BIG NEWS: ದಾಖಲೆಗಳಿದ್ದರೆ ತಲೆ ಮೇಲೆ ಹಾಕಿಕೊಳ್ಳಲಿ; ರಮೇಶ್ ಜಾರಕಿಹೊಳಿ ಒಬ್ಬ ಡಮ್ಮಿ ಪೀಸ್; MLC ರವಿ ವಾಗ್ದಾಳಿ

ಬೆಂಗಳೂರು: ಮಾಜಿ ಸಚಿವ ರಮೇಶ್ ಜಾರಕಿಹೊಳಿ ವಿರುದ್ಧ ಹಿಗ್ಗಾ ಮುಗ್ಗಾ ವಾಗ್ದಾಳಿ ನಡೆಸಿರುವ ಕಾಂಗ್ರೆಸ್ ಎಂ ಎಲ್ ಸಿ ರವಿ, ಯಾರ್ರೀ ಅವನು ರಮೇಶ್ ಜಾರಕಿಹೊಳಿ, ಆತನದ್ದು ಒಂದು ಜನ್ಮಾನಾ? ಅಂತ ಜನ ಉಗಿಯುತ್ತಿದ್ದಾರೆ ಎಂದು ಕಿಡಿಕಾರಿದ್ದಾರೆ.

ಬೆಂಗಳೂರಿನಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಎಂಎಲ್ ಸಿ ರವಿ, ಸರ್ಕಾರವನ್ನು ಬೀಳಿಸಿ ಮತ್ತೊಂದು ಪಕ್ಷವನ್ನು ಅಧಿಕಾರಕ್ಕೆ ತಂದವನು ರಮೇಶ್ ಜಾರಕಿಹೊಳಿ. ತನ್ನ ಬಳಿ ದಾಖಲೆಯಿದೆ ಎಂದು ದಿನವೊಂದು ಹೇಳಿಕೆ ಕೊಟ್ಟು ಓಡಾಡುತ್ತಿದ್ದಾನೆ. ಅವನ ಬಳಿ ದಾಖಲೆಗಳಿದ್ದರೆ ತಲೆ ಮೇಲೆ ಹಾಕಿಕೊಳ್ಳಲಿ. ಇಲ್ಲವಾದರೆ ಪ್ರತಿ ದಿನ ಒಂದೊಂದು ದಾಖಲೆ ಬಿಡುಗಡೆ ಮಾಡಲಿ. ಏನು ಬೇಕಾದರೂ ಮಾಡಲಿ ಆತನಿಗೆ ಯಾರೂ ಹೆದರುವುದಿಲ್ಲ ಎಂದು ಹೇಳಿದ್ದಾರೆ.

ರಮೇಶ್ ಜಾರಕಿಹೊಳಿ ಬಗ್ಗೆ ಇಡೀ ರಾಜ್ಯದ ಜನತೆಗೊತ್ತು. ಕಚಡಾ ಅವನು, ಜನ ಆತನಿಗೆ ಛೀ, ಥೂ ಎಂದು ಉಗಿಯುತ್ತಿದ್ದಾರೆ. ಅವನ್ದು ಒಂದು ಜನ್ಮಾನಾ… ರಮೇಶ್ ಜಾರಕಿಹೊಳಿ ಒಬ್ಬ ಡಮ್ಮಿ ಪೀಸ್ ಎಂದು ಬೈದಿದ್ದಾರೆ.

Share This Article

Latest News

ಇದೇ ಅವಧಿಯಲ್ಲಿ ಮುಖ್ಯಮಂತ್ರಿಯಾಗಲಿದ್ದಾರಾ ಡಿ.ಕೆ. ಶಿವಕುಮಾರ್‌ ?

View Results

Loading ... Loading ...

Most Read