ ?

View Results

Loading ... Loading ...

Most Read