BIG NEWS: ನಟ ಸುದೀಪ್ ಜಾಹೀರಾತು – ಚಿತ್ರ ಪ್ರಸಾರ ಕುರಿತಂತೆ ಚುನಾವಣಾ ಆಯೋಗದಿಂದ ಮಹತ್ವದ ಹೇಳಿಕೆ

ಮುಂಬರುವ ವಿಧಾನಸಭಾ ಚುನಾವಣೆಯಲ್ಲಿ ಖ್ಯಾತ ನಟ ಕಿಚ್ಚ ಸುದೀಪ್, ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಹಾಗೂ ಅವರು ಸೂಚಿಸಿದ ಅಭ್ಯರ್ಥಿಗಳ ಪರ ಪ್ರಚಾರ ಕಾರ್ಯದಲ್ಲಿ ಪಾಲ್ಗೊಳ್ಳುವುದಾಗಿ ಹೇಳಿದ್ದು, ಹೀಗಾಗಿ ಅವರ ಜಾಹೀರಾತು ಹಾಗೂ ಚಿತ್ರ ಪ್ರದರ್ಶನಕ್ಕೆ ತಡೆ ನೀಡುವಂತೆ ಕೋರಲಾಗಿತ್ತು.

ಇದೀಗ ಚುನಾವಣಾ ಆಯೋಗ ಈ ಕುರಿತಂತೆ ಮಹತ್ವದ ಹೇಳಿಕೆ ನೀಡಿದ್ದು, ಸುದೀಪ್ ಅವರ ಜಾಹೀರಾತುಗಳು ಅಥವಾ ರಿಯಾಲಿಟಿ ಶೋಗಳ ಪ್ರದರ್ಶನಕ್ಕೆ ಯಾವುದೇ ನಿರ್ಬಂಧ ಇಲ್ಲವೆಂದು ಸ್ಪಷ್ಟಪಡಿಸಲಾಗಿದೆ.

ಚುನಾವಣೆಗೆ ಸ್ಪರ್ಧಿಸುವ ಅಥವಾ ಟಿವಿಗಳಲ್ಲಿ ಪ್ರಚಾರ ಮಾಡುವ ನಟರನ್ನು ಮಾತ್ರ ವಾಣಿಜ್ಯ ಪ್ರದರ್ಶನದಿಂದ ನಿರ್ಬಂಧಿಸಬಹುದಾಗಿದೆ ಎಂದು ಚುನಾವಣಾ ಆಯೋಗ ತಿಳಿಸಿದ್ದು, ಹೀಗಾಗಿ ಸುದೀಪ್ ಅವರ ಜಾಹೀರಾತು ಹಾಗೂ ರಿಯಾಲಿಟಿ ಶೋಗಳ ಪ್ರದರ್ಶನ ಎಂದಿನಂತೆ ಮುಂದುವರೆಯಲಿದೆ.

Share This Article

Latest News

ಬಸನಗೌಡ ಪಾಟೀಲ್ ಯತ್ನಾಳ್ ಉಚ್ಚಾಟನೆಯಿಂದ ಬಿಜೆಪಿಗೆ ಹಿನ್ನಡೆಯಾಗುತ್ತದಾ ?

View Results

Loading ... Loading ...

Most Read