BIG NEWS: ಪಬ್ ಗಳಲ್ಲಿ ಮಹಿಳೆಯರಿಗೆ ‘ಉಚಿತ’ ಮದ್ಯ ಘೋಷಿಸಿದ ಮಾಲೀಕರು

ಬೆಂಗಳೂರು: ಎಲ್ಲಿಗೆ ಬಂತು ಕಾಲ ನೋಡಿ…… ಶಕ್ತಿ ಯೋಜನೆಯಡಿ ಸರ್ಕಾರ ಮಹಿಳೆಯರಿಗೆ ಉಚಿತ ಬಸ್ ಪ್ರಯಾಣ ಘೋಷಿಸಿರುವ ಬೆನ್ನಲ್ಲೇ ಬೆಂಗಳೂರಿನ ಕೆಲ ಪಬ್ ಮಾಲೀಕರು ಮಹಿಳೆಯರಿಗಾಗಿ ಉಚಿತ ಮದ್ಯದ ಆಫರ್ ನೀಡುತ್ತಿದ್ದಾರೆ.

ಕೋರಮಂಗಲ, ಇಂದಿರಾ ನಗರ, ವೈಟ್ ಫೀಲ್ಡ್, ಬ್ರಿಗೇಡ್ ರಸ್ತೆ, ಚರ್ಚ್ ಸ್ಟ್ರೀಟ್, ಎಂ.ಜಿ.ರಸ್ತೆ ಹಾಗೂ ಇತರೆ ಪ್ರಮುಖ ಪ್ರದೇಶಗಳಲ್ಲಿ ಕೆಲ ಪಬ್ ಗಳ ಮಾಲಿಕರು ಗ್ರಾಹಕರನ್ನು ಸೆಳೆಯಲು ಮಹಿಳೆಯರಿಗೆ ಉಹಿತ ಮದ್ಯ ನೀಡಲು ನಿರ್ಧರಿಸಿದ್ದಾರೆ.

ವಾರಾಂತ್ಯದ ಹಾಗೂ ವಿಶೇಷ ಪಾರ್ಟಿಯಲ್ಲಿ ಭಾಗವಹಿಸುವ ಮಹಿಳೆಯರಿಗೆ ಉಚಿತ ಮದ್ಯ ಪೂರೈಸಲಾಗುತ್ತಿದೆ. ಆದರೆ ಟಿಕೆಟ್ ಕಾಯ್ದಿರಿಸುವುದು ಕಡ್ಡಾಯ. ಈ ಬಗ್ಗೆ ಜಾಹೀರಾತನ್ನೂ ನೀಡಲಾಗಿದೆ. ಮಹಿಳೆಯರಿಗೆ ಉಚಿತ ಮದ್ಯ ನೀಡುವುದರಿಂದ ಪಬ್ ಆದಾಯ ವೃದ್ಧಿಯಾಗುವ ಭರವಸೆ ಇದೆ. ಎಂದು ಕೋರಮಂಗಲದ ಪಬ್ ವೊಂದರ ವ್ಯವಸ್ಥಾಪಕ ರಾಬರ್ಟ್ ತಿಳಿಸಿದ್ದಾರೆ.

ಮಹಿಳೆಯರು ಇರುವ ಪಬ್ ಗಳಿಗೆ ಮಾತ್ರ ಪುರುಷರು ಬರುತ್ತಾರೆ. ಮಹಿಳೆಯರು ಇಲ್ಲದಿದ್ದರೆ ಪುರುಷರು ಬರುವುದಿಲ್ಲ. ಹಾಗಾಗಿ ಮದ್ಯ ಉಚಿತವಿದ್ದರೆ ಮಹಿಳೆಯರು ಪಬ್ ಗಳಿಗೆ ಬರುತ್ತಾರೆ. ಆಗ ಪುರುಷ ಗ್ರಾಹಕರ ಸಂಖ್ಯೆಯೂ ಹೆಚ್ಚಾಗಲಿದೆ ಎಂಬುದು ಪಬ್ ವೊಂದರ ಉದ್ಯೋಗಿ ಅಭಿಪ್ರಾಯ.

Share This Article

Latest News

ಬಸನಗೌಡ ಪಾಟೀಲ್ ಯತ್ನಾಳ್ ಉಚ್ಚಾಟನೆಯಿಂದ ಬಿಜೆಪಿಗೆ ಹಿನ್ನಡೆಯಾಗುತ್ತದಾ ?

View Results

Loading ... Loading ...

Most Read